ಹಾಸನದ ವಿದ್ಯಾನಗರ ಬಡಾವಣೆಯ ನಿವೇಶನ ಒತ್ತುವರಿ ಪ್ರಕರಣದಲ್ಲಿ, ಸ್ಯಾಂಡಲ್‌ವುಡ್ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್‌ಗೆ ತಾತ್ಕಾಲಿಕ ಮುನ್ನಡೆ ಸಿಕ್ಕಿದೆ. ಪ್ರಕರಣ ಇತ್ಯರ್ಥವಾಗುವವರೆಗೆ ವಿವಾದಿತ ನಿವೇಶನದ ಸ್ವರೂಪ ಬದಲಾಯಿಸದಂತೆ ಎರಡೂ ಕಕ್ಷಿದಾರರಿಗೆ ನಿರ್ಬಂಧ ವಿಧಿಸಲಾಗಿದೆ.

ಹಾಸನದ ವಿದ್ಯಾನಗರ ಬಡಾವಣೆಯಲ್ಲಿರುವ ನಿವೇಶನ ಒತ್ತುವರಿ ಪ್ರಕರಣ ಸಂಬಂಧ ಸ್ಯಾಂಡಲ್‌ವುಡ್‌ನ ಕೊತ್ತಲವಾಡಿ ಸಿನಿಮಾದ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್ ಮೊದಲ ಹಂತದ ಮುನ್ನಡೆ ಸಿಕ್ಕಿದೆ. ಈ ಹಿಂದೆ ನೀಡಿದ್ದ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವಂತೆ ಪುಷ್ಪಾ ಅರುಣ್‌ಕುಮಾರ್ ಹಾಸನದ 4 ನೇ ಜೆಎಂಎಫ್‌ಸಿ ಮೊರೆ ಹೋಗಿದ್ದರು.

ಕೋರ್ಟ್ ಮೂಲ ದಾವೆಯ ಆದೇಶ ಅನುಷ್ಠಾನಕ್ಕೆ ನ್ಯಾಯಾಲಯ ತಡೆ ನೀಡಿದೆ. ನಿವೇಶನದ ಮಾಲೀಕರು ಎಂದು ಹೇಳಲಾಗಿರುವ ಲಕ್ಷ್ಮಮ್ಮ ಅವರ ಜಿಪಿಎ ಹೋಲ್ಡರ್ ದೇವರಾಜು ಅವರು ಪುಷ್ಪಾ ಅರುಣ್ ಕುಮಾರ್ ಹಾಕಿದ್ದ ಕಾಂಪೌಂಡ್ ತೆರವುಗೊಳಿಸಿದ್ದರು. ಈ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿತ್ತು.

ತಮ್ಮನ್ನ ಕಕ್ಷಿದಾರರಾಗಿ ಪರಿಗಣಿಸದೆ ಆದೇಶ ಮಾಡಲಾಗಿದೆ ಎಂದು ಹೇಳಿಕೊಂಡಿದ್ದರು. ಕೋರ್ಟ್ ಆದೇಶ ಬಂದು 90 ದಿನದೊಳಗೆ ಮೇಲ್ಮನವಿ ಹಾಕದ ಬಗ್ಗೆ ಕೂಡ ಮಧ್ಯಂತರ ಅರ್ಜಿ ಹಾಕಿದ್ದರು. ವಿಳಂಬ ಅರ್ಜಿ ಮಾನ್ಯ ಮಾಡಿ ಪ್ರಕರಣದಲ್ಲಿ ಕಕ್ಷಿದಾರರಾಗಿ ಹಾಜರಾಗಲು ಅವಕಾಶಮ ನೀಡಲಾಗಿದೆ.

ಈಗ ದಾಖಲಾಗಿರೊ ದಾವೆ ಇತ್ಯರ್ಥ ಆಗೋವರೆಗೂ ಒಎಸ್ ನಂಬರ್ 672/2023 ರ ಆದೇಶ ಜಾರಿ ಅಥವಾ ಅನುಷ್ಠಾನಕ್ಕೆ ತಡೆ ನೀಡಿ ಫೆಬ್ರವರಿ 11 ರಂದು ಹಾಸನದ 4 ನೇ ಜೆಎಂಎಫ್ ಸಿ ಕೋರ್ಟ್ ಆದೇಶ ನೀಡಿದೆ. ಈ ಪ್ರಕರಣ ಇತ್ಯರ್ಥ ಆಗೋವರೆಗೆ ವಿವಾದಿತ ಶೆಡ್ಯೂಲ್ ಪ್ರಾಪರ್ಟಿಯನ್ನ ಪರಬಾರೆ ಅಥವಾ ಮೂಲ ಸ್ವರೂಪ ಬದಲಾವಣೆ ಮಾಡದಂತೆ ಅರ್ಜಿದಾರರಿಗೂ ನಿರ್ಬಂಧ ವಿಧಿಸಲಾಗಿದೆ. ಅರ್ಜಿಯನ್ನು ಫೆಬ್ರವರಿ 18ಕ್ಕೆ ಮುಂದೂಡಲಾಗಿದೆ.

ಇದನ್ನೂ ಓದಿ: ಹಾಸನ ನಿವೇಶನ ಗಲಾಟೆ; ಒಂದು ಹೆಜ್ಜೆ ಮುಂದಿಟ್ಟ ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್

ನ್ಯಾಯಾಲಯಕ್ಕೆ ಸೂಕ್ತ ದಾಖಲಾತಿಯನ್ನು ಪುಪ್ಪ ಅವರು ಒದಗಿಸಿಲ್ಲವಾದ್ದರಿಂದ ನಮ್ಮ ಪರ ತೀರ್ಪು ಬಂದಿದೆ. ಹಾಗಾಗಿ ನಾವು ನ್ಯಾಯಾಲಯದ ಅನುಮತಿಯಂತೆ ಅಕ್ರಮವಾಗಿ ಕಟ್ಟಿದ್ದ ಕಾಂಪೌಂಡ್ ತೆರವುಗೊಳಿಸಿದ್ದೇವೆ ಎಂದು ದೇವರಾಜು ಹೇಳಿದ್ದಾರೆ. ಸುಮಾರು ಒಂದೂವರೆ ಸಾವಿರ ಅಡಿ ಜಾಗದಲ್ಲಿ ಅಕ್ರಮವಾಗಿ ಕಾಂಪೌಂಡ್ ಹಾಕಿದ್ದಾರೆ ಎಂದು ದೇವರಾಜು ಆರೋಪಿಸಿದ್ದಾರೆ.

ಇದನ್ನೂ ಓದಿ: ಹಾಸನ: ಮನೆ ಕಾಂಪೌಂಡ್ ಒಡೆಸಿದ ಸ್ಥಳದಲ್ಲಿ ಮತ್ತೆ ಗೋಡೆ ಕಟ್ಟಿಸಲು ಮುಂದಾದ ಪುಷ್ಪಾ ಅರುಣ್ ಕುಮಾರ್!

Source link
ಹಾಸನ ನಿವೇಶನ ಒತ್ತುವರಿ ಪ್ರಕರಣ: ಪುಷ್ಪಾ ಅರುಣ್‌ಕುಮಾರ್‌ಗೆ ಮೊದಲ ಹಂತದ ಗೆಲುವು