‘ರಕ್ಕಸಪುರದೋಳ್’ ವಿಲನ್ ಅನಿರುದ್ಧ್ ಭಟ್ ಬಗ್ಗೆ ಇಂಟರೆಸ್ಟಿಂಗ್ ವಿಷಯಗಳು

‘ರಕ್ಕಸಪುರದೋಳ್’ ವಿಲನ್ ಅನಿರುದ್ಧ್ ಭಟ್ ಬಗ್ಗೆ ಇಂಟರೆಸ್ಟಿಂಗ್ ವಿಷಯಗಳು


ರಾಜ್ ಬಿ ಶೆಟ್ಟಿ, ಅನಿರುದ್ಧ ಭಟ್

ಜನಮೆಚ್ಚುಗೆ ಪಡೆದಿರುವ ‘ರಕ್ಕಸಪುರದೋಳ್’ (ರಕ್ಕಸಪುರದೋಳ್) ಸಿನಿಮಾದಿಂದ ನಟ ಅನಿರುದ್ಧ್ ಭಟ್ ಅವರ ಖ್ಯಾತಿ. ಈ ಸಿನಿಮಾ ನೋಡಿದ ಎಲ್ಲರೂ ಕೂಡ ಅನಿರುದ್ಧ್ ಭಟ್ ಅವರ ನಟನೆಯನ್ನು ಹೊಗಳುತ್ತಿದ್ದಾರೆ. ಈ ಸಿನಿಮಾದಲ್ಲಿ ಅನಿರುದ್ಧ್ ಭಟ್ ಅವರು ವಿಲನ್ ಪಾತ್ರ ಮಾಡಿದರೂ ಹೀರೋ ರೀತಿಯೇ ಮಿಂಚುತ್ತಿದ್ದಾರೆ. ವೀಕ್ಷಿಸು ಅವರನ್ನು ಆ ಪರಿ ಇಷ್ಟಪಟ್ಟಿದ್ದಾರೆ. ಬಣ್ಣದ ಲೋಕಕ್ಕೆ ಅನಿರುದ್ಧ್ ಭಟ್ (ಅನಿರುದ್ಧ ಭಟ್) ಅವರು ತುಂಬ ಹೊಸಬರೇನೂ ಅಲ್ಲ. ‘ಟಿವಿ9 ಡಿಜಿಟಲ್’ ಜೊತೆ ಮಾತನಾಡಿರುವ ಅವರು ತಮ್ಮ ಹಿನ್ನೆಲೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸುಳ್ಯದ ಹುಡುಗ: ಅನಿರುದ್ಧ್ ಭಟ್ ಅವರು ಮೂಲತಃ ಸುಳ್ಯದವರು. ಅಲ್ಲಿ ಜನಿಸಿದ ಅವರು ನಂತರ ಕುಶಾಲನಗರದಲ್ಲಿ 10 ನೇ ತರಗತಿಯವರೆಗೆ ಓದಿದರು. ಉಡುಪಿಯಲ್ಲಿ ಪದವಿಪೂರ್ವ ಶಿಕ್ಷಣ ಪಡೆದರು. ಬೆಂಗಳೂರಿಗೆ ಬಂದು ಬಿಸಿಸಿ ಅಗ್ರಿಕಲ್ಚರ್ ಆಗಿದ್ದಾರೆ. ವಿದ್ಯಾಭ್ಯಾಸದ ಜೊತೆಯಲ್ಲೇ ಅವರಿಗೆ ಕಿರುಚಿತ್ರಗಳಲ್ಲಿ ಆಸಕ್ತಿ ಬೆಳೆಯಿತು. ಒಂದಷ್ಟು ಕಿರುಚಿತ್ರಗಳಿಗೆ ಅವರೇ ನಿರ್ದೇಶನ ಮಾಡಿ, ನಟಿಸಿದ್ದಾರೆ.

ಕಿರುಚಿತ್ರಗಳು: ‘ಸದ್ದಿಲ್ಲದೇ’, ‘ಬುದ್ಧಿವಂತ ದಡ್ಡರು’, ‘ಸರ್ಪ್ರೈಸ್ ಡಿನ್ನರ್’, ‘ಅಹಂ’, ‘ಡೋಂಟ್ ಲುಕ್ ಬ್ಯಾಕ್’ ಮುಂತಾದ ಕಿರುಚಿತ್ರಗಳನ್ನು ಅನಿರುದ್ಧ ಭಟ್ ಮಾಡಿದ್ದಾರೆ. ಯೂಟ್ಯೂಬ್ ಚಾನೆಲ್ ಮೂಲಕ ಕೆಲವು ಕಿರುಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ. ನಂತರ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು.

ಈ ಸಿನಿಮಾಗಳು: ಅನಿರುದ್ಧ್ ಭಟ್ ಅವರು ನಟಿಸಿದ ಮೊದಲ ಸಿನಿಮಾ ‘ಗುರುದೇವ ಹೊಯ್ಸಳ’. ಆ ಬಳಿಕ ಅವರು ‘ಇಬ್ಬನಿ ತಬ್ಬಿದ ಇಳೆಯಲಿ’ ಮತ್ತು ‘ಮ್ಯಾಕ್ಸ್’ ಸಿನಿಮಾದಲ್ಲಿ ಅಭಿನಯಿಸಿದರು. ಆದರೆ ಅವರಿಗೆ ಅತಿ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿದ್ದು 4ನೇ ಸಿನಿಮಾ ‘ರಕ್ಕಸಪುರದೋಳ್’.

ಅನಿರುದ್ಧ ಭಟ್

ಅನಿರುದ್ಧ ಭಟ್

ಎಡಿಟರ್ ಕೂಡ ಹೌದು: ಅನಿರುದ್ಧ್ ಭಟ್ ಅವರು ಆ್ಯಕ್ಟರ್, ಎಡಿಟರ್ ಕೂಡ ಹೌದು. ಜಾಹೀರಾತುಗಳು ಹಾಗೂ ವೆಡ್ಡಿಂಗ್ ವಿಡಿಯೋ ಸಂಕಲನ ಮಾಡುತ್ತಾರೆ. ಇದರಿಂದ ಅವರು ಹಣ ಸಂಪಾದನೆ ಮಾಡುತ್ತಾರೆ. ಉತ್ತಮ ನಟ ಆಗಬೇಕಿದ್ದರೆ ಸಿನಿಮಾದ ವಿವಿಧ ವಿಭಾಗಗಳ ಅರಿವು ಇರಬೇಕು ಎಂಬುದು ಅವರ ಬಲವಾದ ನಂಬಿಕೆ.

ಹೀರೋ ಆಗಬೇಕಿತ್ತು: ಎಲ್ಲರಂತೆ ಅನಿರುದ್ಧ್ ಅವರು ಕೂಡ ಹೀರೋ ಆಗಬೇಕು ಅಂತ ಚಿತ್ರರಂಗಕ್ಕೆ ಕಾಲಿಟ್ಟರು. ಆದರೆ ಆರಂಭದಿಂದಲೂ ಅವರಿಗೆ ನೆಗೆಟಿವ್ ಶೇಡ್ ಇರುವ ಪಾತ್ರಗಳೇ ಸಿಕ್ಕಿವೆ. ಆದರೆ ಮುಂದಿನ ದಿನಗಳಲ್ಲಿ ಹೀರೋ ಸೇರಿದಂತೆ ಎಲ್ಲ ರೀತಿಯ ಪಾತ್ರಗಳನ್ನು ಮಾಡಲು ಅವರು ಸಿದ್ಧವಾಗಿದ್ದಾರೆ.

ಇದನ್ನೂ ನೋಡಿ: ‘ರಕ್ಕಸಪುರದೋಳ್’ ನೋಡಲು ಬಂದ ಉಪೇಂದ್ರ

ನಟನೆ ಕಲಿತಿದ್ದು ಹೀಗೆ: ಅನಿರುದ್ಧ ಭಟ್ ಅವರು ಯಾವುದೇ ನಟನಾ ಶಾಲೆಗೆ ಹೋಗಿಲ್ಲ. ರಂಗಭೂಮಿಯಲ್ಲೂ ಅವರು ಕೆಲಸ ಮಾಡಿಲ್ಲ. ಕಿರುಚಿತ್ರಗಳನ್ನು ಮಾಡುತ್ತಾ, ಸಿನಿಮಾಗಳನ್ನು ನೋಡುತ್ತಲೇ ಅವರು ನಟನೆ ಕಲಿತಿರುವುದು ವಿಶೇಷ.

ಅನಿರುದ್ಧ್ ಭಟ್ ವಯಸ್ಸು: 1997ರ ನವೆಂಬರ್ 30 ರಂದು ಜನಿಸಿದ ಅನಿರುದ್ಧ ಭಟ್ ಅವರಿಗೆ ಈಗ 28 ವರ್ಷ ವಯಸ್ಸು. 5-6 ವರ್ಷಗಳ ಕಾಲ ತಮಗೆ ಮದುವೆ ಬಗ್ಗೆ ಆಲೋಚನೆ ಇಲ್ಲ. 6.1 ಅಡಿ ಎತ್ತರ ಇರುವ ಅವರ ಕಂಠ ಕೂಡ ಖಡಕ್ ಆಗಿದೆ.

6 ಭಾಷೆ ಬಲ್ಲವರು: ಅಪ್ಪಟ ಕನ್ನಡದ ಈ ಪ್ರತಿಭಾವಂತನಿಗೆ ಕನ್ನಡದ ಜೊತೆ ಹಿಂದಿ, ಇಂಗ್ಲಿಷ್, ತೆಲುಗು, ತಮಿಳು, ಮಲಯಾಳಂ ಭಾಷೆಗಳು ಕೂಡ ಗೊತ್ತಿವೆ. ಯಾವುದೇ ಪರಭಾಷೆಯಿಂದ ಉತ್ತಮ ಅವಕಾಶಗಳು ಸಿಕ್ಕರೆ ನಟಿಸುವ ಹಂಬಲ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *