Weekly Horoscope 2026: ವಾರ ಭವಿಷ್ಯ; ಫೆಬ್ರವರಿ ಮೂರನೇ ವಾರ, 12 ರಾಶಿಗಳ ಫಲಾಫಲ ಹೀಗಿದೆ..!

Weekly Horoscope 2026: ವಾರ ಭವಿಷ್ಯ; ಫೆಬ್ರವರಿ ಮೂರನೇ ವಾರ, 12 ರಾಶಿಗಳ ಫಲಾಫಲ ಹೀಗಿದೆ..!


2026 ಫೆಬ್ರವರಿ ಮೂರನೇ ವಾರ ಇದಾಗಿದ್ದರೆ ಆದಷ್ಟು ಹೆಜ್ಜೆ ಇಡುವಾಗ ಎಚ್ಚರಿಕೆ ಬೇಕು. ಆದಾಯದ ಬಗ್ಗೆ ಧೈರ್ಯ ತಾಳುವುದು ಅನಿವಾರ್ಯ ವಸ್ತು. ಯಾರನ್ನೋ ನಂಬಿ ಬೇಸರಿಸಬೇಕಾಗುವುದು. ಒತ್ತಡ ಉದ್ವೇಗಕ್ಕೆ ಶಾಂತವಾಗಿ ಇರುವುದು ನಿಮ್ಮ ಕೈಯಲ್ಲಿದೆ. ಒಳ್ಳೆಯದಾಗಲಿ ಸಕಲರಿಗೂ.

ಮೇಷ:

ಲಾಭಸ್ಥಾನದ ಶನಿ-ಸೂರ್ಯನಿಂದ ಕನಕ ಯೋಗ. ನಿಮ್ಮ ಶ್ರಮಕ್ಕೆ ಈಗ ಪೂರ್ಣವಿರಾಮ ಸಿಕ್ಕಿ, ಪ್ರತಿಫಲದ ಪರ್ವ ಆರಂಭವಾಗಲಿದೆ. ರಾಜಕೀಯ ಅಥವಾ ಆಡಳಿತ ರಂಗದಲ್ಲಿರುವವರಿಗೆ ಪಟ್ಟಾಭಿಷೇಕದಂತಹ ಗೌರವ ಸಿಗಲಿದೆ.

ವೃಷಭ:

ದಶಮದಲ್ಲಿ ಕರ್ಮಾದಿಪತಿಗಳ ಯುದ್ಧ. ವೃತ್ತಿಯಲ್ಲಿ ಸಿಂಹಾಸನ ಏರುವ ಕಾಲ. ಮೇಲಧಿಕಾರಿಗಳ ಕೆಂಗಣ್ಣು ಈಗ ಪ್ರೀತಿಯಾಗಿ ಬದಲಾಗಲಿದೆ. ಹೊಸ ಉದ್ಯಮ ಆರಂಭಿಸಲು ಈ ವಾರಕ್ಕಿಂತ ಶ್ರೇಷ್ಠ ಸಮಯ ಮತ್ತೊಂದಿಲ್ಲ.

ಮಿಥುನ:

ಭಾಗ್ಯಸ್ಥಾನದಲ್ಲಿ ಗ್ರಹಗಳ ನರ್ತನ. ಅತೀಂದ್ರಿಯ ಶಕ್ತಿ ಅಥವಾ ದೈವಬಲ ನಿಮ್ಮನ್ನು ಕಾಪಾಡಲಿದೆ. ಸ್ಥಗಿತಗೊಂಡಿರುವ ವಿದೇಶಿ ಪ್ರಯಾಣ ಅಥವಾ ಉನ್ನತ ಶಿಕ್ಷಣದ ಹಾದಿ ಈಗ ಸುಗಮ ಪ್ರದರ್ಶನ. ಅದೃಷ್ಟದ ಬಾಗಿಲು ತೆರೆಯುವ ವಾರವಿದು.

ಕರ್ಕಾಟಕ:

ಅಷ್ಟಮದಲ್ಲಿ ಸೂರ್ಯ-ಶನಿ, ಮೃತ್ಯುಂಜಯ ಜಪದ ಅಗತ್ಯ. ಸಂಕಷ್ಟಗಳ ಸುಳಿಯಿದ್ದರೂ ಅನಿರೀಕ್ಷಿತ ವಿಮೆ ಅಥವಾ ಪಿತ್ರಾರ್ಜಿತ ಆಸ್ತಿಯಿಂದ ದೊಡ್ಡ ಮೊತ್ತದ ಹಣ ಕೈ ಸೇರಲಿದೆ. ಗುಪ್ತ ಶತ್ರುಗಳು ತಾವಾಗಿಯೇ ಬಲೆಗೆ ಬೀಳುವರು.

ಸಿಂಹ:

ಸಪ್ತಮ ಭಾವದಲ್ಲಿ ರಾಶ್ಯಾಧಿಪತಿ, ಸೌಭಾಗ್ಯ ಯೋಗ. ದಾಂಪತ್ಯದ ಬಿರುಕು ಮಾಯವಾಗಿ ಪ್ರೇಮ ಚಿಗುರಲಿದೆ. ಸಾರ್ವಜನಿಕ ಜೀವನದಲ್ಲಿ ನಿಮ್ಮ ವರ್ಚಸ್ಸು ಸೂರ್ಯನಂತೆ ಬೆಳಗಲಿದೆ. ಹೊಸ ಒಪ್ಪಂದಗಳು ನಿಮ್ಮ ಬದುಕಿನ ದಿಕ್ಕನ್ನೇ ಬದಲಿಸಲಿವೆ.

