Headlines

ಮದುವೆಗೆ ಆಮಂತ್ರಣ ಆರಂಭಿಸಿದ್ರಾ ವಿಜಯ್, ಸಿಎಂ ರೇವಂತ್ ಭೇಟಿ ಬೆನ್ನಲ್ಲೇ ಕುತೂಹಲ ಔಟ್

ಮದುವೆಗೆ ಆಮಂತ್ರಣ ಆರಂಭಿಸಿದ್ರಾ ವಿಜಯ್, ಸಿಎಂ ರೇವಂತ್ ಭೇಟಿ ಬೆನ್ನಲ್ಲೇ ಕುತೂಹಲ ಔಟ್



ಮದುವೆಗೆ ಆಮಂತ್ರಣ ಆರಂಭಿಸಿದ್ರಾ ವಿಜಯ್, ಸಿಎಂ ರೇವಂತ್ ಭೇಟಿ ಬೆನ್ನಲ್ಲೇ ಕುತೂಹಲ ಔಟ್
<p>ಮದುವೆಗೆ ಆಮಂತ್ರಣ ಆರಂಭಿಸಿದ್ರಾ ವಿಜಯ್, ಸಿಎಂ ರೇವಂತ್ ಭೇಟಿ ಬೆನ್ನಲ್ಲೇ ಕುತೂಹಲ ಔಟ್, ದೇವರಕೊಂಡ ಮುಖ್ಯಮಂತ್ರಿ ಭೇಟಿಯಾಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.</p><img>ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಫೆಬ್ರವರಿ 26 ರಂದು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಳೆದ ವರ್ಷವೇ ಇಬ್ಬರ ನಿಶ್ಚಿತಾರ್ಥ ನಡೆದಿದೆ ಎನ್ನಲಾಗಿದ್ದು, ಈ ವಿಷಯವನ್ನು ಗೌಪ್ಯವಾಗಿಡಲಾಗಿದೆ. ಅಧಿಕೃತ ಘೋಷಣೆ ಆಗದಿದ್ದರೂ, ಮದುವೆ ಸುದ್ದಿ ಮಾತ್ರ ಹರಿದಾಡುತ್ತಲೇ ಇದೆ.<img><p>ವಿಜಯ್ ದೇವರಕೊಂಡ ಇತ್ತೀಚೆಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿಯ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ವಿಜಯ್ ತಮ್ಮ ಮದುವೆಗೆ ಸಿಎಂ ರೇವಂತ್ ರೆಡ್ಡಿ ಅವರನ್ನು ಆಹ್ವಾನಿಸಲು ಭೇಟಿಯಾಗಿದ್ದಾರೆ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಭೇಟಿಯ ಅಧಿಕೃತ ಕಾರಣ ಇನ್ನೂ ಬಹಿರಂಗವಾಗಿಲ್ಲ.</p><img><p>ಸೋಶಿಯಲ್ ಮೀಡಿಯಾ ವರದಿಗಳ ಪ್ರಕಾರ, ಇದೇ ತಿಂಗಳು 26 ರಂದು ರಾಜಸ್ಥಾನದ ಉದಯಪುರ ಅರಮನೆಯಲ್ಲಿ ವಿಜಯ್-ರಶ್ಮಿಕಾ ವಿವಾಹ ಸಮಾರಂಭ ನಡೆಯಲಿದೆ. ಈಗಾಗಲೇ ಅದಕ್ಕೆ ಬೇಕಾದ ಸಿದ್ಧತೆಗಳು ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ತಮ್ಮ ಜೀವನದ ವಿಶೇಷ ಕಾರ್ಯಕ್ರಮಕ್ಕೆ ಹಾಜರಾಗಬೇಕೆಂದು ವಿಜಯ್ ದೇವರಕೊಂಡ ಸಿಎಂ ರೇವಂತ್ ರೆಡ್ಡಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ಮೂಲಕ ವಿಜಯ್ ಮದುವೆ ಆಮಂತ್ರಣ ಹಂಚುವ ಕಾರ್ಯಕ್ರಮ ಆರಂಭಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.</p><img><p>ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ ಎಂಬುದು ಹಲುವು ಬಾರಿ ಸುದ್ದಿಯಾಗಿದೆ. ಇದೀಗ ಈ ಜೋಡಿ ತಮ್ಮ ಸಂಬಂಧವನ್ನು ಮದುವೆಯ ಮೂಲಕ ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಿದ್ಧರಾಗಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಆದರೆ, ಈ ಬಗ್ಗೆ ಅಧಿಕೃತ ಘೋಷಣೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.</p>



Source link

Leave a Reply

Your email address will not be published. Required fields are marked *