ಮದ್ಯಪಾನ ಮಾಡಿ ಆಟೋ ಚಲಾಯಿಸಿದ ಚಾಮರಾಜನಗರದ ಚಾಲಕನಿಗೆ ನ್ಯಾಯಾಲಯವು ವಿನೂತನ ಶಿಕ್ಷೆ ವಿಧಿಸಿದೆ. ನ್ಯಾಯಾಲಯದ ಆದೇಶದಂತೆ, ಚಾಲಕನು ‘ಕುಡಿದು ವಾಹನ ಓಡಿಸಬೇಡಿ’ ಎಂಬ ಫಲಕ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ನಿಂತು ಜಾಗೃತಿ ಮೂಡಿಸಿದ್ದಾನೆ. ಈ ಶಿಕ್ಷೆಯ ಜೊತೆಗೆ ದಂಡವನ್ನೂ ವಿಧಿಸಲಾಗಿದೆ.
14
Image Credit : Asianet News
ಬೋರ್ಡ್ ಹಿಡಿದು ಜಾಗೃತಿ
ಮದ್ಯಪಾನ ಮಾಡಿ ಆಟೋ ಚಲಾಯಿಸಿದ ಚಾಲಕನಿಗೆ ನ್ಯಾಯಾಲಯ ವಿಶೇಷವಾದ ಶಿಕ್ಷೆಯನ್ನು ನೀಡಿದೆ. ನ್ಯಾಯಾಲಯದ ಆದೇಶದ ಪ್ರಕಾರ, ರಸ್ತೆ ಬದಿ ನಿಂತು ಕುಡಿದು ವಾಹನ ಓಡಿಸಬೇಡಿ ಎಂಬ ಬೋರ್ಡ್ ಹಿಡಿದು ಜಾಗೃತಿ ಮೂಡಿಸಿದ್ದಾನೆ.
24
Image Credit : Asianet News
ಚಾಮರಾಜನಗರದ ರಾಜಶೇಖರ್
ಚಾಮರಾಜನಗರದ ರಾಜಶೇಖರ್ ವಿನೂತನ ಶಿಕ್ಷೆಗೊಳಗಾದ ಆಟೋ ಚಾಲಕ. ಮದ್ಯಪಾನ ಮಾಡಿ ಆಟೋ ಚಲಾಯಿಸುತ್ತಿದ್ದ ರಾಜಶೇಖರ್‌ನನ್ನು ಸಂಚಾರಿ ಪೊಲೀಸರು ಹಿಡಿದಿದ್ದರು. ಈ ಸಂಬಂಧ ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
34
Image Credit : Asianet News
ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ
44
Image Credit : Asianet News