ಒಡಿಶಾ, ಫೆಬ್ರವರಿ 16: ಪ್ರಾಣಿಗಳಿಗೆ ಕೀಟಲೆ ಕೊಡಲೇಬಾರದು ಆನೆಗಳ ತಂಟೆಗಂತೂ ಹೋಗಲೇಬೇಡಿ. ಒಡಿಶಾದಲ್ಲಿ ನಡೆದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೋಪಗೊಂಡ ಆನೆಯೊಂದು ಬಸ್ ಮೇಲೆ ದಾಳಿ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಸ್ ಮೇಲೆ ದಾಳಿ ನಡೆಸಿದ ಪರಿಣಾಮ ಬಸ್ಸಿನ ಮುಂಭಾಗದ ಗಾಜು ಪೂತರತಿಯಾಗಿ ಓಡಿದೆ. ಅದೇ ಸಮಯದಲ್ಲಿ ಆನೆಯ ಗಮನವನ್ನು ಬೇರೆಡೆಗೆ ಹರಿಸಿದ ಪರಿಣಾಮ ಅಲ್ಲಿಂದ ಹೋಗಿತ್ತು. ಈ ಘಟನೆ ಒಡಿಶಾ-ಆಂಧ್ರಪ್ರದೇಶ ಗಡಿ ಪ್ರದೇಶದಲ್ಲಿ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