ಬಿಗ್ ಶಾಕ್ ಕೊಟ್ಟ KSRTC: ನಾಳೆಯಿಂದಲೇ ನೂತನ ಪರಿಷ್ಕ್ರತ ದರ ಜಾರಿಗೆ

ಬಿಗ್ ಶಾಕ್ ಕೊಟ್ಟ KSRTC: ನಾಳೆಯಿಂದಲೇ ನೂತನ ಪರಿಷ್ಕ್ರತ ದರ ಜಾರಿಗೆ


ಬೆಂಗಳೂರು, (ಫೆಬ್ರವರಿ 15): ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳಲ್ಲಿ ಪ್ರಯಾಣಿಕ ರಹಿತವಾಗಿ ಸಾಗಿಸುವ ಲಗೇಜ್ ದರ ಏರಿಕೆಯಾಗಿದೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಎಂಡಿ ಅಕ್ರಂ ಪಾಷಾರಿಂದ ಮಾಹಿತಿ ನೀಡಲಾಗುವುದು, ನಾಳೆಯಿಂದ (ಫೆಬ್ರವರಿ 16) ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕ ರಹಿತವಾಗಿ ಸಾಗಿಸುವ ಲಗೇಜ್‌ಗೆ ನೂತನ ಪರಿಷ್ಕೃತ ದರ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.

ಡಿಸೇಲ್, ಸಿಬ್ಬಂದಿ ಮತ್ತು ಇತರ ಖರ್ಚುಗಳ ಹಿನ್ನೆಲೆ ಲಗೇಜ್ ದರ ಏರಿಕೆಯಾಗಿದೆ. ಈ ಮೊದಲು 2021ರಲ್ಲಿ ಲಗೇಜ್ ದರ ಏರಿಕೆಯಾಗಿತ್ತು. ಅದಾದ ಬಳಿಕ ಟಿಕೆಟ್ ದರ ಪರಿಷ್ಕರಣೆ ಆದಾಗ ಲಗೇಜ್ ದರ ಏರಿಕೆಯಾಗಿರಲಿಲ್ಲ. ಹೀಗಾಗಿ ಲಗೇಜ್‌ ಸಾಗಿರುವ ದರ ಎಂದು ಕೆಎಸ್‌ಆರ್‌ಟಿಸಿ ಎಂಡಿ ಅಕ್ರಂ ಪಾಷಾ ಆದೇಶಕ್ಕೆ ಕಳುಹಿಸಲಾಗಿದೆ.

ಇದನ್ನೂ ಓದಿ: ಬಸ್ ಟಿಕೆಟ್ ದರ ಏರಿಕೆ ಆಗಿದ್ಯಾ? ಅಂತೆ-ಕಂತೆಗಳಿಗೆ ಸ್ಪಷ್ಟನೆ ನೀಡಿದ ಕೆಎಸ್‌ಆರ್‌ಟಿಸಿ

ಎಷ್ಟು ದರ ಏರಿಕೆ?

  • 1 ರಿಂದ 5 ಸ್ಟೇಜ್ ವರೆಗೆ 6 ರೂಪಾಯಿ (ಈ ಹಿಂದೆ 5 ರೂಪಾಯಿ ದರವಿತ್ತು ).
  • 6 ರಿಂದ 12 ಸ್ಟೇಜ್ ವರೆಗೆ 12 ರೂಪಾಯಿ (ಈ ಹಿಂದೆ 10 ರೂಪಾಯಿ ದರವಿತ್ತು ).
  • 156 ರಿಂದ 160 ಸ್ಟೇಜ್ ವರೆಗೆ 145 ರೂಪಾಯಿ ( ಈ ಹಿಂದೆ 123 ರೂಪಾಯಿ ದರವಿತ್ತು )

ಕೆಲ ದಿನಗಳ ಹಿಂದೆ ಕೆಎಸ್ ಆರ್ ಟಿಸಿ ಬಸ್ ಟಿಕೆಟ್ ದರದ ಸುದ್ದಿ ಹಬ್ಬಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆದಿದೆ. ಬಳಿಕ ಎಚ್ಚೆತ್ತುಕೊಂಡ ಕೆಎಸ್ ಆರ್ ಟಿಸಿ, ಯಾವುದೇ ಟಿಕೆಟ್ ದರ ಏರಿಕೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *