ನಟಿ, ಮಾಡೆಲ್ ಸಂಹಿತಾ ವಿನ್ಯಾ (ಸಂಹಿತಾ ವಿನಯ) ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ನಟಿಸಿರುವ ‘ಮಿಕ್ಸಿಂಗ್ ಪ್ರೀತಿ’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾಗೆ ಪೊಲ್ಲಾಚಿ ಮಹಾಲಿಂಗಂ ಅವರು ನಿರ್ದೇಶನ ಮಾಡಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ, ಹಾರರ್ (ಭಯಾನಕ)ಥ್ರಿಲ್ಲರ್ ಅಂಶಗಳನ್ನು ಹೊಂದಿರುವ ಈ ಸಿನಿಮಾ ಫೆಬ್ರವರಿ 20 ರಂದು ಬಿಡುಗಡೆ ಆಗಲಿದೆ. ‘ಮಿಕ್ಸಿಂಗ್ ಪ್ರೀತಿ’ (ಮಿಕ್ಸಿಂಗ್ ಪ್ರೀತಿ) ಹೊಸ್ತಿಲಿನಲ್ಲಿ ಒಂದಷ್ಟು ಮಾಹಿತಿ ಹಂಚಿಕೊಳ್ಳಲಾಗಿದೆ. ತಮಿಳಿನಲ್ಲೂ ಈ ಸಿನಿಮಾ ಸಿದ್ಧವಾಗಿದೆ.
ಒಂದು ರೆಸಾರ್ಟ್‌ನಲ್ಲಿ ನಡೆಯುವ ಹಾರರ್ ಕಥೆ ‘ಮಿಕ್ಸಿಂಗ್ ಪ್ರೀತಿ’ ಸಿನಿಮಾದಲ್ಲಿ ಇದೆ. ಮೂವರು ಸ್ನೇಹಿತರು ರೆಸಾರ್ಟ್‌ಗೆ ಹೋದಾಗ ಅವರಿಗೆ ದೆವ್ವ ಕಾಟ ಶುರುವಾಗುತ್ತದೆ. ಅಲ್ಲಿಂದ ಅವರೆಲ್ಲ ಹೇಗೆ ಹೊರಬಂದರು ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಿಲ್ಲ. ಹಾರರ್ ಜೊತೆಗೆ ಒಂದು ಲವ್ ಸ್ಟೋರಿ ಕೂಡ ಸಾಗುತ್ತದೆ. ಕೇರಳ, ಚೆನ್ನೈ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ರಾತ್ರಿ ವೇಳೆ ಚಿತ್ರೀಕರಣ ಮಾಡುವಾಗ ನಿಜವಾದ ರೆಸಾರ್ಟ್‌ನಲ್ಲಿ ಹಾರರ್ ಫೀಲ್ ಆಯ್ತು ಎಂದು ನಾಯಕಿ ಸಂಹಿತಾ ಹೇಳಿದ್ದಾರೆ.
ಸಂಹಿತಾ ವಿನ್ಯಾ ಅವರು 75ಕ್ಕೂ ಅಧಿಕ ಫ್ಯಾಷನ್ ಶೋಗಳಲ್ಲಿ ಶೋಸ್ಟಾಪರ್ ಆಗಿ ಭಾಗವಹಿಸಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಅನುಭವ. ಚಿತ್ರರಂಗದಲ್ಲೂ ತೊಡಗಿಸಿಕೊಂಡಿದೆ. ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಳ್ಳುತ್ತಾರೆ. ಇದೇ ಮೊದಲ ಬಾರಿಗೆ ಸಂಹಿತಾ ವಿನ್ಯಾ ಅವರು ಹಾರರ್, ಥ್ರಿಲ್ಲರ್ ಸಿನಿಮಾಗೆ ನಾಯಕಿ ಆಗಿದ್ದಾರೆ.
‘ಮೆಜೆಸ್ಟಿಕ್ 2′, ‘ಆಯುಧ’, ‘ಸ್ವಾಭಿಮಾನಿ’, ‘ಯಾಕೋ ಬೇಜಾರು’, ‘ವಿದೂಷಕ’, ‘ಅಮೃತಘಳಿಗೆ’, ‘ಜಿಎಸ್‌ಟಿ’, ‘ಲಂಗೋಟಿ ಮ್ಯಾನ್’, ‘ಯೂ ಆರ್ ಮೈ ಹೀರೋ’ ಮುಂತಾದ ಸಿನಿಮಾಗಳಲ್ಲಿ ಸಂಹಿತಾ ವಿನ್ಯಾ ಅವರು ನಟಿಸಿದ್ದಾರೆ. ಇಲ್ಲಿಯವರೆಗೆ 18ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ಇದನ್ನೂ ಓದಿ: ಹಾರರ್ ಪ್ರಿಯರಿಗೆ ಸವಾಲು; ನೈಜ ಘಟನೆಯ ಈ ಸರಣಿಯನ್ನು ನೋಡಲು ಎರಡು ಗುಂಡಿಗೆ ಬೇಕು
ಈಗ ಬಿಡುಗಡೆಗೆ ಸಿದ್ಧವಾಗಿರುವ ‘ಮಿಕ್ಸಿಂಗ್ ಪ್ರೀತಿ’ ಸಿನಿಮಾದಲ್ಲಿ ಸಿಂಟೊ ಜೇಕಬ್ ಅವರು ಹೀರೋ ಆಗಿ ನಟಿಸಿದ್ದಾರೆ. ಪ್ರಿಯಾ ಪವನ್, ದಿವ್ಯ ಜಸ್ಮಿತಾ ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ರಾಜೇಶ್ ಮೋಹನ್ ಮತ್ತು ಗಣೇಶ್ವರನ್ ಅವರು ಸಂಗೀತ ನೀಡಿದ್ದಾರೆ. ಸಾಧಿಕ್ ಕಬೀರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ತಮಿಳಿನಲ್ಲಿ ‘ಮಿಕ್ಸಿಂಗ್ ಕಾದಲ್’ ಎಂಬ ಶೀರ್ಷಿಕೆಯಲ್ಲಿ ಈ ಸಿನಿಮಾ ತಯಾರಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.