ಗಂಡನ ಪ್ರೇಮ, ಪ್ರೀತಿ-ಪ್ರಣಯದಾಟಕ್ಕೆ ಪತ್ನಿ ಸುಸ್ತು: ಇದು ಮಂಗಳೂರು ಮನ್ಮಥನ ಭಯಾನಕ ಸ್ಟೋರಿ

ಗಂಡನ ಪ್ರೇಮ, ಪ್ರೀತಿ-ಪ್ರಣಯದಾಟಕ್ಕೆ ಪತ್ನಿ ಸುಸ್ತು: ಇದು ಮಂಗಳೂರು ಮನ್ಮಥನ ಭಯಾನಕ ಸ್ಟೋರಿ


ಮಂಗಳೂರು, (ಫೆಬ್ರವರಿ 15): ಇದು ಮಂಗಳೂರು (ಮಂಗಳೂರು) ಮನ್ಮಥನ ಭಯಾನಕ ಕಥೆ. ಫೇಸ್ಬುಕ್ ನಲ್ಲಿ ಹುಡುಗಿಯರಿಗೆ ಗಾಳ ಹಾಕಿ ವಂಚಿಸುವುದೇ ಮನೀಶ್ ಅವರ ಕೆಲಸ. ಫೇಸ್ ಬುಕ್ ನಲ್ಲಿ ಪರಿಚಯವಾಗಿ, ಪ್ರೀತಿ ಎಂಬಾಕೆಯನ್ನು ಮನೀಶ್ ಮದುವೆ ಆಗಿದ್ದ. ಆ ನಂತರ ಪ್ರೀತಿಯೇ 2 ಲಕ್ಷ ರೂ. ಕೊಟ್ಟು ಮನೀಶ್ ಗೆ ವಿದೇಶದಲ್ಲಿ ಕೆಲಸ ಕೊಡಿಸಿದ್ದಳು. ಆದರೆ, ದುಬೈ ಕೆಲಸಕ್ಕೆಂದು ಹೋದ ಮನೀಶ್, ಬಹರೇನ್ ನಲ್ಲಿ ಮಹಿಳೆ ಜೊತೆ ಲವ್ವಿಡವ್ವಿಗೆ ಬಿದ್ದಿದ್ದ. ಈ ವಿಷಯ ಪ್ರೀತಿಗೆ ತಿಳಿದು ಮನೀಷ್ ಇತಿಹಾಸ ಕೆದಕಿದ್ದು, ಈತನಿಗೆ ಮದುವೆಗೂ ಮುನ್ನ ಯುವತಿಯರ ಜೊತೆ ಲವ್ ಅಫೇರ್ ಇತ್ತು ಬಯಲಾಗಿದೆ.

ಈ ಹಿಂದೆಯೂ ಮನೀಷ್ ಯುವತಿಯರ ಬಳಿ ಹಣ ಪಡೆದು ಮೋಸ ಮಾಡಿದ್ದ ಅನ್ನೋ ಬಗ್ಗೆ ಪ್ರೀತಿಗೆ ಮಾಹಿತಿ ಸಿಕ್ಕಿದೆ. ಹಣ ವಾಪಸ್ ಕೇಳಿದ್ರೆ, ಬ್ರೈನ್ ಟ್ಯೂಮರ್ ಇದೆ ಅಂತಾ ಹುಡುಗೀರಿಗೆ ಹೇಳಿ, ಹಣ ಕೊಡದೇ ಲವ್ ಬ್ರೇಕಪ್ ಮಾಡ್ಕೊಂಡಿದ್ದಾನೆ. ಅಂದಾಗೆ, ಈ ಮಂಗಳೂರಿನ ಮನ್ಮಥ, ಟಿಕ್ ಟಾಕ್ ನಲ್ಲಿ ರೀಲ್ಸ್ ಮಾಡಿ ಯುವತಿಯರಿಗೆ ಗಾಳ ಹಾಕಿದ್ದ. ಸದ್ಯ ಮನೀಷ್ ವಿರುದ್ಧ ಪತ್ನಿ ದೂರು ನೀಡಿದ್ದು, ಮಂಗಳೂರು ಮಹಿಳಾ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ: ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ: ಪತಿಯ ಪ್ರೀತಿ, ಪ್ರಣಯದಾಟ ಬಿಚ್ಚಿಟ್ಟ ಪತ್ನಿ



Source link

Leave a Reply

Your email address will not be published. Required fields are marked *