ಟ್ಯಾಕ್ಸ್ ಪಾವತಿಯಿಂದ ಹಿಡಿದು ದಾಖಲೆಗಳವರೆಗೆ, ಪಿತ್ರಾರ್ಜಿತ ಆಸ್ತಿ ವರ್ಗಾವಣೆಗೆ ಅಗತ್ಯವಾದವುಗಳು

ಟ್ಯಾಕ್ಸ್ ಪಾವತಿಯಿಂದ ಹಿಡಿದು ದಾಖಲೆಗಳವರೆಗೆ, ಪಿತ್ರಾರ್ಜಿತ ಆಸ್ತಿ ವರ್ಗಾವಣೆಗೆ ಅಗತ್ಯವಾದವುಗಳು


ನಿಮ್ಮ ತಂದೆ ಮತ್ತು ತಾಯಿ ನಿಧನರಾದ ನಂತರ, ಅವರ ವಾರಸುದಾರರಾದ ನೀವು ಅವರ ಆಸ್ತಿಪಾಸ್ತಿ ಪಡೆಯಲು ಅರ್ಹರಾಗುತ್ತೀರಿ. ಈ ಪಿತ್ರಾರ್ಜಿತ ಆಸ್ತಿ (ಪಿತ್ರಾರ್ಜಿತ ಆಸ್ತಿ) ಹಲವರಿಗೆ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಬಹುದು. ಪಿತ್ರಾರ್ಜಿತ ಆಸ್ತಿ ವರ್ಗಾವಣೆ ಮಾಡಿಕೊಳ್ಳುವ ಮುನ್ನ ಅನುಸರಿಸಬೇಕಾದ ಕೆಲ ವಿಧಾನಗಳು ಮತ್ತು ಬಾಧ್ಯತೆಗಳು ಇವೆ. ಮೃತರ ಟ್ಯಾಕ್ಸ್ ರಿಟರ್ನ್ ಸಲ್ಲಿಕೆಯಿಂದ ಹಿಡಿದು ಆಸ್ತಿಯ ಲಾಭ ಗಳಿಕೆ ಟ್ಯಾಕ್ಸ್ ವರೆಗೂ ನೀವು ತೆಗೆದುಕೊಳ್ಳಬೇಕಾದ ಕ್ರಮಗಳ ವಿವರ ಇಲ್ಲಿದೆ.

ಮೃತರ ಐಟಿ ರಿಟರ್ನ್ ಸಲ್ಲಿಕೆ

ಮೃತರು ನಿಧನರಾದ ವರ್ಷಕ್ಕೆ ಅವರ ಐಟಿ ರಿಟರ್ನ್ ಸಲ್ಲಿಕೆ ಮಾಡಬೇಕು. ಆ ವರ್ಷದ ಯಾವುದೇ ಆದಾಯ ಇದ್ದರೂ ಅದನ್ನು ತೋರಿಸಿ, ಅದಕ್ಕೆ ತೆರಿಗೆ ಕಟ್ಟುವುದಿದ್ದರೆ ಕಟ್ಟಬೇಕು.

ಪಿತ್ರಾರ್ಜಿತ ಆಸ್ತಿಗೆ ಟ್ಯಾಕ್ಸ್ ಇರುವುದಿಲ್ಲ, ಆದರೆ ಇದು ಇರುತ್ತೆ…

ಅಮೆರಿಕದಲ್ಲಿರುವಂತೆ ಪಿತ್ರಾರ್ಜಿತ ಆಸ್ತಿಗೆ ಎಸ್ಟೇಟ್ ಟ್ಯಾಕ್ಸ್ ಎಂಬುದು ಭಾರತದಲ್ಲಿ ಇರುವುದಿಲ್ಲ. ನೀವು ಟ್ಯಾಕ್ಸ್ ರಹಿತವಾಗಿ ಆಸ್ತಿ ವರ್ಗಾವಣೆ ಮಾಡಿಕೊಳ್ಳಬಹುದು. ಆದರೆ, ಮುಂದೆ ಆಸ್ತಿಯಿಂದ ಆದಾಯ ಗಳಿಸಿದರೆ ಅದಕ್ಕೆ ಟ್ಯಾಕ್ಸ್ ಅನ್ವಯವಾಗುತ್ತದೆ.

