Headlines

ಆಂಟ್ರೋಪಿಕ್ ಹಾಗೂ ಇತರ 13 ಎಐ ಕಂಪನಿಗಳೊಂದಿಗೆ ಮುಕೇಶ್ ಅಂಬಾನಿ ಅವರ ಜಿಯೋ ಮೈತ್ರಿ

ಆಂಟ್ರೋಪಿಕ್ ಹಾಗೂ ಇತರ 13 ಎಐ ಕಂಪನಿಗಳೊಂದಿಗೆ ಮುಕೇಶ್ ಅಂಬಾನಿ ಅವರ ಜಿಯೋ ಮೈತ್ರಿ


ನವದೆಹಲಿ, ಫೆಬ್ರುವರಿ 15: ಎಐ ಸೆಕ್ಟರ್ ಬಹಳ ವೇಗವಾಗಿ ಬೆಳವಣಿಗೆ ಹೊಂದುತ್ತಿರುವಂತೆಯೇ ಜಾಗತಿಕವಾಗಿ ಸಹಿತ್ವ, ಹೊಂದಾಣಿಕೆ, ಮೈತ್ರಿಗಳು ಏರ್ಪಡುವ ಟ್ರೆಂಡ್ ಪ್ರಾರಂಭವಾಗಿದೆ. ಜಿಯೋ ಪ್ಲಾಟ್ಫಾರ್ಮ್ಸ್ನಿಂದ (Jio Platforms) ಹಿಡಿದು ಆಂಥ್ರೋಪಿಕ್ ವರೆಗೆ 15 ಕಂಪನಿಗಳು ಮಾಡಿಕೊಂಡಿವೆ. ಸೆಮಿಕಂಡಕ್ಟರ್‌ನಿಂದ ಹಿಡಿದು ಕ್ಲೌಡ್ ಇನ್‌ಫ್ರಾಸ್ಟ್ರಕ್ಚರ್‌ವರೆಗೆ ಐ ಸಂಬಂಧಿತ ಕ್ಷೇತ್ರಗಳಲ್ಲಿ ಈ ಕಂಪನಿಗಳು ಒಟ್ಟಿಗೆ ಸೇರಿ ಟ್ರಸ್ಟೆಡ್ ಟೆಕ್ ಅಲಯನ್ಸ್ (ಟ್ರಸ್ಟೆಡ್ ಟೆಕ್ ಅಲೈಯನ್ಸ್- ವಿಶ್ವಾಸೀ ತಂತ್ರಜ್ಞಾನ ಮೈತ್ರಿ) ಕೂಟ ರಚಿಸಿವೆ.

ಜರ್ಮನಿಯಲ್ಲಿ ನಡೆದ ಮ್ಯೂನಿಕ್ ಸೆಕ್ಯುರಿಟಿ ಕಾನ್ಫರೆನ್ಸ್‌ನಲ್ಲಿ (ಮ್ಯೂನಿಕ್ ಸೆಕ್ಯುರಿಟಿ ಕಾನ್ಫರೆನ್ಸ್) ಈ ಐ ಮೈತ್ರಿಕೂಟ ಗುಂಪನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಏಷ್ಯಾ, ಆಫ್ರಿಕಾ ಯೂರೋಪ್ ಮತ್ತು ಉತ್ತರ ಅಮೆರಿಕದ 15 ಕಂಪನಿಗಳು ಸದ್ಯ ಈ ಹೊಂದಾಣಿಕೆ ಮಾಡಿಕೊಂಡಿವೆ.

ಇದನ್ನೂ ಓದಿ: ಫೆ. 16ರಿಂದ ಎಐ ಇಂಪ್ಯಾಕ್ಟ್ ಸಮಿಟ್; ದಕ್ಷಿಣ ದೇಶಗಳ ಪ್ರಬಲ ಉಪಸ್ಥಿತಿ; 2 ಲಕ್ಷ ಜನರು ನೋಡುವ ನಿರೀಕ್ಷೆ

ಟ್ರಸ್ಟೆಡ್ ಟೆಕ್ ಅಲಯನ್ಸ್ ನ 15 ಕಂಪನಿಗಳು

  1. ಆಂಥ್ರೋಪಿಕ್, ಅಮೆರಿಕ
  2. ಅಮೇಜಾನ್ ವೆಬ್ ಸರ್ವಿಸಸ್ (ಎಡಬ್ಲ್ಯುಎಸ್), ಅಮೆರಿಕ
  3. ಕಸ್ಸಾವ ಟೆಕ್ನಾಲಜೀಸ್, ದಕ್ಷಿಣ ಆಫ್ರಿಕಾ
  4. ಕೋಹೀರ್ (ಕೊಹೆರೆ), ಕೆನಡಾ
  5. ಎರಿಕ್ಸನ್, ಸ್ವೀಡನ್, ಯುರೋಪ್
  6. ಗೂಗಲ್ ಕ್ಲೌಡ್, ಅಮೆರಿಕ
  7. ಹ್ಯಾನ್ವಾ (ಹನ್ವಾ), ದಕ್ಷಿಣ ಕೊರಿಯಾ
  8. ಜಿಯೋ ಪ್ಲಾಟ್ಫಾರ್ಮ್ಸ್, ಭಾರತ
  9. ಮೈಕ್ರೋಸಾಫ್ಟ್, ಅಮೆರಿಕ
  10. ನೋಕಿಯಾ, ಫಿನ್ಲ್ಯಾಂಡ್ (ಯೂರೋಪ್)
  11. ಎನ್ ಸ್ಕೇಲ್ (ಎನ್‌ಸ್ಕೇಲ್), ಯೂರೋಪ್
  12. ಎನ್ಟಿಟಿ, ಜಪಾನ್
  13. ರಾಪಿಡಸ್, ಜಪಾನ್
  14. ಸಾಬ್, ಅಮೆರಿಕ
  15. ಎಸ್ಎಪಿ, ಜರ್ಮನಿ

ಐ ಹೊಂದಾಣಿಕೆಗೆ ಐದು ಅಂಶಗಳು

ಟ್ರಸ್ಟೆಡ್ ಟೆಕ್ ಅಲಯನ್ಸ್ ಅಥವಾ ವಿಶ್ವಾಸೀ ತಂತ್ರಜ್ಞಾನ ಮೈತ್ರಿಗೆ ಐದು ಅಂಶಗಳ ಆಧಾರ ಪ್ರಕ್ರಿಯೆ. ಪಾರದರ್ಶಕ ಕಾರ್ಪೊರೇಟ್ ಆಡಳಿತ ಮತ್ತು ನೈತಿಕ ನಡಾವಳಿ; ಕಾರ್ಯಾಚರಣೆಯ ಪಾರದರ್ಶಕತೆ; ಸುಭದ್ರ ಅಭಿವೃದ್ಧಿ ಮೊದಲಾದವರು.

ಇದನ್ನೂ ಓದಿ: ಹೊಸ ಐಟಿ ರೂಲ್ಸ್; ಎಐ ಸೃಷ್ಟಿದ ಕಾಂಟೆಂಟ್‌ಗೆ ಲೇಬಲಿಂಗ್ ಕಡ್ಡಾಯ; ಫೇಸ್ಬುಕ್, ಇನ್ಸ್ಟಾಗಳಿಗೆ ಕಠಿಣ ನಿಯಮ

ಆಯಾ ನಾಡಿನ ಕಾನೂನು ಕಟ್ಟಳೆಗಳಿಗೆ ಗೌರವ ಕೊಡುವುದು, ಡಾಟಾ ರಕ್ಷಣೆ, ಉತ್ತಮ ಪೂರೈಕೆ ಸರಪಳಿ ನಿರ್ಮಿಸುವುದು, ಸುಭದ್ರವಾದ ಡಿಜಿಟಲ್ ಇಕೋಸಿಸ್ಟಂ ನಿರ್ಮಿಸುವುದು ಇವುಗಳಂತಹ ಕಾರ್ಯಗಳಿಗೆ ಈ ಮೈತ್ರಿಕೂಟದ ಆದ್ಯತೆ ಕೊಡುವ ನಿರೀಕ್ಷೆಯಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *