ಪಾಕಿಸ್ತಾನದ 4 ವಿಕೆಟ್ ಪತನದ ಬಳಿಕ ವಿನ್ನಿಂಗ್ ಪರ್ಸೆಂಟೇಜ್ ಎಷ್ಟಿದೆ? ಯಾರಿಗಿದೆ ಚಾನ್ಸ್?

ಪಾಕಿಸ್ತಾನದ 4 ವಿಕೆಟ್ ಪತನದ ಬಳಿಕ ವಿನ್ನಿಂಗ್ ಪರ್ಸೆಂಟೇಜ್ ಎಷ್ಟಿದೆ? ಯಾರಿಗಿದೆ ಚಾನ್ಸ್?

ಪಾಕಿಸ್ತಾನದ 4 ವಿಕೆಟ್ ಪತನದ ಬಳಿಕ ವಿನ್ನಿಂಗ್ ಪರ್ಸೆಂಟೇಜ್ ಎಷ್ಟಿದೆ? ಯಾರಿಗಿದೆ ಚಾನ್ಸ್?

ಪಾಕಿಸ್ತಾನದ 4 ವಿಕೆಟ್ ಪತನದ ಬಳಿಕ ವಿನ್ನಿಂಗ್ ಪರ್ಸೆಂಟೇಜ್ ಎಷ್ಟಿದೆ? ಯಾರಿಗಿದೆ ಚಾನ್ಸ್? ಭಾರತ ನೀಡಿದ 176 ರನ್ ಟಾರ್ಗೆಟ್ ಚೇಸಿಂಗ್ ನಡುವೆ ಗೆಲುವಿನ ಸಾಧ್ಯೆತೆಗಳು ಕ್ಷಣಕ್ಷಣಕ್ಕೆ ಬದಲಾಗುತ್ತಿದೆ. ಸದ್ಯ ಯಾರಿಗೆ ಎಷ್ಟು ವಿನ್ನಿಂಗ್ ಪರ್ಸೆಂಟೇಜ್ ಇದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ರೋಚಕ ಘಟ್ಟ ತುಲುಪಿದೆ. ಭಾರತ ನೀಡಿದ 176 ರನ್ ಟಾರ್ಗೆಟ್ ಚೇಸ್ ಪಾಕಿಸ್ತಾನಕ್ಕೆ ಸವಾಲಾಗುತ್ತಿದೆ. ಟೀಂ ಇಂಡಿಯಾ ದಾಳಿಗೆ ನಲುಗಿರುವ ಪಾಕಿಸ್ತಾನ ಆರಂಭದಲ್ಲೇ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಸದ್ಯ ವಿಕೆಟ್ ಉಳಿಸಿಕೊಂಡು ಹೋರಾಟ ಮಾಡಲು ಪಾಕಿಸ್ತಾನ ಮುಂದಾಗಿದೆ. ಇದರ ನಡುವೆ ವಿನ್ನಿಂಗ್ ಪರ್ಸೆಂಟೇಜ್ ತೀವ್ರ ಕುತೂಹಲ ಕೆರಳಿಸಿದೆ.

ಭಾರತ 176 ರನ್ ಟಾರ್ಗೆಟ್ ನೀಡುವಾಗ ವಿನ್ನಿಂಗ್ ಪರ್ಸೆಂಟೇಜ್ ಭಾರತಕ್ಕೆ ಸರಿಸುಮಾರು ಶೇಕಡಾ 75ರಷ್ಟಿದ್ದರೆ, ಪಾಕಿಸ್ತಾನ ಪರ್ಸೆಂಟೇಜ್ ಶೇಕಡಾ 25ರಷ್ಟಿತ್ತು. ಪಾಕಿಸ್ತಾನ ಬ್ಯಾಟಿಂಗ್ ಇಳಿದ ಬೆನ್ನಲ್ಲೇ ಈ ಪರ್ಸೆಂಟೇಜ್ ಕುಸಿತ ಕಾಣಲು ಆರಂಭಿಸಿತು. ಈ ಪೈಕಿ ನಾಲ್ಕು ವಿಕೆಟ್ ಪತನಗೊಂಡ ಬೆನ್ನಲ್ಲೇ ಪಾಕಿಸ್ತಾನದ ಗೆಲುವಿನ ಸಾಧ್ಯತೆ ಶೇಕಡಾ 8ಕ್ಕೆ ಕುಸಿದಿತ್ತು. ಇತ್ತ ಭಾರತದ ಸಾಧ್ಯತೆ ಶೇಕಡಾ 92ಕ್ಕೆ ಏರಿಕೆಯಾಗಿತ್ತು.

ಉಸ್ಮಾನ್ ಖಾನ್ ಬ್ಯಾಟಿಂಗ್‌ನಿಂದ ಪಾಕಿಸ್ತಾನ ವಿನ್ನಿಂಗ್ ಸಾಧ್ಯತೆ ಶೇಕಡ ಹೆಚ್ಚಾಯಿತು. ಉಸ್ಮಾನ್ ಖಾನ್ ಹಾಗೂ ಶದಬ್ ಖಾನ್ ಜೊತೆಯಾಟದ ಬಳಿಕ ಪಾಕಿಸ್ತಾನದ ಗೆಲುವಿನ ಸಾಧ್ಯತೆ ಶೇಕಡಾ 16ಕ್ಕೆ ಏರಿಕೆಯಾದರೆ ಭಾರತದ ಸಾದ್ಯತೆ ಶೇಕಡಾ 84ಕ್ಕೆ ಕುಸಿತ ಕಂಡಿತ್ತು. ಆದರೆ ಭಾರತ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ.

ಉಸ್ಮಾನ್ ಖಾನ್ ಬ್ಯಾಟಿಂಗ್ ಪಾಕಿಸ್ತಾನ ತಂಡಕ್ಕೆ ನೆರವಾಗಿದೆ.ಚೇಸಿಂಗ್ ಅನೂಕೂಲವೂ ಪಾಕಿಸ್ತಾನ ತಂಡಕ್ಕಿದೆ. ಆದರೆ ಭಾರತದ ಬಲಿಷ್ಠ ಬೌಲಿಂಗ್ ದಾಳಿ ಪಾಕಿಸ್ತಾನಕ್ಕೆ ತೀವ್ರ ಸವಾಲು ನೀಡಲಿದೆ. ಸದ್ಯ ಉಸ್ಮಾನ್ ಖಾನ್ ಬ್ಯಾಟಿಂಗ್ ಪಾಕಿಸ್ತಾನಕ್ಕೆ ಆಸರೆ ಮಾತ್ರವಲ್ಲ ಚೇತರಿಕೆಯನ್ನು ನೀಡಿದೆ.

ಪಾಕಿಸ್ತಾನ ಆರಂಭದಲ್ಲೇ ನಾಲ್ಕು ವಿಕೆಟ್ ಪತನಗೊಂಡ ಬಳಿಕ ಪಾಕಿಸ್ತಾನ ತೀವ್ರ ಹಿನ್ನಡೆ ಅನುಭವಿಸಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಪಾಕಿಸ್ತಾನ ಉತ್ತಮ ಹೋರಾಟ ನೀಡಿದೆ. ಇದರಿಂದ ಪಂದ್ಯ ಮತ್ತೆ ತಿರುವು ಪಡೆದುಕೊಳ್ಳುತ್ತಿದೆ. ಇತ್ತ ಪಾಕಿಸ್ತಾನದ ಗೆಲುವಿನ ಸಾಧ್ಯತೆಯ ಪರ್ಸೆಂಟೇಜ್ ಕೂಡ ಹೆಚ್ಚಾಗುತ್ತಿದ್ದು, ಶೇಕಡಾ 17ಕ್ಕೆ ಏರಿದೆ.

Source link

Leave a Reply

Your email address will not be published. Required fields are marked *