ಇಂಡೋ ಪಾಕ್ ಪಂದ್ಯದಿಂದ ಜಾಹೀರಾತು ಬೆಲೆಯಲ್ಲಿ ದಾಖಲೆ, 10 ಸೆಕೆಂಡ್ ಆ್ಯಡ್ ರೇಟ್ ಎಷ್ಟು?

ಇಂಡೋ ಪಾಕ್ ಪಂದ್ಯದಿಂದ ಜಾಹೀರಾತು ಬೆಲೆಯಲ್ಲಿ ದಾಖಲೆ, 10 ಸೆಕೆಂಡ್ ಆ್ಯಡ್ ರೇಟ್ ಎಷ್ಟು?

ಇಂಡೋ ಪಾಕ್ ಪಂದ್ಯದಿಂದ ಜಾಹೀರಾತು ಬೆಲೆಯಲ್ಲಿ ದಾಖಲೆ, 10 ಸೆಕೆಂಡ್ ಆ್ಯಡ್ ರೇಟ್ ಎಷ್ಟು?

ಇಂಡೋ ಪಾಕ್ ಪಂದ್ಯದಿಂದ ಜಾಹೀರಾತು ಬೆಲೆಯಲ್ಲಿ ದಾಖಲೆ, ಪಂದ್ಯ ಪ್ರಸಾರದ ವೇಳೆ ಬರುವ 10 ಸೆಕೆಂಡ್ ಜಾಹೀರಾತಿನ ಬೆಲೆ ಕೇಳಿದರೆ ಅಚ್ಚರಿಯಾಗುವುದು ಖಚಿತ, ಶೇಕಡಾ 90ರಷ್ಟು ಜಿಗಿತ ಕಂಡಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಶ್ರೀಲಂಕಾದ ಪ್ರೇಮದಾಸ ಕ್ರೀಡಾಂಗಣದಲ್ಲಿ ರೋಚಕ ಹೋರಾಟ ನಡೆಯಲಿದೆ. ಭಾರತ ವಿರುದ್ದ ಆಡಲ್ಲ ಎಂದು ಹೇಳೇ ಚಾಳಿ ಮುಂದುವರಿಸಿದ್ದ ಪಾಕಿಸ್ತಾನ ಬಳಿಕ ಯೂಟರ್ನ್ ಹೊಡೆದಿತ್ತು. ರೋಚಕ ಪಂದ್ಯದ ಕುತೂಹಲ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಪಂದ್ಯ ಪ್ರಸಾರದ ನಡುವಿನ ಜಾಹೀರಾತು ಬೆಲೆ ಗಗನಕ್ಕೇರಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಬದ್ಧವೈರಿಗಳ ಕದನ. ಇದೇ ಕಾರಣದಿಂದ ಈ ಪಂದ್ಯದ ಮೇಲೆ ಕುತೂಹಲ ಹೆಚ್ಚು, ಬೇಡಿಕೆ ಹೆಚ್ಚು, ಹೂಡಿಕೆಯೂ ಹೆಚ್ಚು. ಹೀಗಾಗಿ ಐಸಿಸಿ ಹೇಗಾದರೂ ಮಾಡಿ ಇಂಡೋ ಪಾಕ್ ಪಂದ್ಯ ಹಲವು ಭಾರಿ ಮುಖಾಮುಖಿಯಾಗುವಂತೆ ಮಾಡುತ್ತದೆ. ಈ ಬಾರಿಯ ಟಿ20 ವಿಶ್ವಕಪ್ ಭಾರತ ಪಾಕಿಸ್ತಾನ ಪಂದ್ಯದ ನಡುವೆ ಪ್ರಸಾರವಾಗು ಜಾಹೀರಾತು ಬೆಲೆ 10 ಸೆಕೆಂಡ್‌ಗೆ 70 ಲಕ್ಷ ರೂಪಾಯಿಗೆ ತಲುಪಿದೆ.

2024ರ ಟಿ20 ವಿಶ್ವಕಪ್ ವೇಳೆ ಭಾರತ ಪಾಕಿಸ್ತಾನ ನಡುವಿನ ಪಂದ್ಯದ ನಡುವಿನ ಜಾಹೀರಾತು ಬೆಲೆ 10 ಸೆಕೆಂಡ್‌ಗೆ 40 ಲಕ್ಷ ರೂಪಾಯಿಗೆ ಏರಿಕೆಯಾಗಿತ್ತು. ಇತರ ಪಂದ್ಯಗಳ ನಡುವೆ ಜಾಹೀರಾತು ಪ್ರದರ್ಶನಕ್ಕೆ 20 ರಿಂದ 25 ಲಕ್ಷ ರೂಪಾಯಿ ಇದ್ದರೆ ಭಾರತ ಪಾಕಿಸ್ತಾನ ನಡುವಿನ ಪಂದ್ಯಕ್ಕೆ 40 ಲಕ್ಷ ರೂಪಾಯಿ ಇತ್ತು. ಈ ಬಾರಿ 70 ಲಕ್ಷ ರೂಪಾಯಿಗೆ ತಲುಪಿದೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಐಸಿಸಿ ಬರೋಬ್ಬರಿ 2000 ಕೋಟಿ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದೆ. ಈ ಪೈಕಿ ಹೆಚ್ಚಿನ ಆದಾಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಿಂದಲೇ ಬರುತ್ತಿದೆ. ಶೇಕಡಾ 50 ರಿಂದ 60 ರಷ್ಟು ಆದಾಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಿಂದ ಬರಲಿದೆ.

ಇಂಡೋ ಪಾಕ್ ಪಂದ್ಯದಿಂದ ವಿಮಾನ ದರದಲ್ಲೂ ಭಾರಿ ಏರಿಕೆಯಾಗಿದೆ. ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ಕೊಲೊಂಬೊ ಪ್ರಯಾಣದ ವಿಮಾನ ಟಿಕೆಟ್ ದರ ಶೇಕಡಾ 300ರಷ್ಟು ಹೆಟ್ಟಾಗಿದೆ. ಅತ್ತ ಕೊಲೊಂಬೋದಲ್ಲಿ ಹೊಟೆಲ್ ಸೇರಿದಂತೆ ಕೊಠಡಿಗಳು, ಹೋಮ್ ಸ್ಟೇ, ರೆಸಾರ್ಟ್ ಬೆಲೆಯಲ್ಲೂ ಭಾರಿ ಏರಿಕೆಯಾಗಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ಪಂದ್ಯ ಇಂದು (ಫೆ.15) 7ಗಂಟೆಗೆ ಆರಂಭಗೊಳ್ಳಲಿದೆ. ಕೊಲೊಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಈ ರೋಚಕ ಪಂದ್ಯ ನಡೆಯಲಿದೆ. ಮಳೆ ಸಾಧ್ಯತ ಕಡಿಮೆ. ಆದರೆ ಮೋಡ ಕವಿದ ವಾತಾವರಣ ಇರಲಿದೆ ಎಂದು ಹಮಾಮಾನ ಇಲಾಖೆ ವದಿ ನೀಡಿದೆ.

Source link

Leave a Reply

Your email address will not be published. Required fields are marked *