ಬೆಂಗಳೂರು: ಹುಟ್ಟಿಸಿದ ತಂದೆ-ತಾಯಿಯನ್ನೇ ಕೊಂದವನ ಕೈಯಲ್ಲೇ ಅಂತ್ಯಸಂಸ್ಕಾರ!

ಬೆಂಗಳೂರು: ಹುಟ್ಟಿಸಿದ ತಂದೆ-ತಾಯಿಯನ್ನೇ ಕೊಂದವನ ಕೈಯಲ್ಲೇ ಅಂತ್ಯಸಂಸ್ಕಾರ!


ಬೆಂಗಳೂರು, (ಫೆಬ್ರವರಿ 15): ಪುತ್ರನೇ ತನ್ನ ಹೆತ್ತ ತಂದೆ ಹಾಗೂ ತಾಯಿಯನ್ನು (ತಂದೆ ಮತ್ತು ತಾಯಿ) ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ (ಬೆಂಗಳೂರು) ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿತ್ತು. ನೌಕಾಪಡೆಯ ನಿವೃತ್ತ ಕ್ಯಾಪ್ಟನ್ ನವೀನ್ ಚಂದ್ರ ಭಟ್ ಹಾಗೂ ಅವರ ಪತ್ನಿ ದಂತ ವೈದ್ಯೆ ಡಾ.ಶ್ಯಾಮಲಾ ಭಟ್ ನನ್ನ ಪುತ್ರ ರೋಹನ್ ಭಟ್ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಜೋಡಿ ಕೊಲೆಗೆ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದೆ. ಆದರೆ, ಇದೀಗ ಅದೇ ಪುತ್ರ ರೋಹನ್, ತಂದೆ ತಾಯಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಹೌದು.. ನೌಜಾಪಡೆ ನಿವೃತ್ತ ಅಧಿಕಾರಿ ನವೀನ್‌ಚಂದ್ರ ಭಟ್‌ ಮತ್ತು ಅವರ ಪತ್ನಿ ಡ. ಶ್ಯಾಮಲಾ ಭಟ್ ಅವರನ್ನು ಕೊಲೆಗೈದಿದ್ದ ಪುತ್ರ ರೋಹನ್ ಭಟ್, ಕೋರ್ಟ್ ಅವಕಾಶವನ್ನು ವಿಲ್ಸನ್‌ಗಾರ್ಡನ್‌ ಚಿತಾಗಾರದಲ್ಲಿ ಪೊಲೀಸರ ಸಮ್ಮುಖದಲ್ಲಿ ಇಂದು (ಫೆಬ್ರವರಿ 14) ಪೋಷಕರ ಅಂತ್ಯವನ್ನು ನೆರವೇರಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಡಬಲ್ ಮರ್ಡರ್: ಹೆತ್ತ ತಂದೆ-ತಾಯಿಯನ್ನೇ ಕೊಂದ ಮಗ

ರೋಹನ್ ಭಟ್‌ ಮಾನಸಿಕ ಅಸ್ವಸ್ಥನಾಗಿದ್ದ ಕಾರಣ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಆರೋಪಿಯ ಸಹೋದರಿ ಅಮೆರಿಕದಿಂದ ಅಂತ್ಯಕ್ರಿಯೆಗೆ ಬಂದಿದ್ದರು. ಆಗ ಆಕೆ, ತನ್ನ ತಂದೆ-ತಾಯಿಯ ಅಂತಿಮ ವಿಧಿವಿಧಾನಗಳನ್ನು ಸಹೋದರ ರೋಹನ್ ನೆರವೇರಿಸಬೇಕು. ಇದು ನಮ್ಮ ಪೋಷಕರು ಬಯಸಿದೆ ಎಂದು ಪೊಲೀಸರಿಗೆ ತಿಳಿಸಿದ್ದರು. ಜೊತೆಗೆ, ನ್ಯಾಯಾಲಯಕ್ಕೂ ಮನವಿ ಮಾಡಲಾಗಿತ್ತು. ಈ ಮನವಿಗೆ ಕೋರ್ಟ್ ಸಹಕರಿಸಿದ್ದು, ಹಂತಕ ರೋಹನ್ ಅವರಿಗೆ ಅಂತ್ಯಕ್ರಿಯೆ ನಡೆಸಲು ಅನುಮತಿ ನೀಡಿದೆ.

ನ್ಯಾಯಾಲಯದ ಅನುಮತಿ ಇದೆ ಎಚ್‌ಎಎಲ್‌ ನ್ಯಾಯಾಲಯ ಅಂತ್ಯಕ್ರಿಯೆಗೆ ರೋಹನ್‌ ಭಟ್‌ನನ್ನು ಕರೆಸಿದ್ದರು. ಆರೋಪಿ ರೋಹನ್‌ ಭಟ್‌, ವಿಲ್ಸನ್‌ಗಾರ್ಡನ್‌ ಚಿತಾಗಾರದಲ್ಲಿ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಿದರು. ಬಳಿಕ ಆರೋಪಿಯನ್ನು ಕರೆದೊಯ್ದರು.

ಸದ್ಯ ಆರೋಪಿ ರೋಹನ್ ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವುದು ಗೊತ್ತಾಗಿದೆ. ಕಳೆದ ಕೆಲಸದಿಂದ ಸ್ಕಿಜೋಫ್ರೇನಿಯಾದ ಎಂಬ ಮನೋ ಖಾಯಿಲೆಯಿಂದ ಬಳಲುತ್ತಿದ್ದ, ಚಿಕಿತ್ಸೆ ಸಹ ಪಡೆಯುತ್ತಿದ್ದಾನಂತೆ. ಇದೇ ಕಾರಣದಿಂದ ಹಿಂದೆ ವಿದೇಶದಿಂದ ಕೆಲಸ ತ್ಯಜಿಸಿ ವಾಪಾಸ್ ಬಂದು ಬೆಂಗಳೂರಿನಲ್ಲಿ ಅಪ್ಪ-ಅಮ್ಮನ ಜೊತೆ ನೆಲೆಸಿದ್ದನಂತೆ.

ಅದೇನೆ ಇರಲಿ-ತಾಯಿ ಕಳೆದಕೊಂಡ ಸಹೋದರಿ, ಒಂದೆಡೆ ಅಪ್ಪ-ಅಮ್ಮನ ಕಳೆದುಕೊಂಡಿದ್ರೆ, ಇತ್ತ ಸೋದರ ಜೈಲು ಸೇರಿರುವುದು ತಂದೆ ಕಂಗಲಾಗುವಂತೆ ಮಾಡಿದೆ.

ಘಟನೆ ಹಿನ್ನೆಲೆ

ಕಳೆದ ಬುಧವಾರ (ಫೆ.11)ರಂದು ಬೆಂಗಳೂರಿನ ಎಚ್‌ಎಎಲ್‌ ಬಳಿಯ ವಿಜ್ಞಾನಿ, ಮಗನಿಂದಲೇ ಆತನ ತಂದೆ-ತಾಯಿಯ ಹತ್ಯೆ ನಡೆದಿತ್ತು. ನಾಲ್ಕು ಲಕ್ಷ ರೂ. ಹಣಕಾಸಿನ ವಿಚಾರಕ್ಕೆ ರೋಹನ್ ಭಟ್ (33) ಎಂಬಾತ ತನ್ನ ಪೋಷಕರಾದ ನೌಕಾಪಡೆ ನಿವೃತ್ತ ಅಧಿಕಾರಿ ನವೀನ್ ಚಂದ್ರ ಭಟ್ ಮತ್ತು ತಾಯಿ ಡಾ. ಶ್ಯಾಮಲಾ ಭಟ್ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದ ನವೀನ್ ಚಂದ್ರ ಭಟ್ (60) ಭಾರತೀಯ ನೌಕಾಪಡೆಯಿಂದ ಕ್ಯಾಪ್ಟನ್ ಆಗಿ ಕೇವಲ ಆರು ವರ್ಷಗಳ ಹಿಂದಷ್ಟೇ ನಿವೃತ್ತಿ ಹೊಂದಿದ್ದರು. ಅವರ ಪತ್ನಿ ಡಾ. ಶ್ಯಾಮಲಾ ಭಟ್ ದಂತ ವೈದ್ಯೆಯಾಗಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *