Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಯಾರೂ ಊಹಿಸಿರದ ತಿರುವು ಬಂದಿದೆ. ಶ್ರೀಕಾಂತ್ ಕಾರ್ನ್ನು ಅಪಘಾತ ಮಾಡಿದ ಆರೋಪದ ಮೇಲೆ ಸಿದ್ದೇಗೌಡ್ರು ಜೈಲಿನಲ್ಲಿದ್ದಾರೆ. ಇದರಲ್ಲಿ ಸಿದ್ದೇಗೌಡ್ರು ತಪ್ಪು ಇಲ್ಲ ಎಂದು ಭಾವನಾ ಸಾಬೀತುಪಡಿಸಲು ನೋಡುತ್ತಿದ್ದಾಳೆ. ಈಗ ಶ್ರೀಕಾಂತ್ ಎಂಟ್ರಿ.

ಭಾವನಾ ಹಾಗೂ ಶ್ರೀಕಾಂತ್ ಮದುವೆಗೆ ಎಲ್ಲ ತಯಾರಿ ನಡೆದಿತ್ತು. ಶ್ರೀಕಾಂತ್ ಆಸ್ತಿಯನ್ನು ಹೊಡೆದುಕೊಳ್ಳುವ ಸಲುವಾಗಿ, ಶ್ರೀಕಾಂತ್ ತಂಗಿ ಗಂಡ, ಶ್ರೀಕಾಂತ್ ಬರುತ್ತಿದ್ದ ಕಾರ್ಗೆ ಅಪಘಾತ ಮಾಡಿದ್ದನು. ಆಗ ಶ್ರೀಕಾಂತ್ ಸತ್ತಿದ್ದಾನೆ ಎಂದು ಎಲ್ಲರೂ ಭಾವಿಸಿದ್ದರು. ಅತ್ತ ಭಾವನಾ, ಸಿದ್ದೇಗೌಡ್ರ ಮದುವೆ ಕೂಡ ಆಗಿದೆ.

ಸಿದ್ದೇಗೌಡ್ರನ್ನು ಜೈಲಿಗೆ ಕಳಿಸಿದ ಬಳಿಕ, ಅವನು ಅಲ್ಲೇ ಕೊಳೆಯಲಿ, ನಾನು ಶ್ರೀಕಾಂತ್ ಆಸ್ತಿಯನ್ನು ಅನುಭವಿಸಿಕೊಂಡು ಇರೋಣ ಎಂದು ರವಿಶಂಕರ್ ಅಂದುಕೊಂಡಿದ್ದಾನೆ. ಈ ಮಧ್ಯೆ ಶ್ರೀಕಾಂತ್ ಎಂಟ್ರಿಯಾಗಿದೆ.

ಶ್ರೀಕಾಂತ್ ಇಷ್ಟುದಿನ ಎಲ್ಲಿದ್ದ? ಅಂದು ಅಪಘಾತದಲ್ಲಿ ಏನಾಯ್ತು? ಶ್ರೀಕಾಂತ್ ಆಮೇಲೆ ಎಲ್ಲಿಗೆ ಹೋದ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಶ್ರೀಕಾಂತ್ ಬದುಕಿಬರುತ್ತಾನೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಸದ್ಯ ವಾಹಿನಿಯು ಹೊಸ ಪ್ರೋಮೋ ರಿಲೀಸ್ ಮಾಡಿದ್ದು, ಕುತೂಹಲ ಸೃಷ್ಟಿಸಿದೆ.

ಶ್ರೀಕಾಂತ್ ಮತ್ತೆ ಸಿಕ್ಕಿದ ಎಂದು ರವಿಶಂಕರ್ ಅವನನ್ನು ನಂಬಿಸಿ, ಕಿಡ್ನ್ಯಾಪ್ ಮಾಡಿ ಸಾಯಿಸಲು ನೋಡುತ್ತಾನೆ. ಆಗ ಜಯಂತ್ ಎಂಟ್ರಿ ಆಗುವುದು. ಜಯಂತ್ ಹಾಗೂ ರವಿಶಂಕರ್ ಇಬ್ಬರೂ ಸೇರಿಕೊಂಡು ಆ ಗೂಂಡಾಗಳನ್ನು ಹೊಡೆದು ಹಾಕುತ್ತಾರೆ. ಮುಂದೆ ಏನಾಗುವುದು ಎಂದು ಕಾದು ನೋಡಬೇಕಿದೆ.

ಶ್ರೀಕಾಂತ್ ಪತ್ನಿ ಬದುಕಿಲ್ಲ, ಆದರೆ ಪುಟ್ಟ ಮಗಳಿದ್ದಾಳೆ. ಮಗಳಿಗೆ ನನ್ನ ಅವಶ್ಯಕತೆ ಇದೆ ಎನ್ನೋದನ್ನು ಮರೆತು ಶ್ರೀಕಾಂತ್ ಇಷ್ಟುದಿನ ಎಲ್ಲಿದ್ದನು ಎಂಬ ಪ್ರಶ್ನೆ ಎದ್ದಿದೆ. ಒಟ್ಟಿನಲ್ಲಿ ಶ್ರೀಕಾಂತ್ ಎಂಟ್ರಿಯನ್ನು ವೀಕ್ಷಕರು ಅರಗಿಸಿಕೊಳ್ಳೋದು ಕಷ್ಟವಾಗಿದೆ.

ಶ್ರೀಕಾಂತ್ ಬಂದಮೇಲೆ ಸಿದ್ದೇಗೌಡ್ರು ಜೈಲಿನಿಂದ ಹೊರಗಡೆ ಬರುತ್ತಾರೆ. ಆದರೆ ಶ್ರೀಕಾಂತ್ ತಾಯಿ ಏನಾದರು? ಎಲ್ಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

Source link
Lakshmi Nivasa Serial: ಕಾರ್ ಆಕ್ಸಿಡೆಂಟ್ನಲ್ಲಿ ಸತ್ತಿದ್ದ ಶ್ರೀಕಾಂತ್ ಎಂಟ್ರಿ; ಎಂಥ ಟ್ವಿಸ್ಟ್ ಕೊಟ್ರೋ?