No Hand shake ಪೆಹಲ್ಗಾಂ ನೋವು, ಸೇಡು ಎರಡು ಮುಗಿದಿಲ್ಲ, ಪಾಕ್ ವಿರುದ್ದ ಹ್ಯಾಂಡ್ ಶೇಕ್ ನಿರಾಕರಿಸಿದ ಸೂರ್ಯಕುಮಾರ್ | Ind Vs Pak Pahalgam Revenge Continue Suryakumar Yadav Refuse To Hand Shake Pak Salman Agha

No Hand shake ಪೆಹಲ್ಗಾಂ ನೋವು, ಸೇಡು ಎರಡು ಮುಗಿದಿಲ್ಲ, ಪಾಕ್ ವಿರುದ್ದ ಹ್ಯಾಂಡ್ ಶೇಕ್ ನಿರಾಕರಿಸಿದ ಸೂರ್ಯಕುಮಾರ್ | Ind Vs Pak Pahalgam Revenge Continue Suryakumar Yadav Refuse To Hand Shake Pak Salman Agha



No Hand shake ಪೆಹಲ್ಗಾಂ ನೋವು, ಸೇಡು ಎರಡು ಮುಗಿದಿಲ್ಲ, ಪಾಕ್ ವಿರುದ್ದ ಹ್ಯಾಂಡ್ ಶೇಕ್ ನಿರಾಕರಿಸಿದ ಸೂರ್ಯಕುಮಾರ್ | Ind Vs Pak Pahalgam Revenge Continue Suryakumar Yadav Refuse To Hand Shake Pak Salman Agha

ಪೆಹಲ್ಗಾಂ ನೋವು, ಸೇಡು ಎರಡು ಮುಗಿದಿಲ್ಲ, ಪಾಕಿಸ್ತಾನ ವಿರುದ್ದದ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮತ್ತೆ ಹ್ಯಾಂಡ್ ಶೇಕ್ ಮಾಡಲು ನಿರಾಕರಿಸಿದ್ದಾರೆ. ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ

ಕೊಲೊಂಬೊ (ಫೆ.15) ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಆರಂಭದಲ್ಲೇ ರೋಚಕ ಘಟ್ಟ ತಲುಪಿದೆ. ಈ ಪಂದ್ಯಕ್ಕೂ ಮೊದಲು ಭಾರತ,ಪಾಕಿಸ್ತಾನ ಆಟಗಾರರ ಜೊತೆ ಹ್ಯಾಂಡ್ ಶೇಕ್ ಮಾಡುತ್ತಾ ಅನ್ನೋ ಪ್ರಶ್ನೆಗಳು ಸಾಲು ಸಾಲಾಗಿ ಕೇಳಿಬಂದಿತ್ತು. ಈ ಪ್ರಶ್ನೆಗಳಿಗೆ ಉತ್ತರಿಸಲು ಭಾರತ ಹಾಗೂ ಪಾಕಿಸ್ತಾನ ನಾಯಕರು ನಿರಾಕರಿಸಿದ್ದರು. ಇಂದು ಟಾಸ್ ವೇಳೆ ನಾಯಕ ಸೂರ್ಯಕುಮಾರ್ ಯಾದವ್ ಮತ್ತೆ ಸ್ಪಷ್ಟ ಸಂದೇಶ ಕಳುಹಿಸಿದ್ದಾರೆ. ಟಾಸ್ ವೇಳೆ ಸೂರ್ಯಕುಮಾರ್ ಯಾದವ್, ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಜೊತೆ ಹಸ್ತಲಾಘವ ಮಾಡಲು ನಿರಾಕರಿಸಿದ್ದಾರೆ.

