ಬಿಕ್ಲು ಶಿವ ಕೊಲೆ ಪ್ರಕರಣ: ಬಿಜೆಪಿ ಶಾಸಕ ಬೈರತಿ ಬಸವರಾಜ್ 7 ದಿನ ಸಿಐಡಿ ಕಸ್ಟಡಿಗೆ | Bjp Mla Byrati Basavaraj Sent To 7 Day Cid Custody In Biklu Shivu Case Mrq

BJP MLA Byrati Basavaraj ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ವೈದ್ಯಕೀಯ ವರದಿ ಆಧರಿಸಿ 42ನೇ ಎಸಿಜೆಎಂ ನ್ಯಾಯಾಲಯವು ಏಳು ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿದೆ. 

ಬೆಂಗಳೂರು: ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಸಿಐಡಿ ಕಸ್ಟಡಿಗೆ ನೀಡಿ 42 ನೇ ಎಸಿಜೆಎಂ ನ್ಯಾಯಾಧೀಶರು ಆದೇಶಿಸಿದ್ದಾರೆ. ಅನಾರೋಗ್ಯದ ಹಿನ್ನೆಲೆ ಶಾಸಕರು ಜಯದೇವ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಜಯದೇವ ಆಸ್ಪತ್ರೆಯ ವೈದ್ಯರು ನೀಡಿದ ವರದಿ ಆಧಾರದ ಮೇಲೆ ಏಳು ದಿನಗಳ ಕಾಲ (ಫೆಬ್ರವರಿ 21ರವರೆಗೆ) ಕಸ್ಟಡಿಗೆ ನೀಡಿ ಆದೇಶ ನೀಡಲಾಗಿದೆ. ಇಂದು ಶಾಸಕ ಬೈರತಿ ಬಸವರಾಜ್ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಸಿಐಡಿ ಪರವಾಗಿ ಎಸ್‌ಪಿಪಿ ಅಶೋಕ್ ನಾಯ್ಕ್, ಸಿಐಡಿ ತನಿಖಾಧಿಕಾರಿ ಡಿವೈಎಸ್ ಪಿ ಗೌತಮ್ ಹಾಜರಿದ್ದರು.

ಬೈರತಿ ಬಸವರಾಜ್ ನಿವಾಸದಲ್ಲಿ ಕಾರ್ಯಕರ್ತರ ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜಕೀಯ ಷಡ್ಯಂತರ ಹೇಗೆಲ್ಲಾ ನಡೆಯಿತ್ತದೆ ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.

ನನ್ನ ಮೇಲೆ ತಂದೆ ಯಡಿಯೂರಪ್ಪ ಮೇಲೆ 30-40 ಕೇಸ್ ಎದುರಿಸಿದ್ದೇನೆ. ನಾವು ಬಸವರಾಜ್ ಕುಟುಂಬದ ಜೊತೆ ಇದ್ದೇವೆ. ಪಕ್ಷ ಸಹ ಅವರ ಜೊತೆಯಲ್ಲಿರುತ್ತದೆ. ಲೀಗಲ್ ಟೀಮ್ ಸಂಪರ್ಕ ಕೂಡ ಮಾಡುತ್ತೇವೆ. ಬೈರತಿ ಬಸವರಾಜ್ ಯಡಿಯೂರಪ್ಪ ಸರ್ಕಾರ ಬರುವಾಗ ಧೈರ್ಯ ಮಾಡಿ ರಾಜೀನಾಮೆ ನೀಡಿದ್ದವರು. ವಿಧಾನಸೌಧಕ್ಕೆ ಓಡೋಡಿ ಬಂದವರು. ಅದನ್ನು ರಾಜ್ಯದ ಜನರು ಸಹ ಮರೆಯೋದಿಲ್ಲ. ಕಾರ್ಯಕರ್ತರು ಆತಂಕಗೊಳ್ಳೋದು ಬೇಡ. ನಾವು ನಿಮ್ಮ ಜೊತೆಗೆ ಇದ್ದೇವೆ. ಕಾನೂನು ಪ್ರೊಸೇಸ್ ಸ್ವಲ್ಪ ಸಮಯ ಆಗುತ್ತದೆ ಎಂದು ಹೇಳಿದರು.

Source link

Leave a Reply

Your email address will not be published. Required fields are marked *