ನೌಟಂಕಿ ಪ್ರಿಯಾಂಕಾ-ಕಿಲಾಡಿ ಡೇವಿಡ್ ಲವ್ ಸ್ಟೋರಿ; ಗಂಡ ಫ್ಯಾಕ್ಟರಿಯಲ್ಲಿದ್ರೂ ಕಳ್ಳಾಟ

ನೌಟಂಕಿ ಪ್ರಿಯಾಂಕಾ-ಕಿಲಾಡಿ ಡೇವಿಡ್ ಲವ್ ಸ್ಟೋರಿ;  ಗಂಡ ಫ್ಯಾಕ್ಟರಿಯಲ್ಲಿದ್ರೂ ಕಳ್ಳಾಟ

ನೌಟಂಕಿ ಪ್ರಿಯಾಂಕಾ-ಕಿಲಾಡಿ ಡೇವಿಡ್ ಲವ್ ಸ್ಟೋರಿ;  ಗಂಡ ಫ್ಯಾಕ್ಟರಿಯಲ್ಲಿದ್ರೂ ಕಳ್ಳಾಟ

ಬೇಲೂರಿನ ಪ್ರಿಯಾಂಕಾ ನಾಪತ್ತೆ ಪ್ರಕರಣವು ರೋಚಕ ತಿರುವು ಪಡೆದಿದ್ದು, ಆತ್ಮಹ*ತ್ಯೆ ಎಂದು ಶಂಕಿಸಲಾಗಿತ್ತು. ಆದರೆ, ಪೊಲೀಸರ ತನಿಖೆಯಿಂದ ಆಕೆ ತನ್ನ ಪ್ರಿಯಕರ ಡೇವಿಡ್ ಮನೆಯಲ್ಲಿ ಪತ್ತೆಯಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.

ಹಾಸನ ಜಿಲ್ಲೆಯ ಬೇಲೂರಿನ ಪ್ರಿಯಾಂಕಾ ಮಿಸ್ಸಿಂಗ್ ಕಹಾನಿ ರೋಚಕ ತಿರುವು ಪಡೆದುಕೊಂಡಿದೆ. ಆತ್ಮಹ*ತ್ಯೆ ಎಂದು ಬಿಂಬಿಸಿ ಪ್ರಿಯಕರ ಡೇವಿಡ್ ಮನೆಯಲ್ಲಿ ಪ್ರಿಯಾಂಕಾ ಪತ್ತೆಯಾಗಿದ್ದಾಳೆ. ಕೆರೆ ಬಳಿ ಬಟ್ಟೆ, ಬ್ಯಾಗ್, ಚಪ್ಪಲಿ ಪತ್ತೆಯಾಗಿತ್ತು. ಇದರಿಂದ ಮುಳುಗುತಜ್ಞರನ್ನು ಕರೆಸಿ ಕೆರೆಯಲ್ಲಿ ಪರಿಶೀಲನೆ ನಡೆಸಲಾಗಿತ್ತು. ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ ಕೆರೆಯ ಪರಶೀಲನೆ ನಡೆಸಿದ್ದರು.

11 ವರ್ಷಗಳ ಹಿಂದೆ ಬೇಲೂರು ತಾಲ್ಲೂಕಿನ ಮತ್ತಾವರದ ಪ್ರಿಯಾಂಕಾ ಮದುವೆ ಕುಣಿಗಲ್ ಯಲಿಯೂರು ನಿವಾಸಿ ರುದ್ರೇಶ್ ಎಂಬವರೊಂದಿಗೆ ಆಗಿತ್ತು. ದಂಪತಿಗೆ ಓರ್ವ ಮಗನಿದ್ದಾನೆ. ಈ ನಡುವೆ ಡೇವಿಡ್ ಎಂಬಾತನೊಂದಿಗೆ ಪ್ರಿಯಾಂಕಾಗೆ ಪ್ರೇಮಾಂಕುರವಾಗಿತ್ತು. ಹಾಗಾದ್ರೆ ಈ ಡೇವಿಡ್ ಯಾರು ಎಂಬುದನ್ನು ನೋಡೋಣ ಬನ್ನಿ

