ಯುವತಿಯರ ಜೊತೆ ಆರೋಪಿ ಮನೀಶ್ಚಿತ್ರ ಕ್ರೆಡಿಟ್ ಮೂಲ: ಟಿವಿ9 ಕನ್ನಡ
ಮಂಗಳೂರು, ಫೆಬ್ರವರಿ 15: ಮ್ಯಾಟ್ರಿಮೋನಿಯಲ್ಲಿ ಪರಿಚಯ ಮಾಡಿಕೊಂಡು ಮದುವೆಯಾಗಿ ನಂಬಿಸಿ ಹಣ ಪಡೆದು ವ್ಯಕ್ತಿಯೋರ್ವ ಘಟನೆ ವಂಚಿಸಿರುವ ಮಾಸುವ ಮುನ್ನವೇ ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ ಹಾಕುತ್ತಿದ್ದ ಮತ್ತೊಬ್ಬನ ಕಹಾನಿ ಬಯಲಾಗಿದೆ. ಗಂಡನ ಪ್ರೇಮ, ಪ್ರೀತಿ, ಪ್ರಣಯದಾಟವನ್ನು ನಿವಾಸಿ ಪತ್ನಿಯೇ ಬಟಾ ಬಯಲು ಮಾಡಿದ್ದು, ಬಜೆಪೆ ಮನೀಶ್ ವಿರುದ್ಧ ಪತ್ನಿ ಪ್ರೀತಿ ಮಂಗಳೂರು ಮಹಿಳಾ ಠಾಣೆಗೆ ಈ ಬಗ್ಗೆ ದೂರು ನೀಡಲಾಗಿದೆ.
ಸಂತ್ರಸ್ತೆ ಪ್ರೀತಿಗೆ ಫೇಸ್ ಬುಕ್ ನಲ್ಲಿ ಪರಿಚಯವಾದ ಮನೀಶ್ , ಬ್ಲಾಕ್ ಮೇಲ್ ಮಾಡಿ ಆಕೆಯನ್ನು ಮದುವೆ ಆಗಿದ್ದಾರೆ ಎಂದು ದೂರಲಾಗಿದೆ. ಮದುವೆಗೆ ಮೂರು ದಿನ ಇರುವಾಗ ಹಣ ಇಲ್ಲ ಎಂದು ಆತ್ಮಹತ್ಯೆ ನಾಟಕವಾಡಿದ್ದ. ಹೀಗಾಗಿ ಮದುವೆಯ ಎಲ್ಲ ಖರ್ಚನ್ನು ತಾವೇ ನೋಡಿಕೊಂಡು ಪ್ರೀತಿ ವಿವಾಹ ಕಾರ್ಯ ನಡೆಸಿದ್ದರು. ಮದುವೆಯಾದ ಬಳಿಕ ಎರಡು ಲಕ್ಷ ಹಣ ಕೊಟ್ಟು ವಿದೇಶದಲ್ಲಿ ಮನೀಶ್ ಗೆ ಕೆಲಸ ಕೊಡಿಸಲು ಕೂಡ ಪ್ರೀತಿ ಸಹಾಯ ಮಾಡಿದೆ. ಆದರೆ ದುಬೈಗೆ ಹೋದ ಈತ ಬಹರೇನ್ ನಲ್ಲಿರೋ ಮಹಿಳೆ ಜೊತೆ ಲವ್ವಿಡವ್ವಿ ಶುರುಮಾಡಿದ್ದಾನೆ. ವಿಚಾರ ತಿಳಿದು ಈತನ ಇತಿಹಾಸವನ್ನು ಪ್ರೀತಿ ಕೆದಕಿದ್ದು, ಈ ವೇಳೆ ಮನೀಶ್ ನ ನಿಜರೂಪ ಬಯಲಾಗಿದೆ.
ಇದನ್ನೂ ಓದಿ: ಸೊಸೆ ಮೇಲೆ ಮಾವನಿಂದಲೇ ದೌರ್ಜನ್ಯ; ಆಸೆ ಹುಟ್ಟಿಸು ಎಂದು ಪೀಡನೆ
ಮದುವೆಗೂ ಮುನ್ನ ಹಲವರ ಜೊತೆ ಲವ್ ಅಫೇರ್
ಪ್ರೀತಿ ಜೊತೆ ಮದುವೆಗೂ ಮುನ್ನ ಹಲವು ಯುವತಿಯರ ಜೊತೆ ಲವ್ ಅಫೇರ್ ಹೊಂದಿದ್ದ ಮನೀಶ್, ಅವರ ಬಳಿ ಕೂಡ ಹಣ ಪಡೆದು ಮೋಸ ಮಾಡಿದ್ದರು. ಈ ವಿಚಾರವನ್ನು ಆ ಯುವತಿಯರೇ ಪ್ರೀತಿಗೆ ಇಡಬೇಕು. ಹಣ ವಾಪಾಸ್ ಕೇಳಿದ್ರೆ ಎಲ್ಲ ಯುವತಿಯರ ಬಳಿ ಒಂದೇ ನಾಟಕ ಆಡಿದ್ದ ಆರೋಪಿ, ತನಗೆ ಬ್ರೈನ್ ಟ್ಯೂಮರ್ ಇದೆ ಎಂದು ಹೇಳಿ ಹಣ ಕೊಡದೇ ಲವ್ ಬ್ರೇಕ್ ಅಪ್ ಮಾಡಿಕೊಂಡಿದ್ದ. ಟಿಕ್ ಟಾಕ್ ಮಾಡಿ ಯುವತಿಯರಿಗೆ ಗಾಳ ಹಾಕುವ ಮನೀಶ್ ನಡೆಯಿಂದ ಬೇಸತ್ತು ಪತ್ನಿ ಪ್ರೀತಿ, ಇಂತಹ ಗಂಡ ಬೇಡ. ಈತನ ನಂಬಿ ಮತ್ತೆ ಯಾರು ಮೋಸ ಹೋಗಬಾರದು ಎಂದು ಅಲವತ್ತುಕೊಂಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.