ಹುಲಿಯ ಮೃತದೇಹ ಪತ್ತೆಚಿತ್ರ ಕ್ರೆಡಿಟ್ ಮೂಲ: tv9 ಕನ್ನಡ
ಚಾಮರಾಜನಗರ, ಫೆಬ್ರವರಿ 15: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಜಲಾಶಯದಲ್ಲಿ ಗಂಡು ಹುಲಿಯ ಮೃತದೇಹ (ಹುಲಿ ಮೃತದೇಹ) ಪತ್ತೆ ಆಗಿರುವಂತಹ ಘಟನೆ. ಡ್ಯಾಂನಲ್ಲಿ ಹುಲಿಯ ಶವ ತೇಲುತ್ತಿರುವುದನ್ನು ನೋಡಿದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಘಟನಾ ಸ್ಥಳಕ್ಕೆ ಕೊಳ್ಳೇಗಾಲ ಪೊಲೀಸರು ಮತ್ತು ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿ ಭೇಟಿ ನೀಡಿದ್ದಾರೆ. ಸದ್ಯ ಜಲಾಶಯದಿಂದ ಹುಲಿಯ ಮೃತದೇಹವನ್ನು ಅರಣ್ಯ ಸಿಬ್ಬಂದಿತೆಗೆದಿದ್ದು, ಪಶುವೈದ್ಯ ಸ್ಥಳದಲ್ಲೇ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ, ಸ್ಯಾಂಪಲ್ ಸಂಗ್ರಹಿಸಿದ ಎಫ್‌ಎಸ್‌ಎಸ್‌ಎಲ್‌ಗೆ ರವಾನಿಸಲಾಗಿದೆ.
ಚಾಮರಾಜನಗರದಲ್ಲಿ ಮಿತಿಮೀರಿದ ಚಿರತೆ ಉಪಟಳ
ಇನ್ನು ಗಡಿನಾಡು ಚಾಮರಾಜನಗರದಲ್ಲಿ ದಿನ ಕಳೆದಂತೆ ಚಿರತೆ ಉಪಟಳವೂ ಮಿತಿಮೀರಿದೆ. ಇತ್ತೀಚೆಗೆ ಹನೂರು ಭಾಗದಲ್ಲಿ ಚಿರತೆ ದಾಳಿ ನಡೆಸಿ ಮೂರು ಕುರಿಯನ್ನ ತಿಂದು ತೇಗಿತ್ತು. ಕಳೆದ ಒಂದು ತಿಂಗಳಿನಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಬರೋಬ್ಬರಿ 15 ಕಡೆ ಚಿರತೆ ದಾಳಿ ನಡೆದಿದೆ.
ಇದನ್ನೂ ಓದಿ: ಜನರನ್ನ ಬಲಿ ಪಡೆಯುತ್ತಿದ್ದ ಹುಲಿಗಳ ಸೆರೆ: ಆಪರೇಷನ್ T2 ಆಲ್ಫಾ 5ನೇ ಕಾರ್ಯಾಚರಣೆಯು ಯಶಸ್ವಿ
ಗಡಿ ನಾಡು ಚಾಮರಾದನಗರ ಅಪಾರ ವನ್ಯ ಮೃಗಗಳ ಸಂಪತ್ತು ಹೊಂದಿರುವ ಜಿಲ್ಲೆ. ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ಎರೆಡೆರೆಡು ಟೈಗರ್ ರಿಸರ್ವ್ ಫಾರೆಸ್ಟ್ ಹಾಗೂ ಕಾವೇರಿ ವೈಲ್ಡ್ ಲೈಫ್ ಮಲೆ ಮಹದೇಶ್ವರ ವನ್ಯಜೀವಿಧಾಮವಿದೆ.
ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತನ ಕತ್ತು ಸೀಳಿ ಕೊಂಡು ಹೊತ್ತೊಯ್ದಿದ್ದ ಚಿರತೆ ಕೊನೆಗೂ ಸೆರೆ
ಇಷ್ಟೊಂದು ಅಪಾರ ಸಂಪತ್ತು ವನ್ಯ ಮೃಗಗಳು ಇರುವ ಈ ಜಿಲ್ಲೆಯಲ್ಲಿ ದಿನ ಕಳೆದಂತೆ ಚಿರತೆ ಉಪಟಳ ಇದಾಗಿದೆ. ಕಾಡಿನಿಂದ ನಾಡಿಗೆ ಚಿರತೆಗಳು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ. ಮಾದಪ್ಪನ ಭಕ್ತನನ್ನ ಕೊಂಡು ತಿಂದ ನರಭಕ್ಷಕ ಚಿರತೆ ಸೆರೆಯಾದ ಬಳಿಕವು ಹನೂರು ಕಡೆ ಮತ್ತೆ ಮಹಾಲಿಂಗನಕಟ್ಟೆಯಲ್ಲಿ ಚಿರತೆ ದಾಳಿ ನಡೆಸಿ 3 ಮೇಕೆಗಳನ್ನ ತಿಂದು ತೇಗಿತ್ತು.
ಕರ್ನಾಟಕದ ನತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.