ಮಹಿಳೆ ನಾಪತ್ತೆ ಕೇಸ್​​ಗೆ ಟ್ವಿಸ್ಟ್​​: ಏಕಪತ್ನಿ ವ್ರತಸ್ಥನಂತೆ ಪೋಸ್​​ ಕೊಟ್ಟವ ಸಿಕ್ಕಿಬಿದ್ದಿದ್ದು ಮತ್ತೊಬ್ಬಳ ಜೊತೆ

ಮಹಿಳೆ ನಾಪತ್ತೆ ಕೇಸ್​​ಗೆ ಟ್ವಿಸ್ಟ್​​: ಏಕಪತ್ನಿ ವ್ರತಸ್ಥನಂತೆ ಪೋಸ್​​ ಕೊಟ್ಟವ ಸಿಕ್ಕಿಬಿದ್ದಿದ್ದು ಮತ್ತೊಬ್ಬಳ ಜೊತೆ


ಹಾಸನ/ ತುಮಕೂರು, ಫೆಬ್ರುವರಿ 15: ಮದುವೆಗೆಂದು ತೆರಳಿ ನಾಪತ್ತೆಯಾಗಿದ್ದ ಮಹಿಳೆ ಪ್ರಿಯಾಂಕಾಳನ್ನು ಪರಪುರುಷನ ಜೊತೆ ಪತ್ತೆ ಮಾಡಿರುವ ಪೊಲೀಸರು, ಪ್ರಿಯಾಂಕಾ ಮತ್ತು ಡೇವಿಡ್ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಹಾಸನಡಿವೈಎಸ್ಪಿ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಿಯಾಂಕಾ ನಾಪತ್ತೆಯಾದಾಗ ಆಕೆ ಕೊಲೆಯಾಗಿರಬಹುದು ಅಥವಾ ಅಪಹರಣಕ್ಕೊಳಗಾಗಿರಬಹುದು ಎಂಬ ಆತಂಕ ಸೃಷ್ಟಿಯಾಗಿದೆ. ಆದರೆ, ಕತೆ ಕಟ್ಟಿದ್ದ ಆಕೆ ಪತಿಯ ಸ್ನೇಹಿತನ ಜೊತೆಗೆ ಕಳೆದ ಎರಡು ದಿನಗಳಿಂದ ಇದ್ದಿದ್ದು ತನಿಖೆ ವೇಳೆ ಬಯಲಾಗಿದೆ. ತ್ತೊಂದೆಡೆಗೆ ಏಕಪತ್ನಿ ವ್ರತಸ್ಥನಾಗಿವನ ಮನೆಯಲ್ಲಿ ಪ್ರಿಯಾಂಕಾ ಕಂಡಿರೋದು ಸ್ಥಳೀಯರು ಹೌಹಾರುವಂತೆ ಮಾಡಿದ್ದಾರೆ. ಸ್ವಾರಿ ಗರ್ಲ್ಸ್, ನನ್ನ ಹೆಂಡತಿ ಫುಲ್ ಸ್ಟ್ರಿಕ್ಟ್ ಎಂದು ಬೈಕ್ ಮೇಲೆ ಸ್ಟಿಕ್ಕರ್ ಹಾಕಿದ್ದ ಈತ, ಅದರ ಟ್ಯಾಂಕ್ ಮೇಲೆ ಡಾರ್ಲಿಂಗ್ ಅಂತಲೂ ಬರೆಸಿದ್ದ. ಖುದ್ದು ಮನೆ ಮಾಲೀಕ ಹೇಳುವಂತೆ ಬೆಕ್ಕಿನಂತೆ ಕಾಣಿಸಿಕೊಂಡಿದ್ದ ಈತನ ಮನೆಯಲ್ಲಿ ಮಹಿಳೆ ಪ್ರಿಯಾಂಕಾ ಸೇರಿಕೊಂಡಿದ್ದಾಳೆ ಎಂಬ ಗೊಂದಲ ಮುಂದುವರಿದಿದೆ. ಈ ಬಗ್ಗೆ ತನಿಖೆ ನಡೆಸುತ್ತಿದೆ, ಸತ್ಯ ಇನ್ನಷ್ಟೇ ಹೊರ ಬರಬೇಕಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *