Headlines

ಪ್ರಿನ್ಸಿಪಾಲ್ ವಾರ್ನಿಂಗ್ ಬೆನ್ನಲ್ಲೇ 10ನೇ ಕ್ಲಾಸ್ ಎಕ್ಸಾಂಗೆ ವೈಭವ್ ಸೂರ್ಯವಂಶಿ ಚಕ್ಕರ್! ಅಷ್ಟಕ್ಕೂ ಆಗಿದ್ದೇನು?

ಪ್ರಿನ್ಸಿಪಾಲ್ ವಾರ್ನಿಂಗ್ ಬೆನ್ನಲ್ಲೇ 10ನೇ ಕ್ಲಾಸ್ ಎಕ್ಸಾಂಗೆ ವೈಭವ್ ಸೂರ್ಯವಂಶಿ ಚಕ್ಕರ್! ಅಷ್ಟಕ್ಕೂ ಆಗಿದ್ದೇನು?

ಪ್ರಿನ್ಸಿಪಾಲ್ ವಾರ್ನಿಂಗ್ ಬೆನ್ನಲ್ಲೇ 10ನೇ ಕ್ಲಾಸ್ ಎಕ್ಸಾಂಗೆ ವೈಭವ್ ಸೂರ್ಯವಂಶಿ ಚಕ್ಕರ್! ಅಷ್ಟಕ್ಕೂ ಆಗಿದ್ದೇನು?

ಸಮಸ್ತಿಪುರ(ಬಿಹಾರ): ಭಾರತ ಅಂಡರ್-19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿ 10ನೇ ಕ್ಲಾಸ್ ಎಕ್ಸಾಂಗೆ ಚಕ್ಕರ್ ಹೊಡೆಯಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಯಾಕೆ ಹೀಗೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಡೀಟೈಲ್ಸ್

ಯುವ ಕ್ರಿಕೆಟಿಗ ವೈಭವ್‌ ಸೂರ್ಯವಂಶಿ ಈ ಬಾರಿ 10ನೇ ತರಗತಿ ಪರೀಕ್ಷೆ ಬರೆಯಲಿದ್ದಾರೆಂದು ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು. ಆದರೆ ತರಬೇತಿ, ಪಂದ್ಯಗಳ ಕಾರಣದಿಂದ ಅವರು ಪರೀಕ್ಷೆ ಬರೆಯಲ್ಲ ಎಂದು ವರದಿಯಾಗಿದೆ.

ಫೆ.17ರಿಂದ ವೈಭವ್‌ ಪರೀಕ್ಷೆ ಎದುರಿಸಬೇಕಾಗಿತ್ತು. ಫೆಬ್ರವರಿ 17ರಿಂದ ಮಾರ್ಚ್ 11ರವರೆಗೆ ಎಕ್ಸಾಂ ನಿಗದಿಯಾಗಿತ್ತು. ಈಗಾಗಲೇ ಅವರಿಗೆ ಪ್ರವೇಶ ಪತ್ರಿಕೆ, ಪರೀಕ್ಷಾ ಕೇಂದ್ರವನ್ನೂ ನಿಗದಿಪಡಿಸಲಾಗಿತ್ತು. ಎಡಗೈ ಬ್ಯಾಟರ್ ಇದೀಗ ಪರೀಕ್ಷೆಯಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದಾರೆ.

ವೈಭವ್ ಸೂರ್ಯವಂಶಿ ಅವರ ಎಕ್ಸಾಂ ಫಾರಂ ಭರ್ತಿ ಮಾಡಿದ್ದರು. ಇದರ ಜತೆಗೆ ಆಡ್ಮಿಷನ್ ಕಾರ್ಡ್ ಕೂಡಾ ಅವರಿಗೆ ತಲುಪಿಸಲಾಗಿದೆ. ಅವರು ಪೋದಾರ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಎಕ್ಸಾಂ ಬರೆಯಲು ಎಕ್ಸಾಂ ಸೆಂಟರ್ ಕೂಡಾ ನಿಗದಿಯಾಗಿತ್ತು ಎಂದು ಮಾಡೆಸ್ಟಿ ಸ್ಕೂಲ್‌ನ ಡೈರೆಕ್ಟರ್ ಆರ್ದಶ್ ಕುಮಾರ್ ಪಿಂಟೋ ಹೇಳಿದ್ದಾರೆ.

ಬಿಹಾರದ ಪೋದಾರ್‌ ಇಂಟರ್‌ನ್ಯಾಷನಲ್‌ ಶಾಲೆಯ ವಿದ್ಯಾರ್ಥಿಯಾಗಿರುವ ಕ್ರಿಕೆಟಿಗನ ಬಗ್ಗೆ ಪ್ರಾಂಶುಪಾಲ ನೀಲ್‌ ಕಿಶೋರ್‌ ಮಾತನಾಡಿದ್ದು, ‘ವೈಭವ್‌ಗೆ ಯಾವುದೇ ರೀತಿಯ ವಿಶೇಷ ಉಪಚಾರ(VIP ಟ್ರೀಟ್‌ಮೆಂಟ್) ಇರುವುದಿಲ್ಲ’ ಎಂದು ಖಡಕ್ ಎಚ್ಚರಿಕೆ ನೀಡಿದ್ದರು.

ಆದರೆ ವೈಭವ್‌ ಕೆಲ ಸಮಯಗಳಿಂದ ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಪಠ್ಯ ಅಭ್ಯಾಸದ ಕಡೆಗೆ ಹೆಚ್ಚಿಗೆ ಗಮನ ನೀಡುವುದಕ್ಕೆ ಸಾಧ್ಯವಾಗಿಲ್ಲ. ಹಾಗಾಗಿ ಪರೀಕ್ಷೆಗೆ ಗೈರಾಗುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ನಡೆದ ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಭಾರತ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಟೂರ್ನಿಯಲ್ಲಿ ಒಂದು ಶತಕ ಹಾಗೂ 3 ಅರ್ಧಶತಕ ಸಹಿತ 439 ರನ್ ಬಾರಿಸಿ ಸರಣಿಶ್ರೇಷ್ಠ ಪ್ರಶಸ್ತಿ ಜಯಿಸಿದ್ದರು. ಇದಷ್ಟೇ ಅಲ್ಲದೇ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಲು ವೈಭವ್ ರೆಡಿಯಾಗಿದ್ದಾರೆ.

Source link

Leave a Reply

Your email address will not be published. Required fields are marked *