ನಾಪತ್ತೆಯಾಗಿದ್ದ ಮಹಿಳೆ ಪರಪುರುಷನ ಜೊತೆ ಪತ್ತೆ: ಬಾಡಿಗೆ ಮನೆ ಮಾಲೀಕನ ಶಾಕಿಂಗ್​​ ಹೇಳಿಕೆ

ನಾಪತ್ತೆಯಾಗಿದ್ದ ಮಹಿಳೆ ಪರಪುರುಷನ ಜೊತೆ ಪತ್ತೆ: ಬಾಡಿಗೆ ಮನೆ ಮಾಲೀಕನ ಶಾಕಿಂಗ್​​ ಹೇಳಿಕೆ


ಹಾಸನ, ಫೆಬ್ರವರಿ 15: ಮದುವೆಗೆ ಬಂದಿದ್ದ ಮಹಿಳೆ ನಾಪತ್ತೆ ಪ್ರಕರಣ ಸಂಬಂಧ ಆಕೆ ತಂಗಿದ್ದ ಪತಿಯ ಸ್ನೇಹಿತ ಡೇವಿಡ್ ಎಂಬಾತನ ಬಾಡಿಗೆ ಮನೆಯ ಮಾಲೀಕ ಘಟನೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಮನೆ ಮಾಲೀಕ ಶಿವಣ್ಣ ಅವರು, ತಮ್ಮ ಬಾಡಿಗೆದಾರ ಡೇವಿಡ್ ಮನೆಯಲ್ಲಿ ಮಹಿಳೆ ಇದ್ದ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಇರಲಿಲ್ಲ. ಪೊಲೀಸರು ಬಂದು ಇಬ್ಬರನ್ನೂ ಕರೆದೊಯ್ದ ನಂತರವೇ ಈ ವಿಚಾರ ಎಂದು ಹೇಳಿದ್ದಾರೆ. ಡೇವಿಡ್ ಸುಮಾರು ಒಂದು ವರ್ಷದಿಂದ ಶಿವಣ್ಣ ಅವರ ಮನೆ ಬಾಡಿಗೆಗೆ ವಾಸವಾಗಿತ್ತು. ಮೊದಲು ಹೆಂಡತಿ ಎಂದು ಹೇಳಿ ಒಬ್ಬ ಮಹಿಳೆಗೆ ಡೇವಿಡ್ ವಾಸವಿದ್ದ ಎಂದು, ಆ ಮಹಿಳೆ ಆರು-ಏಳು ತಿಂಗಳ ಹಿಂದೆ ಅಪ್ಪ-ಅಮ್ಮನಿಗೆ ಹುಷಾರಿಲ್ಲವೆಂದು ಹೋದವಳು ಮರಳಿ ಬಂದಿರಲಿಲ್ಲ. ಅಂದಿನಿಂದ ಡೇವಿಡ್ ಒಬ್ಬನೇ ವಾಸವಾಗಿದ್ದ ಎಂದು ಶಿವಣ್ಣ ವಿವರಿಸಿದ್ದಾರೆ.

ರಾತ್ರಿ 9:30 ರ ಸುಮಾರಿಗೆ ನೇರವಾಗಿ ಡೇವಿಡ್ ಇದ್ದ ಕೋಣೆಗೆ ಹೋಗಿ ಮಹಿಳೆ ಮತ್ತು ಆತನನ್ನು ಕರೆದುಕೊಂಡು ಹೋಗಿದ್ದಾರೆ. ಯಾರೂ ವಿಚಾರಿಸಲಿಲ್ಲ ಅಥವಾ ಯಾವುದೇ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಲಿಲ್ಲ. ಮಹಿಳೆ ನಾಪತ್ತೆಯಾಗಿರುವುದು, ಕೆರೆಯಲ್ಲಿ ಶವಕ್ಕಾಗಿ ಹುಡುಕುತ್ತಿರುವ ಟಿವಿ ಮತ್ತು ಮೊಬೈಲ್ ಮೂಲಕ ತಿಳಿದಿತ್ತು. ಆದರೆ, ಆ ಮಹಿಳೆಯೇ ತಮ್ಮ ಮನೆಯಲ್ಲಿ ಇರುವುದು ತಿಳಿದಾಗ ತಮಗೆ ತೀವ್ರವಾಯಿತು ಎಂದು ಶಿವಣ್ಣ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *