Headlines

ಈ ಬಾರಿ ಟಿ20 ವಿಶ್ವಕಪ್ ಆಡುತ್ತಿರುವ ಟಾಪ್-6 ಶ್ರೀಮಂತ ಕ್ರಿಕೆಟಿಗರಿವರು! ಮೂವರು ಭಾರತೀಯರು

ಈ ಬಾರಿ ಟಿ20 ವಿಶ್ವಕಪ್ ಆಡುತ್ತಿರುವ ಟಾಪ್-6 ಶ್ರೀಮಂತ ಕ್ರಿಕೆಟಿಗರಿವರು! ಮೂವರು ಭಾರತೀಯರು

ಈ ಬಾರಿ ಟಿ20 ವಿಶ್ವಕಪ್ ಆಡುತ್ತಿರುವ ಟಾಪ್-6 ಶ್ರೀಮಂತ ಕ್ರಿಕೆಟಿಗರಿವರು! ಮೂವರು ಭಾರತೀಯರು

ಬೆಂಗಳೂರು: ಟಿ20 ವಿಶ್ವಕಪ್‌ ಕ್ರಿಕೆಟ್‌ ಜ್ವರ ಏರುತ್ತಿದೆ. ಈ ಬಾರಿ ಕಣದಲ್ಲಿರುವ ಆಟಗಾರರು ಕೇವಲ ಆಟದಲ್ಲಿ ಮಾತ್ರವಲ್ಲ, ಹಣ ಗಳಿಕೆಯಲ್ಲೂ ದಾಖಲೆ ಬರೆದಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್, ಫ್ರಾಂಚೈಸಿ ಲೀಗ್‌ ಮತ್ತು ಬ್ರ್ಯಾಂಡ್‌ಗಳಿಂದ ಅತಿ ಹೆಚ್ಚು ಸಂಪಾದಿಸಿದ ಟಾಪ್ 06 ಆಟಗಾರರ ಪಟ್ಟಿ ಇಲ್ಲಿದೆ.

ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮೊದಲ ಸ್ಥಾನದಲ್ಲಿದ್ದಾರೆ. ಐಪಿಎಲ್ ಒಪ್ಪಂದಗಳು ಮತ್ತು ಜಾಗತಿಕ ಟಿ20 ಲೀಗ್‌ಗಳು ಮ್ಯಾಕ್ಸ್‌ವೆಲ್ ಅವರ ಆಸ್ತಿಯನ್ನು ಈ ಮಟ್ಟಕ್ಕೆ ಏರಿಸಿವೆ. ಈ ಆವೃತ್ತಿಯ ಟಿ20 ವಿಶ್ವಕಪ್ ಆಡುತ್ತಿರುವ ಆಟಗಾರರ ಪಟ್ಟಿಯಲ್ಲಿ ಮ್ಯಾಕ್ಸಿ ಶ್ರೀಮಂತ ಕ್ರಿಕೆಟಿಗ ಎನಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ಭಾರತೀಯ ಕ್ರಿಕೆಟ್‌ನ ಅತ್ಯಂತ ಮೌಲ್ಯಯುತ ಆಟಗಾರರಲ್ಲಿ ಒಬ್ಬರೆನಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಟಿ20 ನಿವೃತ್ತಿಯ ನಂತರ, ಅವರು ತಂಡದ ಅತ್ಯಂತ ಅನುಭವಿ ಆಟಗಾರ. ಐಪಿಎಲ್ ನಾಯಕತ್ವ ಮತ್ತು ಹಲವಾರು ಜಾಹೀರಾತುಗಳು ಹಾರ್ದಿಕ್ ಆದಾಯವನ್ನು ಹೆಚ್ಚಿಸಿವೆ.

ಇಂಗ್ಲೆಂಡ್‌ನ ಸ್ಫೋಟಕ ಆಟಗಾರ ಜೋಸ್ ಬಟ್ಲರ್ ಮೂರನೇ ಸ್ಥಾನದಲ್ಲಿದ್ದಾರೆ. ಅವರು ಐಪಿಎಲ್‌ನಲ್ಲಿ ಗುಜರಾತ್ ಜೈಂಟ್ಸ್‌ ಪರ 15.75 ಕೋಟಿ ರೂಪಾಯಿಗೆ ಆಡುತ್ತಾರೆ. ಜಾಗತಿಕ ಲೀಗ್‌ಗಳಲ್ಲಿ ಸಕ್ರಿಯವಾಗಿರುವ ಬಟ್ಲರ್‌ಗೆ ವಿಶ್ವಾದ್ಯಂತ ದೊಡ್ಡ ಮಾರುಕಟ್ಟೆ ಮೌಲ್ಯವಿದೆ.

ವಿಶ್ವದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರಾದ ಬುಮ್ರಾ, ಬಿಸಿಸಿಐನ ‘ಎ’ ಕೆಟಗರಿ ಒಪ್ಪಂದದಲ್ಲಿದ್ದಾರೆ. ಐಪಿಎಲ್ ಆದಾಯ ಮತ್ತು ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳು ಬುಮ್ರಾ ಅವರ ಸಂಪಾದನೆಯ ಪ್ರಮುಖ ಮೂಲಗಳಾಗಿವೆ.

ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್, ತಮ್ಮ ನಿವೃತ್ತಿ ಘೋಷಣೆಯನ್ನು ಹಿಂಪಡೆದು ಈ ಬಾರಿ ವಿಶ್ವಕಪ್‌ ಆಡುತ್ತಿದ್ದಾರೆ. ಐಪಿಎಲ್ ಮತ್ತು ಇತರ ಲೀಗ್‌ಗಳಲ್ಲಿ ಸಕ್ರಿಯವಾಗಿರುವುದು ಅವರಿಗೆ ದೊಡ್ಡ ಆರ್ಥಿಕ ಲಾಭವನ್ನು ತಂದುಕೊಟ್ಟಿದೆ.

ಭಾರತದ ಟಿ20 ನಾಯಕ ಸೂರ್ಯಕುಮಾರ್ ಯಾದವ್, ಡಿ ಕಾಕ್ ಜೊತೆ ಸ್ಥಾನ ಹಂಚಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್‌ನಿಂದ 16.35 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಸೂರ್ಯ, ಇಂದು ವಿಶ್ವ ಕ್ರಿಕೆಟ್‌ನ ಅತಿದೊಡ್ಡ ವಾಣಿಜ್ಯ ಬ್ರ್ಯಾಂಡ್‌ಗಳಲ್ಲಿ ಒಬ್ಬರಾಗಿದ್ದಾರೆ.

Source link

Leave a Reply

Your email address will not be published. Required fields are marked *