Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 16ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 16ರ ದಿನಭವಿಷ್ಯ


Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 16ರ ದಿನಭವಿಷ್ಯ

ಚಂದ್ರಮೌಳೀಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನ ಮಾಡಿ. ತೆಂಗಿನಕಾಯಿ, ಬಾಳೆಹಣ್ಣು, ಊದಿನಕಡ್ಡಿ, ಕರ್ಪೂರ ಇತ್ಯಾದಿಗಳನ್ನು ತೆಗೆದುಕೊಂಡು ಹೋಗಿ ಅರ್ಪಣೆ ಮಾಡಿ. ಅಥವಾ ಮನೆಯಲ್ಲಿಯೇ ಚಂದ್ರಮೌಳೀಶ್ವರ ಸ್ವರೂಪದಲ್ಲಿ ನೆನಪಿಸಿಕೊಂಡು ಎಲ್ಲವನ್ನೂ ಅರ್ಪಿಸಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಪರ್ಸನಾಲಿಟಿ ಡೆವಲಪ್ ಮೆಂಟ್ ಸೆಷನ್‌ಗಳಲ್ಲಿ ಭಾಗವಹಿಸುವ ನಿರ್ಧಾರ ಮಾಡುತ್ತೀರಿ. ನಿಮ್ಮ ಉದ್ಯೋಗ- ವೃತ್ತಿ ಜೀವನದಲ್ಲಿನ ಬದಲಾವಣೆಗಳು ನಿಧಾನವಾದರೂ ಸ್ಥಿರವಾಗಿ ಆಗಲಿದೆ. ಮನಸ್ಸಿನಲ್ಲಿ ನಡೆಯುತ್ತಿರುವ ಗೊಂದಲಕ್ಕೆ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ. ಸಂಬಂಧಿತ ತಾಕಲಾಟಗಳಿಂದ ಹೊರಬರಲು ಸಾಧ್ಯವಾಗಲಿದೆ. ಹಳೆಯ ವಿಚಾರಗಳು ಮತ್ತೆ ನೆನಪಾಗಲಿವೆ, ಆದರೆ ಅವುಗಳಿಂದ ಪಾಠ ಕಲಿಯುವ ಸಮಯ ಇದು.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಕೆಲಸದ ವಿಷಯದಲ್ಲಿ ಅತಿಯಾದ ಆತುರ ಬೇಡ; ತಾಳ್ಮೆ ಮತ್ತು ಕ್ರಮಬದ್ಧತೆಯಿಂದ ಯಶಸ್ಸಿನ ದಾರಿ ತೆರೆದುಕೊಳ್ಳುತ್ತದೆ. ಕುಟುಂಬದ ಒಳಗೆ ಖರ್ಚಿನ ವಿಚಾರದಲ್ಲಿ ಸಣ್ಣ- ಪುಟ್ಟ ಮಾತುಕತೆಗಳು ಆದರೂ ಸಂಯಮದಿಂದ ವರ್ತಿಸಿದರೆ ಸಮಸ್ಯೆಗಳು ಪರಿಹಾರ ಆಗುತ್ತವೆ. ಆರ್ಥಿಕವಾಗಿ ಎಚ್ಚರಿಕೆಯ ನಿರ್ಧಾರ ತೆಗೆದುಕೊಳ್ಳಬೇಕು. ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯೇ ಈ ದಿನ ನಿಮ್ಮ ಶಕ್ತಿಯಾಗಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಕುಟುಂಬದೊಂದಿಗೆ ಉತ್ತಮವಾದ ಸಮಯವನ್ನು ಕಳೆಯುವ ಯೋಗವಿದೆ. ನಿಮ್ಮ ಆಲೋಚನೆಗಳು ಹೆಚ್ಚು ಘನವಾಗಿ ಇರುತ್ತವೆ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಎರಡು ಬಾರಿ ಯೋಚಿಸುವ ನಿಮ್ಮ ಗುಣ ನಿಮಗೆ ಲಾಭ ತರುತ್ತದೆ. ಕೆಲಸದಲ್ಲಿ ನಿಮ್ಮ ಸಾಮರ್ಥ್ಯವನ್ನು ಗಮನಿಸಿ, ಪ್ರಮುಖ ಜವಾಬ್ದಾರಿ ವಹಿಸುವ ಸೂಚನೆ ಸಿಗಲಿದೆ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *