ರಾಯಚೂರು: ಅಕ್ರಮ ಮರಳುಗಾರಿಕೆ ಮಟ್ಟಹಾಕಲು ಜಿಲ್ಲಾಡಳಿತ ಸನ್ನದ್ಧ; ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ

ರಾಯಚೂರು: ಅಕ್ರಮ ಮರಳುಗಾರಿಕೆ ಮಟ್ಟಹಾಕಲು ಜಿಲ್ಲಾಡಳಿತ ಸನ್ನದ್ಧ; ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ


ರಾಯಚೂರು, ಫೆಬ್ರವರಿ 15: ಗಡಿ ಜಿಲ್ಲೆ ರಾಯಚೂರಿನಲ್ಲಿ ಅಕ್ರಮ ಮರಳು ದಂಧೆಗೆ (ಅಕ್ರಮ ಮರಳು ಗಣಿಗಾರಿಕೆ) ಜನ ರೋಸಿ ಹೋಗಿದ್ದು, ಸರಣಿ ಅಕ್ರಮಗಳು ಬಿಚ್ಚಿಕೊಳ್ಳುತ್ತಿವೆ. ಈ ಬಗ್ಗೆ ಇತ್ತೀಚೆಗೆ ಖುದ್ದು ಶಾಸಕಿ ಕರೆಮ್ಮಾ ಜಿ ನಾಯಕ್ ಜಿಲ್ಲಾಧಿಕಾರಿ ಮತ್ತು ಎಸ್ಪಿಗೆ ದೂರು ನೀಡಿದ್ದರು. ಇದೇ ಕಾರಣಕ್ಕೆ ಇದೀಗ ಅಕ್ರಮ ಮರಳುಗಾರಿಕೆ ಮಟ್ಟಹಾಕಲು ಎಚ್ಚರಿಕೆ ನೀಡಲಾಗಿದೆ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಸಜ್ಜಾಗಿದೆ.

ರಾಯಚೂರು ಜಿಲ್ಲೆಯಲ್ಲಿ ತುಂಗಭದ್ರಾ ಹಾಗೂ ಕೃಷ್ಣಾ ನದಿ ಹರಿಯುತ್ತದೆ. ಎರಡು ನದಿಗಳ ಒಡಲನ್ನ ಬಗೆದು ಅಕ್ರಮ ಮರಳುಗಾರಿಕೆ ನಡೆಸೋದು ಜಿಲ್ಲೆಯಲ್ಲಿ ಮಾಮೂಲಾಗಿದೆ. ಅಕ್ರಮ ಮರಳು ದಂಧೆ ಮಿತಿಮೀರಿ ಹೋಗಿರುವ ಹಿನ್ನೆಲೆ ಸಾರ್ವಜನಿಕರು ಕೂಡ ಈ ಅಕ್ರಮದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಇದನ್ನೂ ಓದಿ: ಮಾಂಜ್ರಾ ನದಿ ಒಡಲು ಬಗೆಯುತ್ತಿರುವ ದಂಧೆಕೋರರು: ಹಗಲು-ರಾತ್ರಿ ಎನ್ನದೆ ಮರಳು ಮಾಫಿಯಾ

ನದಿ ಒಡಲನ್ನ ಮನಸೋ ಇಚ್ಛೆ ಬಗೆದು ಮರಳುಗಾರಿಕೆ ನಡೆಸೋದರ ವಿರುದ್ಧ ಆರೋಪಗಳು ಕೇಳಿಬರುತ್ತಲೇ ಇವೆ. ಇತ್ತೀಚೆಗೆ ದೇವದುರ್ಗ ಶಾಸಕಿ ಕರೆಮ್ಮ ನಾಯಕ್, ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿ ಎತ್ತಿದ್ರು. ಅಕ್ರಮ ಮರಳು ದಂಧೆ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇದಾದ ಬಳಿಕವೂ ಅಕ್ರಮ ಮರಳು ದಂಧೆ ಸೈಲೆಂಟ್ ಆಗಿ ಚಾಲ್ತಿಯಲ್ಲಿದೆ. ಹೀಗಾಗಿ ಅಕ್ರಮ ಮರಳುಗಾರಿಕೆ ಮಟ್ಟಹಾಕಲು ಮುಂದಾಗಿದೆ.

60ಕ್ಕೂ ಹೆಚ್ಚು ಪ್ರಕರಣ ದಾಖಲು

ಸದ್ಯ ಜಿಲ್ಲೆಯಲ್ಲಿ 2026ರಲ್ಲಿ ಈವರೆಗೆ ಸುಮಾರು 60ಕ್ಕೂ ಹೆಚ್ಚು ಅಕ್ರಮ ಮರಳು ದಂಧೆ ದೇವದುರ್ಗ, ಮಾನ್ವಿ ಸೇರಿ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಇಷ್ಟಾದರೂ ಭಯ ಇಲ್ಲದೇ ದಂಧೆಕೋರರು ಅಕ್ರಮ ಮರಳು ಸಾಗಿಸುತ್ತಿರೋ ಆರೋಪಗಳು ಕೇಳಿಬರ್ತಿರೋದ್ರಿಂದ ಈಗ ಇಡೀ ಅಕ್ರಮದ ವಿರುದ್ಧ ಹದ್ದಿನ ಕಣ್ಣಿಡಲು ಮುಂದಾಗಿದೆ.

ಈ ದಂಧೆ ಮಟ್ಟಹಾಕಲು ಕಮಿಟಿ ರಚಿಸಲಾಗಿದೆ, ಇದರಲ್ಲಿ ವಿವಿಧ ಇಲಾಖೆ, ಪೊಲೀಸ್ ಇಲಾಖೆ, ಆರ್ಟಿ, ಪೊಲೀಸ್ ಇಲಾಖೆ ಸೇರಿದಂತೆ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮರಳುಗಾರಿಕೆಗೆ ಕಾನೂನಿನ್ವಯ ಅನುಮತಿ ಕೊಡೋದೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ. ಆದರೆ ರಾಯಚೂರಿನಲ್ಲಿ ಎಗ್ಗಿಲ್ಲದೇ ಅಕ್ರಮ ಮರಳು ದಂಧೆ ನಡೆಯುತ್ತಿದ್ರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವಿಲ್ಲವೆಂಬಂತಿರುವ ಗಂಭೀರ ಆರೋಪವಿದೆ.

ಅಧಿಕಾರಿಗಳ ವಿರುದ್ಧವೇ ಕ್ರಮ

ಎಲ್ಲಾ ಜವಾಬ್ದಾರಿಯನ್ನ ಪೊಲೀಸ್ ಇಲಾಖೆ ಹೇಗಾದ್ರೂ ಹಾಕಿ ಕೈಕಟ್ಟಿ ಫಿಲ್ಡ್ ವರ್ಕ್ ಅಂತ ಸಾರ್ವಜನಿಕರಿಗೆ ಹೇಳುತ್ತಾ ಬಡ್ತಿದಾರೆ. ಅಸಲಿಗೆ ಅಕ್ರಮ ಮರಳು ದಂಧೆಯನ್ನ ಗುರುತು ಮಾಡಬೇಕಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ. ಆದರೆ ಈ ಕೆಲಸವನ್ನು ಪೊಲೀಸ್ ಇಲಾಖೆ ಮಾಡಿದೆ. ಈ ಬಗ್ಗೆಯೂ ಪ್ರಸ್ತಾಪಿಸಿರೋ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್, ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬಾರದು. ಅಂಥ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳುತ್ತಾರೆ ಅಂತ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಅಕ್ರಮ ಮರಳು ದಂಧೆ ವಿರುದ್ಧ ಸಮರ ಸಾರಿದ ಜೆಡಿಎಸ್ ಶಾಸಕಿ ಮನೆಗೆ ನುಗ್ಗಿ ಧಮ್ಕಿ

ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಮಟ್ಟಹಾಕಲು ಉತ್ತರ ಸಜ್ಜಾಗಿದ್ದರೆ ಅಧಿಕಾರಿಗಳು ಹೇಗೆ ಸ್ಪಂದನೆ ಸಿಗತ್ತೆ ಅನ್ನೋದು ಪ್ರಶ್ನೆ. ಕಾರಣದಿಂದ ದಂಧೆಕೋರರಿಗೆ ಕೆಳಮಟ್ಟದ ಅಧಿಕಾರಿಗಳು ಸಾಥ್ ಕೊಡ್ತಿರೋ ಆರೋಪಿಗಳು ಇರೋದ್ರಿಂದ ಇದನ್ನೇ ಎದುರಿಸಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *