ಮೈತ್ರಿಯಲ್ಲಿ ಮುಂದುವರಿದ ಗೊಂದಲಚಿತ್ರ ಕ್ರೆಡಿಟ್ ಮೂಲ: ಟಿವಿ9 ಕನ್ನಡ
ಬೆಂಗಳೂರು, ಫೆಬ್ರವರಿ 15: ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನ ಮೈತ್ರಿ ನಾಯಕರಲ್ಲಿ ಗೊಂದಲದ ನಡುವೆ ಜಿಬಿಎ ಎಲೆಕ್ಷನ್ ಗೆ ಜೆಡಿಎಸ್ ತಯಾರಿ ನಡೆಸಿದೆ. ಸೀಟು ಹಂಚಿಕೆಯಲ್ಲಿ ಸಮನ್ವಯತೆ ಮೂಡದಿದ್ರೂ ಏನು ಮಾಡಬೇಕೆಂಬ ಬಗ್ಗೆ ಪ್ಲ್ಯಾನ್ ಎ ಮತ್ತು ಪ್ಲ್ಯಾನ್ ಬಿ ಸಿದ್ಧವಾಗಿದೆ, 85 ರಿಂದ 100 ವಾರ್ಡ್ಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸಲು ಹೆಚ್.ಡಿ. ಕುಮಾರಸ್ವಾಮಿ ತಯಾರಿ. ಅದಕ್ಕೆ ಪೂರಕವಾಗಿ ಎರಡು ಸಭೆ ಮಾಡಿರುವ ಕೇಂದ್ರ ಸಚಿವರು, ಸೀಟು ಹಂಚಿಕೆ ವೇಳೆ ಬಿಜೆಪಿ ಬಳಿ ಕನಿಷ್ಠ 70ರಿಂದ 80 ಸೀಟು ಕೇಳಲು ನಿರ್ಧರಿಸಲಾಗಿದೆ. ಅಷ್ಟು ಕ್ಷೇತ್ರ ಬಿಟ್ಟುಕೊಟ್ಟರೆ ಮೈತ್ರಿಯಾಗಿ ಚುನಾವಣಾ ಹೋರಾಟ, ಪರ್ಯಾಯವಾಗಿ ಸ್ಪರ್ಧೆಗೆ ಚಿಂತನೆ ಇಲ್ಲ. 5 ಪಾಲಿಕೆಗಳ 369 ವಾರ್ಡ್ ಗಳ ಸಿದ್ಧತೆ ನಡೆಸಲು ಬೆಂಗಳೂರಿನ ಜೆಡಿಎಸ್ ಸಂಸ್ಥೆ ಮತ್ತು ಕಾರ್ಯಕರ್ತರಿಗೆ ಹೆಚ್ಚಿನ ಕರೆ ನೀಡಿದ್ದು, ಮೈತ್ರಿ ನಾಯಕರ ಮುಂದಿನ ನಡೆ ಕುತೂಹಲ ಮೂಡಿಸಿದೆ.
ಮತ್ತೊಂದೆಡೆ ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷಗಳು ಬಾಕಿ ಇರುವಾಗಲೇ, 2028ರ ಮುಖ್ಯಮಂತ್ರಿ ಹುದ್ದೆಗೆ ಮೈತ್ರಿ ಮಾಡಿಕೊಳ್ಳಲು ಪೈಪೋಟಿ ಶುರುವಾಗಿದೆ. ವಿಧಾನಸಭೆ ಚುನಾವಣಾ ಮೈತ್ರಿಕೂಟದ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲದಿದ್ದರೂ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದಲ್ಲಿ 2028ರ ಸಿಎಂ ಪಟ್ಟಕ್ಕಾಗಿ ಹೋರಾಟ ಆರಂಭವಾಗಿದೆ. ಇತ್ತೀಚೆಗೆ ಹಾಸನದಲ್ಲಿ ಮಾತನಾಡಿದ್ದ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ಯಾರಿಗೂ ಅನಿವಾರ್ಯ ಅಲ್ಲ. 113 ಸೀಟು ಯಾರಿಗೆ ಬರುತ್ತೋ ಅವರ ಪಕ್ಷದವರೇ ಮುಖ್ಯಮಂತ್ರಿ. ಜೆಡಿಎಸ್ಗೆ ಬಂದರೆ ಹೆಚ್ಡಿಕೆ ಸಿಎಂ ಆಗಲು ಅಭ್ಯಂತರವಿಲ್ಲ ಎಂದಿದ್ದರು. ಆದರೆ ಅವರ ಈ ಹೇಳಿಕೆ ಕೇಂದ್ರ ಸಚಿವ ಮತ್ತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅಸಮಾಧಾನಕ್ಕೆ ಕಾರಣ.
ಇದನ್ನೂ ಓದಿ: ರಾಜ್ಯ ರಾಜಕಾರಣಕ್ಕೆ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ? ಯತ್ನಾಳ್ ಸ್ಫೋಟಕ ಹೇಳಿಕೆ
ಮತ್ತೊಂದೆಡೆ ಬಾಗಲಕೋಟೆ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ, 2028ಕ್ಕೆ ಬಿ.ವೈ. ವಿಜಯೇಂದ್ರ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ವಿಜಯೇಂದ್ರರವರು ಮುಖ್ಯಮಂತ್ರಿ ಆಗುವುದು ಕೂಡ ಅಷ್ಟೇ ಸತ್ಯ ಎಂದು ಶಾಂತಗೌಡ ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಮೈತ್ರಿ ಪಡೆಯಲ್ಲಿನ ತಿಕ್ಕಾಟವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಬಿಜೆಪಿ ಸ್ಥಳೀಯ ನಾಯಕರು ಸಂಸ್ಥೆ ಚುನಾವಣೆಗೆ ಜೆಡಿಎಸ್ ಜೊತೆ ಮೈತ್ರಿ ಬೇಡ ಎಂದು ಕೆಲಿದ್ದು ಕೂಡ ಪಕ್ಷಗಳ ನಡುವಿನ ಸಮನ್ವಯತೆಯ ಕೊರತೆಯನ್ನು ಬಹಿರಂಗಪಡಿಸಿದೆ. ದೋಸ್ತಿಗಳ ಮಧ್ಯೆ ಎಲ್ಲವೂ ಸರಿಯಿಲ್ಲ ಎಂದು ಸಾಭೀತು ಮಾಡಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.