Bengaluru: ಶ್ವಾನ ಪ್ರಿಯರ ಗಮನಕ್ಕೆ, ಬೀದಿನಾಯಿಗಳಿಗೆ ಆಹಾರ ಹಾಕಲು ನಗರದಲ್ಲಿ 450 ಸ್ಥಳಗಳ ಗುರುತು

Bengaluru: ಶ್ವಾನ ಪ್ರಿಯರ ಗಮನಕ್ಕೆ, ಬೀದಿನಾಯಿಗಳಿಗೆ ಆಹಾರ ಹಾಕಲು ನಗರದಲ್ಲಿ 450 ಸ್ಥಳಗಳ ಗುರುತು

Bengaluru: ಶ್ವಾನ ಪ್ರಿಯರ ಗಮನಕ್ಕೆ, ಬೀದಿನಾಯಿಗಳಿಗೆ ಆಹಾರ ಹಾಕಲು ನಗರದಲ್ಲಿ 450 ಸ್ಥಳಗಳ ಗುರುತು

ಸಾರ್ವಜನಿಕ ಸುರಕ್ಷತೆ ಮತ್ತು ನೈರ್ಮಲ್ಯ ಕಾಪಾಡುವ ಉದ್ದೇಶದಿಂದ, ನಗರದಾದ್ಯಂತ ಬೀದಿ ನಾಯಿಗಳಿಗೆ ಆಹಾರ ನೀಡಲು 450 ಸ್ಥಳಗಳನ್ನು ಗುರುತಿಸಿದೆ. ಸುಪ್ರೀಂಕೋರ್ಟ್ ಸೂಚನೆಯಂತೆ ಈ ಕ್ರಮ ಕೈಗೊಂಡಿದ್ದು, ಪ್ರಾಣಿ ಪ್ರಿಯರು ನಿಗದಿತ ಸ್ಥಳಗಳಲ್ಲೇ ಆಹಾರ ನೀಡಿ, ಸ್ವಚ್ಛತೆ ಕಾಪಾಡಬೇಕೆಂದು ಸೂಚಿಸಲಾಗಿದೆ.

ಬೆಂಗಳೂರು ನಗರದಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕಲು ಜಿಬಿಎ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ 450 ಸ್ಥಳಗಳನ್ನು ಗುರುತಿಸಿದೆ. ರಾಜಾಜಿನಗರ ಸೇರಿದಂತೆ ನಗರದ ಕೆಲವೆಡೆ ಈಗಾಗಲೇ ನಾಯಿ ಆಹಾರ ನೀಡುವ ಸ್ಥಳ ನಿಗದಿಪಡಿಸಿ ನಾಮಫಲಕ ಅಳವಡಿಸಲಾಗಿದೆ.

ಬೆಂಗಳೂರು ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು 150 ಕೇಂದ್ರಗಳನ್ನು ಗುರುತಿಸಲಾಗಿದೆ. ಕೇಂದ್ರ ಪಾಲಿಕೆಯಲ್ಲಿ 90, ಪಶ್ಚಿಮದಲ್ಲಿ 85, ಉತ್ತರದಲ್ಲಿ 70 ಮತ್ತು ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ 55 ಕೇಂದ್ರಗಳನ್ನು ಗುರುತಿಸಲಾಗಿದೆ.

ಸಾರ್ವಜನಿಕ ಸುರಕ್ಷತೆ ಮತ್ತು ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕುವ ಸ್ಥಳಗಳನ್ನು ಗುರುತಿಸಲಾಗಿದೆ. ಬೀದಿ ನಾಯಿ ಪ್ರಿಯರು, ಸಾರ್ವಜನಿಕರು ಗುರುತಿಸಲ್ಪಟ್ಟ ಸ್ಥಳಗಳಲ್ಲೇ ಆಹಾರ ಹಾಕುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಆಹಾರ ಹಾಕುವುದಷ್ಟೇ ಅಲ್ಲ, ಆ ಜಾಗವನ್ನು ಸ್ವಚ್ಛವಾಗಿರಿಸುವ ಜವಾಬ್ದಾರಿಯನ್ನೂ ಪ್ರಾಣಿಪ್ರಿಯರು ಹೊರಬೇಕು. ಜನದಟ್ಟಣೆ ಕಡಿಮೆ ಇರುವ ಸಮಯದಲ್ಲಿ ಆಹಾರ ಹಾಕಬೇಕು. ಇದರಿಂದ ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಆಗುವ ತೊಂದರೆಯನ್ನು ತಪ್ಪಿಸಬಹುದಾಗಿದೆ ಎಂದು ಜಿಬಿಎ ಹೇಳಿದೆ.

ಇದನ್ನೂ ಓದಿ: ಬೆಂಗಳೂರು ಬೇಕರಿಯ ದುರಹಂಕಾರ: 2 ಸಾವಿರ ಟೇಬಲ್‌ ಚಾರ್ಜ್‌ ಪ್ರಶ್ನಿಸಿದ ಗ್ರಾಹಕನಿಗೆ ‘ಬಡವ’ ಎಂದು ನಿಂದಿಸಿದ ಸಿಬ್ಬಂದಿ!

ಎಲ್ಲೆಂದರಲ್ಲೇ ಆಹಾರ ಹಾಕುವುದರಿಂದ ಅದನ್ನು ತಿನ್ನಲು ಬರುವ ಬೀದಿ ನಾಯಿಗಳು ಕೆಲವೊಮ್ಮೆ ಸಾರ್ವಜನಿಕರ ಮೇಲೆ ದಾಳಿ ನಡೆಸಿದ ಘಟನೆಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಸೂಚನೆಯಂತೆ ನಾಯಿಗಳಿಗೆ ಆಹಾರ ನೀಡಲು ಜಿಬಿಎ ಸ್ಥಳಗಳನ್ನು ಗುರುತಿಸಿದೆ.

ಇದನ್ನೂ ಓದಿ: ಬೆಂಗಳೂರಿನ ನಿವೃತ್ತ ನೇವಿ ಕ್ಯಾಪ್ಟನ್ ಹ*ತ್ಯೆ ಪ್ರಕರಣ: ಹುಟ್ಟಿಸಿದ ತಂದೆ-ತಾಯಿಯನ್ನೇ ಕೊಂದವನ ಕೈಯಲ್ಲೇ ಅಂತ್ಯಸಂಸ್ಕಾರ!

Source link

Leave a Reply

Your email address will not be published. Required fields are marked *