ಹ್ಯಾಂಡ್ ಶೇಕ್ ಮಾಡದೇ ಟಾಸ್

ಭಾರತ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಇತ್ತೀಚೆಗೆ ಹ್ಯಾಂಡ್‌ಶೇಕ್ ಭಾರಿ ಸದ್ದು ಮಾಡಿತ್ತು. ಕಾರಣ ಪಾಕಿಸ್ತಾನ ಆಟಗಾರರ ಜೊತೆ ಹ್ಯಾಂಡ್ ಶೇಕ್ ಮಾಡುವ ಪದ್ಧತಿಗೆ ಭಾರತ ಅಂತ್ಯಹಾಡಿದೆ. ಇಂದು ಪ್ರೇಮದಾಸ ಕ್ರೀಡಾಂಗಣದಲ್ಲೂ ಪಾಕಿಸ್ತಾನ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ ಇಡೀ ಟಾಸ್ ಪ್ರಕ್ರಿಯೆಯಲ್ಲಿ ಸೂರ್ಯಕುಮಾರ್ ಯಾದವ್, ಪಾಕಿಸ್ತಾನ ನಾಯಕನಿಗೆ ಹಸ್ತಲಾಘವ ಮಾಡಲೇ ಇಲ್ಲ. ತಮ್ಮ ಸೇಡು ಹಾಗೇ ಮುಂದುವರಿಸಿದ್ದಾರೆ.

ಪೆಹಲ್ಗಾಂ ದಾಳಿ ಬಳಿಕ ಟೀಂ ಇಂಡಿಯಾ ದಿಟ್ಟ ನಿರ್ಧಾರ

ಪೆಹಲ್ಗಾಂನಲ್ಲಿ ಪಾಕಿಸ್ತಾನದ ಭಯೋತ್ಪಾದಕರು ನಡೆಸಿದ ಭಯೋತ್ಪಾದಕ ದಾಳಿ ಬಳಿಕ ದ್ವಿಪಕ್ಷೀಯ ಸಂಬಂಧಗಳು ಸಂಪೂರ್ಣವಾಗಿ ಕಡಿದುಕೊಂಡಿದೆ. ಪೆಹಲ್ಗಾಂ ದಾಳಿ ಬಳಿಕ ಪಾಕಿಸ್ತಾನ ಜೊತೆ ಯಾವುದೇ ದ್ವೀಪಕ್ಷೀಯ ಪಂದ್ಯಕ್ಕೂ ಅವಕಾಶವಿಲ್ಲ. ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಪಂದ್ಯ ಆಡಲು ಅವಕಾಶವಿದೆ. ಪೆಹಲ್ಗಾಂನಲ್ಲಿ ನಡೆದ ಭೀಕರ ದಾಳಿಯ ನೋವು ಯಾವ ಭಾರತೀಯನ ಮನಸ್ಸಿನಿಂದ ಮಾಸಿಲ್ಲ. ಇತ್ತ ಸೇಡು ಕೂಡ ಆರಿಲ್ಲ. ಇದಕ್ಕೆ ಟೀಂ ಇಂಡಿಯಾ ಆಟಗಾರರು ಹೊರತಾಗಿಲ್ಲ. ಇದೀಗ ಸೂರ್ಯಕುಮಾರ್ ಯಾದವ್ ಮತ್ತೆ ತಮ್ಮ ನಿರ್ಧಾರವನ್ನು ಟಾಸ್ ವೇಳೆ ಸ್ಪಷ್ಟವಾಗಿ ಸೂಚಿಸಿದ್ದಾರೆ.

2025ರ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಪಾಕಿಸ್ತಾನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಹ್ಯಾಂಡ್ ಶೇಕ್ ಮಾಡಲ್ಲ ಎಂದು ಸ್ಪಷ್ಟ ನಿರ್ಧಾರ ತೆಗೆದುಕೊಂಡಿದ್ದರು. ಈ ನಿರ್ಧಾರ ಈಗಲೂ ಮುಂದುವರಿದಿದೆ. ಹಲವರು ಪಾಕಿಸ್ತಾನ ವಿರುದ್ದ ಯಾವುದೇ ಪಂದ್ಯ ಬೇಡ ಎಂದು ವಾದಿಸಿದ್ದಾರೆ. ಮತ್ತೆ ಕೆಲವರು ಐಸಿಸಿ ಟೂರ್ನಿಗಳಲ್ಲಿ ಒಕೆ ಎಂದಿದ್ದಾರೆ. ಇನ್ನು ಪಾಕಿಸ್ತಾನ ಜೊತೆ ಶೇಕ್ ಮಾಡದೇ ಕ್ರೀಡಯಲ್ಲಿ ರಾಜಕೀಯ ತರುವುದು ಸರಿಯಲ್ಲ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ. ಆದರೆ ಟೀಂ ಇಂಡಿಯಾ ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ.

ಟೀಂ ಇಂಡಿಯಾ ಪ್ಲೇಯಿಂಗ್ 11

ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್(ನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ,

Scroll to load tweet…



Source link

Leave a Reply

Your email address will not be published. Required fields are marked *