ಇಂದು ಭಾರತ-ಪಾಕ್ ಮ್ಯಾಚ್ ನಡಿಯೋದೇ ಡೌಟ್! ಹವಾಮಾನ ವರದಿ ಏನು? ಮ್ಯಾಚ್ ರದ್ದಾದ್ರೆ ಯಾರಿಗೆ ಲಾಭ?

ಇಂದು ಭಾರತ-ಪಾಕ್ ಮ್ಯಾಚ್ ನಡಿಯೋದೇ ಡೌಟ್! ಹವಾಮಾನ ವರದಿ ಏನು? ಮ್ಯಾಚ್ ರದ್ದಾದ್ರೆ ಯಾರಿಗೆ ಲಾಭ?

ಇಂದು ಭಾರತ-ಪಾಕ್ ಮ್ಯಾಚ್ ನಡಿಯೋದೇ ಡೌಟ್! ಹವಾಮಾನ ವರದಿ ಏನು? ಮ್ಯಾಚ್ ರದ್ದಾದ್ರೆ ಯಾರಿಗೆ ಲಾಭ?

ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಪಂದ್ಯಕ್ಕೆ ಈಗ ಮಳೆಯ ಭೀತಿ ಎದುರಾಗಿದೆ. ಫೆಬ್ರವರಿ 15 ರಂದು ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಗ್ರೂಪ್ ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಮಳೆಯಿಂದಾಗಿ ನಡೆಯೋದೇ ಡೌಟ್ ಎನ್ನಲಾಗ್ತಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಮ್ಯಾಚ್ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ ಮ್ಯಾಚ್ ಎಲ್ಲಾ ಟಿಕೆಟ್‌ಗಳು ಸೋಲ್ಡೌಟ್ ಆಗಿವೆ. ಹೀಗಿರುವಾಗಲೇ ಈ ಮ್ಯಾಚ್ ನಡೆಯೋದೇ ಡೌಟ್ ಎನ್ನಲಾಗ್ತಿದೆ. ಕಾರಣ ಈ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ.

ಹವಾಮಾನ ವರದಿ ಪ್ರಕಾರ, ಫೆಬ್ರವರಿ 15ರಂದು ದಿನವಿಡೀ ಆಗಾಗ ಮಳೆ ಬರಬಹುದು. ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಶೇ. 50-60ರಷ್ಟು ಮಳೆಯ ಸಾಧ್ಯತೆಯಿದೆ. ಸಂಜೆ 7ರಿಂದ ರಾತ್ರಿ 12ರವರೆಗೆ (ಪಂದ್ಯದ ವೇಳೆ) ಶೇ. 10-20ರಷ್ಟು ಮಳೆಯಾಗುವ ಸೂಚನೆಯಿದೆ. ಹೀಗಾಗಿ ಪಂದ್ಯ ಆರಂಭವಾದರೂ, ಮಳೆಯಿಂದಾಗಿ ಮಧ್ಯದಲ್ಲಿ ನಿಲ್ಲುವ ಸಾಧ್ಯತೆಯಿದೆ.

ಫೆಬ್ರವರಿ 14ರಂದು ಕೂಡ ಕೊಲಂಬೊದಲ್ಲಿ ವಾತಾವರಣ ಸಂಪೂರ್ಣವಾಗಿ ತಿಳಿಯಾಗಿಲ್ಲ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಶೇ. 30-35ರಷ್ಟು ಮಳೆಯ ಮುನ್ಸೂಚನೆ ಇತ್ತು. ಸಂಜೆ ವೇಳೆಗೆ ಇದು ಕಡಿಮೆಯಾಗುವ ನಿರೀಕ್ಷೆಯಿದ್ದರೂ, ಸಂಪೂರ್ಣ ವಾತಾವರಣದ ಗ್ಯಾರಂಟಿ ಇಲ್ಲ. ಇದು ಪಿಚ್ ಮತ್ತು ಔಟ್‌ಫೀಲ್ಡ್ ಮೇಲೆ ಪರಿಣಾಮ ಬೀರಬಹುದು.

ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಉತ್ತಮ ಫಾರ್ಮ್‌ನಲ್ಲಿವೆ. ಭಾರತ ತನ್ನ ಆರಂಭಿಕ 2 ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಲ್ಲಿದೆ. ಪಾಕಿಸ್ತಾನ ಕೂಡ ತನ್ನ ಎರಡೂ ಪಂದ್ಯಗಳನ್ನು ಗೆದ್ದು ಬಲಿಷ್ಠ ಆರಂಭ ಪಡೆದಿದೆ. ಫೆಬ್ರವರಿ 15ರಂದು ಗೆಲ್ಲುವ ತಂಡ, ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ 1 ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲಿದೆ. ಇದರ ಜತೆಗೆ ಸೂಪರ್ 8 ಹಾದಿಯನ್ನು ಖಚಿತಪಡಿಸಿಕೊಳ್ಳಲಿವೆ

ಗ್ರೂಪ್ ಹಂತದ ಪಂದ್ಯಗಳಿಗೆ ಮೀಸಲು ದಿನ ಇರುವುದಿಲ್ಲ. ಹೀಗಾಗಿ, ಈ ಪಂದ್ಯಕ್ಕೂ ರಿಸರ್ವ್ ಡೇ ಇಲ್ಲ. ಒಂದು ವೇಳೆ ಮಳೆಯಿಂದಾಗಿ ಪಂದ್ಯ ಪೂರ್ಣಗೊಳ್ಳದಿದ್ದರೆ, ಎರಡೂ ತಂಡಗಳಿಗೆ ತಲಾ 1 ಅಂಕವನ್ನು ಹಂಚಲಾಗುತ್ತದೆ.

ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಇದುವರೆಗೆ 8 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 7 ಬಾರಿ ಗೆದ್ದರೆ, ಪಾಕಿಸ್ತಾನ ಕೇವಲ 1 ಬಾರಿ ಮಾತ್ರ ಗೆಲುವು ಸಾಧಿಸಿದೆ. ಪಾಕಿಸ್ತಾನದ ಏಕೈಕ ಗೆಲುವು 2021ರಲ್ಲಿ ದುಬೈನಲ್ಲಿ ಬಂದಿತ್ತು. ಭಾರತ 2007ರ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಟ್ರೋಫಿ ಗೆದ್ದಿತ್ತು. ಇಂದಿನ ಮ್ಯಾಚ್ ಭಾರತೀಯ ಕಾಲಮಾನ 7 ಗಂಟೆಗೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್‌ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪಂದ್ಯ ವೀಕ್ಷಿಸಬಹುದಾಗಿದೆ.

Source link

Leave a Reply

Your email address will not be published. Required fields are marked *