ಕನ್ಯಾ:

ಷಷ್ಠ ಭಾವದಲ್ಲಿ ಶತ್ರುನಾಶಕ ಯೋಗ. ಎದುರಾಳಿಗಳು ನಿಮ್ಮ ಮುಂದೆ ಮಂಡಿಯೂರುವರು. ಸಾಲದ ಸುಳಿಯಿಂದ ಮುಕ್ತಿ ಸಿಗಲಿದೆ. ಆರೋಗ್ಯದ ದೃಷ್ಟಿಯಿಂದ ಈ ವಾರ ಸಂಜೀವಿನಿಯಂತೆ ಕೆಲಸ ಮಾಡಲಿದೆ.

ತುಲಾ:

ಪಂಚಮದಲ್ಲಿ ಔಷಧಿಯ ಉತ್ತುಂಗ. ನಿಮ್ಮ ಬುದ್ಧಿವಂತಿಕೆಗೆ ದೊಡ್ಡ ವೇದಿಕೆ ಸಿಗಲಿದೆ. ಪ್ರೇಮ ವ್ಯವಹಾರಗಳು ಹಸೆಮಣೆಯವರೆಗೆ ಸಾಗುವ ಸಂಕೇತಗಳಿವೆ. ಮಕ್ಕಳಿಂದ ಕುಲಕ್ಕೆ ಕೀರ್ತಿ ಬರಲಿದೆ.

ವೃಶ್ಚಿಕ:

ಚತುರ್ಥದಲ್ಲಿ ಸುಖ ಸೌಕರ್ಯಗಳ ವೃದ್ಧಿ. ನವ ಗೃಹ ನಿರ್ಮಾಣ ಅಥವಾ ವಾಹನ ಯೋಗ ಬಲವಾಗಿದೆ. ತಾಯಿಯ ಕಡೆಯಿಂದ ಆಶೀರ್ವಾದದ ರೂಪದಲ್ಲಿ ಆಸ್ತಿ ಲಭಿಸಲಿದೆ. ಎದೆಯಲ್ಲಿದ್ದ ಆತಂಕ ದೂರವಾಗಿ ನೆಮ್ಮದಿ ನೆಲೆಸಲಿದೆ.

ಧನುಸ್ಸು:

ಈ ವಾರ ತೃತೀಯ ಭಾವದಲ್ಲಿ ಪರಾಕ್ರಮದ ಅಲೆ. ನಿಮ್ಮ ಮಾತು ಈಗ ಮಂತ್ರ. ಸೋದರರಿಂದ ಬೆಂಬಲ ಸಿಕ್ಕಿ ಕಠಿಣ ಕೆಲಸಗಳು ಸುಲಭವಾಗಲಿವೆ. ಕಿರು ಪ್ರವಾಸಗಳು ದೊಡ್ಡ ಮಟ್ಟದ ವ್ಯವಹಾರಕ್ಕೆ ನಾಂದಿ ಹಾಡಲಿವೆ.

ಮಕರ:

ದ್ವಿತೀಯದಲ್ಲಿ ಧನ ಭಂಡಾರ ತುಂಬುವ ಕಾಲ. ಕುಬೇರನ ಕೃಪೆ ನಿಮ್ಮ ಮೇಲಿರಲಿದೆ. ಕಠಿಣ ಶ್ರಮಕ್ಕೆ ತಕ್ಕಂತೆ ಬ್ಯಾಂಕ್ ಬ್ಯಾಲೆನ್ಸ್ ಆಗಲಿದೆ. ಕೌಟುಂಬಿಕ ಕಲಹಗಳು ಮಾತುಕತೆಯ ಮೂಲಕ ಶಾಂತವಾಗಲಿವೆ.

ಕುಂಭ:

ಈ ವಾರ ಜನ್ಮ ರಾಶಿಯಲ್ಲಿ ಶನಿ-ಸೂರ್ಯ ಯುತಿ, ಪರೀಕ್ಷೆಯ ಕಾಲ. ಬೆಂಕಿಯಲ್ಲಿ ಬೆಂದ ಚಿನ್ನದಂತೆ ನೀವು ಪುಟಕ್ಕೇಳುವಿರಿ. ದೊಡ್ಡ ಜವಾಬ್ದಾರಿಗಳು ಹೆಗಲೇರಲಿವೆ. ಸಮಾಜದಲ್ಲಿ ಹೊಸ ಗುರುತು ಮತ್ತು ಗೌರವ ಪ್ರಾಪ್ತಿಯಾಗಲಿದೆ.

ಮೀನ:

ದ್ವಾದಶದಲ್ಲಿ ಅಧ್ಯಾತ್ಮ ಮತ್ತು ಮುಕ್ತಿ. ಭೌತಿಕ ಸುಖಕ್ಕಿಂತ ಮಾನಸಿಕ ಶಾಂತಿಗೆ ಆದ್ಯತೆ ನೀಡುವಿರಿ. ದೂರದ ದೇಶಗಳಿಂದ ಶುಭ ವಾರ್ತೆ ಬರಲಿದೆ. ದಾನದ ಮೂಲಕ ನಿಮ್ಮ ಪಾಪಕರ್ಮಗಳು ಕರಗಿ ಪುಣ್ಯ ಲಭಿಸಲಿದೆ.

-ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)



Source link

Leave a Reply

Your email address will not be published. Required fields are marked *