ಉತ್ತರ ಪ್ರದೇಶ ಮೂಲದ ಡೇವಿಡ್, ಕುಣಿಗಲ್ ಪಟ್ಟಣದಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದನು. ಕುಟಂಬದೊಂದಿಗೆ ಕುಣಿಗಲ್ ಪಟ್ಟಣದ ಗೊಟ್ಟಿಕೆರೆಯಲ್ಲಿ ಡೇವಿಡ್ ವಾಸವಾಗಿದ್ದನು. ಡೇವಿಡ್ ಅಧೀನದಲ್ಲಿಯೇ ಪ್ರಿಯಾಂಕಾ ಮತ್ತು ರುದ್ರೇಶ್ ಕೆಲಸ ಮಾಡಿಕೊಂಡಿದ್ದರು.

ಈ ವೇಳೆ ಡೇವಿಡ್ ಮತ್ತು ಪ್ರಿಯಾಂಕಾ ಪರಿಚಯ ಅಕ್ರಮ ಸಂಬಂಧಕ್ಕೆ ಬದಲಾಗಿತ್ತು. ಹಾಸನ ಮತ್ತು ಬೇಲೂರು ಠಾಣೆಯ ಪೊಲೀಸರು ಇಬ್ಬರ ಅಕ್ರಮ ಸಂಬಂಧವನ್ನು ಪತ್ತೆ ಮಾಡಿದ್ದಾರೆ. ನೇರವಾಗಿ ಕುಣಿಗಲ್‌ಗೆ ಬಂದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಡೇವಿಡ್ ಪತ್ನಿ ಕುಟುಂಬಸ್ಥರ ನಿಧನದ ಹಿನ್ನೆಲೆ ತವರಿಗೆ ತೆರಳಿದಿರುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಇದು ಜಗಳ ಅಲ್ಲ, ಘನಘೋರ ಯುದ್ದ: ತುಂಡುಡುಗೆ ತೊಟ್ಟವರ ವಿಡಿಯೋ ಕಣ್ಣರಳಿಸಿದ ನೋಡಿದ ಪೋಲಿಗಳು

ಡೇವಿಡ್ ಕುಟುಂಬದೊಂದಿಗೆ ನಮ್ಮ ಮನೆಯನ್ನು ಬಾಡಿಗೆ ಪಡೆದುಕೊಂಡು ವಾಸವಾಗಿದ್ದನು. ಕುಟುಂಬಸ್ಥರ ನಿಧನದ ಹಿನ್ನೆಲೆ ಪತ್ನಿ ತವರಿಗೆ ಹೋಗಿದ್ದಾರೆ ಅಂತ ಹೇಳಿದ್ದರು. ಇನ್ನು ಆ ಮಿಸ್ಸಿಂಗ್ ಮಹಿಳೆ ಮನೆಯಲ್ಲಿರುವ ವಿಷಯವೂ ನಮಗೆ ಗೊತ್ತಿರಲಿಲ್ಲ. ಪೊಲೀಸರು ಅವರಿಬ್ಬರನ್ನು ಕರೆದುಕೊಂಡು ಹೋಗುವಾಗ ನೋಡಲಿಲ್ಲ ಎಂದು ಡೇವಿಡ್ ವಾಸವಿದ್ದ ಮನೆಯ ಮಾಲೀಕ ಹೇಳಿದ್ದಾರೆ.

ಇದನ್ನೂ ಓದಿ: Hampi Utsav 2026: ಸೈನಿಕರಿಗಾಗಿ ವೇಶ್ಯಾವಾಟಿಕೆ ಆರಂಭಿಸಿದ್ದ ವಿಜಯನಗರ ಅರಸರು; ಇಂಟರೆಸ್ಟಿಂಗ್ ಮಾಹಿತಿ

Source link

Leave a Reply

Your email address will not be published. Required fields are marked *