Headlines

ಭಾರತ ವಿರುದ್ಧ ಸೋತರೂ ಪಾಕ್ ಅಪರೂಪದ ದಾಖಲೆ! ಸಯೀಮ್‌ಗೆ ಹ್ಯಾಟ್ರಿಕ್ ಜಸ್ಟ್ ಮಿಸ್!

ಭಾರತ ವಿರುದ್ಧ ಸೋತರೂ ಪಾಕ್ ಅಪರೂಪದ ದಾಖಲೆ! ಸಯೀಮ್‌ಗೆ ಹ್ಯಾಟ್ರಿಕ್ ಜಸ್ಟ್ ಮಿಸ್!

ಭಾರತ ವಿರುದ್ಧ ಸೋತರೂ ಪಾಕ್ ಅಪರೂಪದ ದಾಖಲೆ! ಸಯೀಮ್‌ಗೆ ಹ್ಯಾಟ್ರಿಕ್ ಜಸ್ಟ್ ಮಿಸ್!

ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಮ್ಯಾಚ್‌ನಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಇನ್ನು ಪಂದ್ಯದಲ್ಲಿ ಹೀನಾಯ ಸೋಲು ಕಂಡರೂ ಪಾಕಿಸ್ತಾನ ಬೌಲಿಂಗ್ ವಿಚಾರದಲ್ಲಿ ಹೊಸ ದಾಖಲೆ ಬರೆದಿದೆ. ಏನದು ನೋಡೋಣ ಬನ್ನಿ.

ಟಿ20 ವಿಶ್ವಕಪ್‌ನ ಭಾರತ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ ಸ್ಪಿನ್ ಬಲೆ ಹೆಣೆದು ವಿಶ್ವದಾಖಲೆ ಬರೆಯಿತು. ಪಂದ್ಯದಲ್ಲಿ ಆರು ಸ್ಪಿನ್ನರ್‌ಗಳು ಒಟ್ಟಾಗಿ ಪಾಕಿಸ್ತಾನದ ಪರ 18 ಓವರ್‌ಗಳನ್ನು ಬೌಲ್ ಮಾಡಿದರು. ನಾಯಕ ಸಲ್ಮಾನ್ ಅಲಿ ಅಘಾ, ಸಯೀಮ್ ಅಯೂಬ್, ಅಬ್ರಾರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್ ಮತ್ತು ಉಸ್ಮಾನ್ ತಾರಿಖ್ ಭಾರತದ ವಿರುದ್ಧ ಬೌಲ್ ಮಾಡಿದ ಪಾಕ್ ಸ್ಪಿನ್ನರ್‌ಗಳು.

ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ 18 ಓವರ್‌ಗಳನ್ನು ಸ್ಪಿನ್ನರ್‌ಗಳು ಬೌಲ್ ಮಾಡಿರುವುದು ಇದು ಎರಡನೇ ಬಾರಿ. 2012ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನವೇ ಈ ಸಾಧನೆ ಮಾಡಿತ್ತು. ಆಗ ಆಸ್ಟ್ರೇಲಿಯಾ ಎದುರಾಳಿಯಾಗಿತ್ತು.

ತಂಡದಲ್ಲಿದ್ದ ಏಕೈಕ ಪರಿಣತ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ. ಅವರು ಪಂದ್ಯದಲ್ಲಿ ಕೇವಲ ಎರಡು ಓವರ್‌ಗಳನ್ನು ಮಾತ್ರ ಬೌಲ್ ಮಾಡಿದರು.

ಪವರ್‌ಪ್ಲೇಯ ಮೊದಲ ಓವರ್ ಬೌಲ್ ಮಾಡಲು ಬಂದಿದ್ದು ಪಾಕ್ ನಾಯಕ ಸಲ್ಮಾನ್ ಅಘಾ. ಓವರ್‌ನ ಕೊನೆಯ ಎಸೆತದಲ್ಲಿ ಭಾರತೀಯ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರನ್ನು ಶೂನ್ಯಕ್ಕೆ ಔಟ್ ಮಾಡಿ ಅಘಾ ಭಾರತಕ್ಕೆ ಆಘಾತ ನೀಡಿದರು.

ಪಾಕಿಸ್ತಾನದ ಆರಂಭಿಕ ಆಟಗಾರ ಸಯೀಮ್ ಅಯೂಬ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. 4 ಓವರ್‌ಗಳಲ್ಲಿ 25 ರನ್ ನೀಡಿ ಇಶಾನ್ ಕಿಶನ್, ತಿಲಕ್ ವರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರ ನಿರ್ಣಾಯಕ ವಿಕೆಟ್‌ಗಳನ್ನು ಪಡೆದರು.

ತಿಲಕ್ ವರ್ಮಾ ವಿಕೆಟ್ ಬಳಿಕ ಬಂದ ಹಾರ್ದಿಕ್ ಪಾಂಡ್ಯರನ್ನು ಮೊದಲ ಎಸೆತದಲ್ಲೇ ಗೋಲ್ಡನ್ ಡಕ್ ಮಾಡಿ ಅಯೂಬ್ ಹ್ಯಾಟ್ರಿಕ್ ಸನಿಹಕ್ಕೆ ಬಂದರು. ಹ್ಯಾಟ್ರಿಕ್ ಎಸೆತವನ್ನು ಎದುರಿಸಿದ ಶಿವಂ ದುಬೆ ಸ್ವಲ್ಪದರಲ್ಲೇ ಬೌಲ್ಡ್ ಆಗುವುದರಿಂದ ಪಾರಾದರು.

ಪಂದ್ಯದಲ್ಲಿ ಪಾಕಿಸ್ತಾನದ ಏಕೈಕ ವೇಗಿ ಶಾಹೀನ್ ಶಾ ಅಫ್ರಿದಿ ದುಬಾರಿಯಾದರು. ಪವರ್‌ಪ್ಲೇಯಲ್ಲಿ ಅಫ್ರಿದಿ ಎಸೆದ ಎರಡನೇ ಓವರ್‌ನ ಮೊದಲ ಎಸೆತವನ್ನೇ ಕಿಶನ್ ಸಿಕ್ಸರ್‌ಗೆ ಅಟ್ಟಿದ್ದರು. ಎರಡು ಓವರ್‌ಗಳಲ್ಲಿ 31 ರನ್ ನೀಡಿ ಒಂದು ವಿಕೆಟ್ ಪಡೆದರು.

ಇನ್ನು ಪಾಕ್ ಸ್ಪಿನ್ನರ್ ಅಬ್ರಾರ್, ಮೂರು ಓವರ್‌ಗಳಲ್ಲಿ 38 ರನ್ ನೀಡಿ ಯಾವುದೇ ವಿಕೆಟ್ ಪಡೆಯಲು ಸಫಲರಾಗಲಿಲ್ಲ. ವಿವಾದಾತ್ಮಕ ಬೌಲಿಂಗ್ ಶೈಲಿಯಿಂದ ಗಮನ ಸೆಳೆದಿದ್ದ ಉಸ್ಮಾನ್ ತಾರಿಖ್ 4 ಓವರ್‌ಗಳಲ್ಲಿ 24 ರನ್ ನೀಡಿ 1 ವಿಕೆಟ್ ಪಡೆದರು.

Source link

Leave a Reply

Your email address will not be published. Required fields are marked *