ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಇತ್ತೀಚೆಗೆ ‘ಫಿನೋ ಟೆಕ್ವಿಲಾ’ ಎಂಬ ದುಬಾರಿ ಮದ್ಯದ ಬ್ರ್ಯಾಂಡ್ ಲಾಂಚ್ ಮಾಡಿದ್ದಾರೆ. ಆದರೆ, ಮದ್ಯದ ಬ್ಯುಸಿನೆಸ್ ಮಾಡುತ್ತಿರುವ ಮೊದಲ ಕ್ರಿಕೆಟಿಗ ಯುವಿ ಅಲ್ಲ. ಅವರಿಗಿಂತ ಮುಂಚೆಯೇ ಹಲವು ಕ್ರಿಕೆಟಿಗರು ಈ ವ್ಯವಹಾರದಲ್ಲಿದ್ದಾರೆ.

ಕ್ರಿಕೆಟ್ ಜಗತ್ತಿನ ಹಲವು ಸ್ಟಾರ್ ಆಟಗಾರರು ಮೈದಾನದ ಹೊರಗೂ ಯಶಸ್ವಿ ಉದ್ಯಮಿಗಳಾಗಿದ್ದಾರೆ. ಇವರಲ್ಲಿ ಕೆಲವರು ಮದ್ಯದ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಐವರು ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ.

ಇಂಗ್ಲೆಂಡ್‌ನ ಮಾಜಿ ನಾಯಕ ಇಯಾನ್ ಬಾಥಮ್ ದೊಡ್ಡ ವೈನ್ ಕಂಪನಿಯೊಂದನ್ನು ನಡೆಸುತ್ತಿದ್ದಾರೆ. ಅವರು 2018ರಲ್ಲಿ ತಮ್ಮ ವೈನ್ ಬ್ಯುಸಿನೆಸ್ ಶುರು ಮಾಡಿದರು. ಅವರ ವೈನ್‌ಗಳು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್‌ನಲ್ಲಿ ಮಾರಾಟವಾಗುತ್ತವೆ.

ಆಸ್ಟ್ರೇಲಿಯಾದ ದಿಗ್ಗಜ ರಿಕಿ ಪಾಂಟಿಂಗ್ ಕೂಡ ವೈನ್ ಬ್ಯುಸಿನೆಸ್ ಮಾಡುತ್ತಾರೆ. ಅವರ ವೈನ್ ಬ್ರ್ಯಾಂಡ್ ಹೆಸರು ‘ಪಾಂಟಿಂಗ್ ವೈನ್ಸ್’. ಅವರ ವೈನ್ ಆಸ್ಟ್ರೇಲಿಯಾ ಮಾತ್ರವಲ್ಲದೆ, ಭಾರತದಲ್ಲೂ ಲಭ್ಯವಿದೆ. ಇದು ಅಲ್ಟ್ರಾ ಪ್ರೀಮಿಯಂ ರೆಡ್ ಮತ್ತು ವೈಟ್ ವೈನ್ ಆಗಿದೆ.

ಇಂಗ್ಲೆಂಡ್‌ನ ಮಾಜಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ವೈನ್ ಬ್ಯುಸಿನೆಸ್ ನಡೆಸುತ್ತಿದ್ದಾರೆ. ಅವರು 2015ರಲ್ಲಿ ತಮ್ಮದೇ ಆದ ವೈನ್ ಲೇಬಲ್ ಅನ್ನು ಲಾಂಚ್ ಮಾಡಿದ್ದರು. ಕಳೆದ ವರ್ಷ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ನಂತರ, ಅವರು ತಮ್ಮ ಬ್ಯುಸಿನೆಸ್‌ನಲ್ಲಿ ಸಕ್ರಿಯರಾಗಿದ್ದಾರೆ.

ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ವಿಸ್ಕಿ ಬ್ರ್ಯಾಂಡ್ ಒಂದರ ಮಾಲೀಕರಾಗಿದ್ದಾರೆ. ಅದರ ಹೆಸರು ‘ಡ್ರಾಮ್ ಬೆಲ್’. ಅವರು ಭಾರತದಲ್ಲಿ ‘ಆರ್ಡೆಂಟ್ ಅಲ್ಕೋಬೆವ್’ ಕಂಪನಿಯೊಂದಿಗೆ ಸೇರಿ ಈ ಮದ್ಯದ ವ್ಯವಹಾರ ಮಾಡುತ್ತಿದ್ದಾರೆ.

ಯುವರಾಜ್ ಸಿಂಗ್ ಗುರುಗ್ರಾಮದಲ್ಲಿ ‘ಫಿನೋ’ (FINO) ಎಂಬ ಅಲ್ಟ್ರಾ ಪ್ರೀಮಿಯಂ ಟೆಕ್ವಿಲಾ ಬ್ರ್ಯಾಂಡ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದ್ದಾರೆ. FINO ಅಂದರೆ ‘Failure Is Not an Option’ (ಸೋಲು ಒಂದು ಆಯ್ಕೆಯಲ್ಲ). ಈ ಮದ್ಯದ ಬೆಲೆ ₹14,000 ದಿಂದ ಶುರುವಾಗುತ್ತದೆ.

Source link
ಯುವಿಯಿಂದ ಪಾಂಟಿಂಗ್‌ವರೆಗೆ ಮದ್ಯದ ಬ್ಯುಸಿನೆಸ್ ನಡೆಸೋ ಟಾಪ್ 5 ದಿಗ್ಗಜ ಕ್ರಿಕೆಟಿಗರಿವರು! ಯುವಿ ಬ್ರ್ಯಾಂಡ್ ಯಾವುದು ಗೊತ್ತಾ?