ಇದನ್ನೂ ಓದಿ: ನಗರಗಳೇ ಅಭಿವೃದ್ಧಿ ಯಂತ್ರಗಳು; ಸರ್ಕಾರದಿಂದ 1 ಲಕ್ಷ ಕೋಟಿ ರೂ ಅರ್ಬನ್ ಚಾಲೆಂಜ್ ಫಂಡ್

ನಿಮ್ಮ ಇನ್ಕಮ್ ಟ್ಯಾಕ್ಸ್‌ಗೆ ರಿಟರ್ನ್ ಸಲ್ಲಿಸುವಾಗ ಪಿತ್ರಾರ್ಜಿತ ಆಸ್ತಿ ಮತ್ತು ಅದರಿಂದ ಸೃಷ್ಟಿಯಾಗುವ ಆದಾಯದ ಮಾಹಿತಿ ಇರಬೇಕು. ಪಿತ್ರಾರ್ಜಿತ ಆಸ್ತಿಯಾಗಿ ಬಂದ ಮನೆಯ ಬಾಡಿಗೆ ಆದಾಯವನ್ನು ‘ಇಂಕಮ್ ಫ್ರಂ ಹೌಸ್ ಪ್ರಾಪರ್ಟಿ’ ಎಂದು ತೋರಿಸಬೇಕು. ಬಡ್ಡಿ, ಡಿವಿಡೆಂಡ್ ಆದಾಯ ಇದ್ದರೆ ‘ಇಂಕಮ್ ಫ್ರಂ ಅದರ ಸೊರ್ಸಸ್’ ಎಂದು ತೋರಿಸಬೇಕು.

ಕ್ಯಾಪಿಟಲ್ ಗೇನ್ ಟ್ಯಾಕ್ಸ್

ನೀವು ಪಿತ್ರಾರ್ಜಿತವಾಗಿ ಪಡೆದ ಆಸ್ತಿಯನ್ನು ಮಾರಿದಾಗ ಅದಕ್ಕೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಕಟ್ಟಬೇಕು. ಆ ಆಸ್ತಿಯನ್ನು ನಿಮ್ಮ ತಂದೆ ಅಥವಾ ತಾಯಿ ಖರೀದಿಸಿದಾಗ ಯಾವ ದರ ಇತ್ತು, ಮತ್ತು ಈಗ ದರಕ್ಕೆ ಮಾರಕವಾಗಿದೆ, ಅದರಿಂದ ಬಂದಿರುವ ಲಾಭಕ್ಕೆ ಟ್ಯಾಕ್ಸ್ ಕಟ್ಟಬೇಕು. ಪಿತ್ರಾರ್ಜಿತವಾಗಿ ಪಡೆದ ಆಸ್ತಿಯನ್ನು ಎರಡಕ್ಕೂ ಹೆಚ್ಚು ವರ್ಷದ ನಂತರ ಮಾರಿದಾಗ ಎಲ್ಟಿಸಿಜಿ ಟ್ಯಾಕ್ಸ್ ಅನ್ವಯಿಸುತ್ತದೆ. ಇಲ್ಲದಿದ್ದರೆ ಎಸ್ಟಿಸಿಜಿ ಟ್ಯಾಕ್ಸ್ ಅನ್ವಯವಾಗುತ್ತದೆ.

ಸಾಲ ಬಾಧ್ಯತೆ ಉಳಿದಿದ್ದರೆ ಕಟ್ಟಿರಿ…

ಮೃತರು ಯಾವುದಾದರೂ ಸಾಲ ಬಾಧ್ಯತೆ ಉಳಿಸಿಕೊಂಡಿದ್ದರೆ ಅದನ್ನು ತೀರಿಸುವುದು ವಾರಸುದಾರರ ಕರ್ತವ್ಯ. ಅದರಲ್ಲೂ ಆಸ್ತಿಯನ್ನು ಅಡಮಾನ ಇಟ್ಟು ಪಡೆದ ಸಾಲವನ್ನು ತೀರಿಸಿದರೆ ಮಾತ್ರವೇ ಆಸ್ತಿ ವರ್ಗಾವಣೆ ಸಾಧ್ಯ.

ಇದನ್ನೂ ಓದಿ: ಆಂಟ್ರೋಪಿಕ್ ಹಾಗೂ ಇತರೆ 13 ಎಐ ಕಂಪನಿಗಳೊಂದಿಗೆ ಮುಖೇಶ್ ಅಂಬಾನಿ ಅವರ ಜಿಯೋ ಮೈತ್ರಿ

ಸರಿಯಾದ ದಾಖಲೆಗಳು ಜೊತೆಗಿರಲಿ…

ನೀವು ಪಿತ್ರಾರ್ಜಿತವಾಗಿ ಆಸ್ತಿ ಪಡೆಯಲು ಹಕ್ಕುದಾರರಾಗಿದ್ದರೆ ಸರಿಯಾದ ದಾಖಲೆಗಳನ್ನು ಹೊಂದಿರಬೇಕು. ಉಯಿಲು ಇದ್ದರೆ ಅದು ಇರಬೇಕು. ಸಕ್ಸಶನ್ ಸರ್ಟಿಫಿಕೇಟ್, ಡೆತ್ ಸರ್ಟಿಫಿಕೇಟ್‌ಗಳು ಇರಬೇಕು. ಆಸ್ತಿ ಮೌಲ್ಯಮಾಪನ ಮಾಡುವ ವ್ಯಾಲ್ಯುಯೇಶನ್ ರಿಪೋರ್ಟ್ ಇರಬೇಕು. ಆಸ್ತಿ ವರ್ಗಾವಣೆ ವೇಳೆ ಇದನ್ನು ಕೇಳದಿದ್ದರೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *