
ಸ್ಮಾರ್ಟ್‌ಫೋನ್‌ನಲ್ಲಿ ಸದಾ ಬ್ಯುಸಿಯಾಗಿ ಓದದ ಪುಟ್ಟ ಮಗನಿಂದ ಬೇಸತ್ತ ತಾಯಿಯೊಬ್ಬರು, ತಮ್ಮ ಮಗನಿಗೆ ಓದದ ಹುಡುಗಿಯೊಂದಿಗೆ ಮದುವೆ ಮಾಡಿಸುವುದಾಗಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ತಮಾಷೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಓದದ ಮಗನಿಗೆ ಮದುವೆ ಮಾಡಿಸುವುದಾಗಿ ಹೇಳಿದ ತಾಯಿ:
ಇತ್ತೀಚೆಗೆ ಮಕ್ಕಳು ಓದುವುದಕ್ಕಿಂತ ಹೆಚ್ಚು ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯುಸಿಯಾಗಿರುತ್ತಾರೆ. ಪೋಷಕರು ಎಷ್ಟು ಹೇಳಿದರೂ ಅವರು ಆಚೆ ತಿರುಗುವಷ್ಟರಲ್ಲಿ ಮತ್ತೆ ಮಕ್ಕಳು ಮೊಬೈಲ್ ಹಿಡಿದುಕೊಳ್ಳುತ್ತಾರೆ. ಇತ್ತ ಶಾಲೆಗಳ ಶಿಕ್ಷಕರು ಪೋಷಕರ ವಾಟ್ಸಾಪ್‌ಗಳಿಗೆ ಹೋಮ್ ವರ್ಕ್‌ಗಳನ್ನು ಕಳುಹಿಸುವುದರಿಂದ ಪೋಷಕರಿಗೆ ಮಕ್ಕಳಿಗೆ ಮೊಬೈಲ್ ಕೊಡುವುದು ಅಲ್ಲ ಬಿಡುವುದಕ್ಕೂ ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಮೊದಲೆಲ್ಲಾ ಓದದೇ ಇರುವ ಮಕ್ಕಳಿಗೆ ಪೋಷಕರು ಮದ್ವೆ ಮಾಡಿಸುವುದಾಗಿ ಬೆದರಿಸುತ್ತಿದ್ದರು. ಆದರೆ ಈಗ ಓದದೇ ಇರೋರಿಗೆ ಬಿಡಿ ಓದ್ತಿರೋರಿಗೂ ಹುಡುಗಿ ಸಿಗಲ್ಲ. ಹೀಗಿರುವಾಗ ಓದದೇ ಸದಾ ಮೊಬೈಲ್ ನೋಡ್ತಾ ಕಾಲ ಕಳಿತಿದ್ದ ಬಾಲಕನೋರ್ವನ ತಾಯಿಯೊಬ್ಬರು ವೀಡಿಯೋ ಮಾಡಿದ್ದು, ವಿಡಿಯೋ ವೈರಲ್ ಆಗಿದೆ.
ವೀಡಿಯೋದಲ್ಲಿ ಇರೋದೇನು?
ಸಹೋದರ ನಿಮ್ಮ ಮಗಳು ಓದದೇ ಇದ್ದರೆ ದಯವಿಟ್ಟು ದುಃಖಿಸಬೇಡಿ, ನನ್ನ ಬಳಿಯೂ ಒಬ್ಬ ಹುಡುಗ ಇದ್ದಾನೆ. ಅವನು ಕೂಡ ಯಾವುದೇ ಕಾರಣಕ್ಕೂ ಓದುವುದಿಲ್ಲ, ಇಡೀ ದಿನ ಮೊಬೈಲ್ ನೋಡಿಕೊಂಡು ಕೂರುತ್ತಾನೆ. ಇಬ್ಬರು ಅನಕ್ಷರಸ್ಥ ಅನಕ್ಷರಸ್ಥರಿಗೆ ಮದುವೆ ಮಾಡಿಸೋಣ, ಯಾಕಂದ್ರೆ ಇವನು ಕೂಲಿ ಕೆಲಸ ಮಾಡುತ್ತಾನೆ. ಬಟ್ಟೆ ಪಾತ್ರೆ ತೊಳೆದು ಅಡುಗೆ ಮುಂತಾದ ಮನೆ ಕೆಲಸ ಮಾಡುತ್ತಾಳೆ. ಹೀಗೆ ಅವರ ಜೀವನ ನಡೆಯುತ್ತದೆ. ಹೀಗಾಗಿ ನಿಮ್ಮ ಮಗಳು ಓದದೇ ಇದ್ದರೆ ತಲೆಕೆಡಿಸಿಕೊಳ್ಳಬೇಡಿ. ಇವನನ್ನು ನೋಡಿ ಇಡೀ ದಿನ ಮೊಬೈಲ್ ನೋಡ್ತಾ ಕುಳಿತಿರುತ್ತಾನೆ. ನಿಮ್ಮ ಮಗಳು ಹಾಗೆಯೇ ಮಾಡಿದರೆ ಚಿಂತೆ ಮಾಡಬೇಡಿ. ನನ್ನನ್ನು ಸಂಪರ್ಕಿಸಿ, ನಿಮ್ಮ ಮಗಳು ದೊಡ್ಡವಳಾದರೆ ನನ್ನ ಮಗ ರೆಡಿ ಇದ್ದಾನೆ. ಥ್ಯಾಂಕ್ಯು ಎಂದು ಹೇಳಿ ಆ ಬಾಲಕನ ತಾಯಿ ವೀಡಿಯೋ ಮಾಡಿದ್ದು, ಈ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗ್ತಿದೆ.
ಇಂಟರ್‌ನೆಟ್‌ನಲ್ಲಿ ವೀಡಿಯೋ ಭಾರಿ ವೈರಲ್
ವೀಡಿಯೋ ನೋಡಿದವರು ಹಲವು ಕಾಮೆಂಟ್ ಮಾಡಿದ್ದಾರೆ. ಒಬ್ಬರು ನಿಮ್ಮ ಮಗನಿಗೆ ಎಷ್ಟು ವರ್ಷ ನನ್ನ ಮಗಳಿಗೆ ಎಷ್ಟು ವರ್ಷ ಎಂದು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಆ ಮಹಿಳೆ 9 ವರ್ಷ ಎಂದು ಹೇಳಿದ್ದಾರೆ. ಹಾಗಾದ್ರೆ ಈ ಸಂಬಂಧ ಪಕ್ಕಾ ನನಗೆ ವರದಕ್ಷಿಣೆ ಬೇಡ. ಅವರು ಜೊತೆಗಿರಲು ನಾವು ಒಂದಾಗಬೇಕು ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಆಧುನಿಕ ಸಮಸ್ಯೆಗೆ ಆಧುನಿಕ ಪರಿಹಾರ ಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಸಾವಲ್ಲೂ ಸಾರ್ಥಕತೆ: 10 ತಿಂಗಳ ಕಂದನಿಂದ 4 ಜನರಿಗೆ ಜೀವದಾನ
ಹಾಗೆಯೇ ಮತ್ತೊಬ್ಬರು ಕಾಮೆಂಟ್ ಮಾಡಿದ ನಾನು ಈ ರೀಲ್ಸ್‌ನ್ನು ನನ್ನ ಮಗಳಿಗೆ ತೋರಿಸಿದೆ. ಅಂಟಿಯ ಐಡಿ ಸೇವ್ ಮಾಡಿದ್ದೇನೆ ಹುಡುಗ ಫಿಕ್ಸ್ ಎಂದು ಹೇಳಿದೆ ಎಂದು ನಗುವ ಇಮೋಜಿಗಳನ್ನು ಹಾಕಿದ್ದಾರೆ. ಇವರಿಗೆ 36ಕ್ಕೆ 36 ಗುಣಗಳು ಮ್ಯಾಚ್ ಆಗುತ್ತದೆ ಈಗ ವರದಕ್ಷಿಣೆ ಬಗ್ಗೆ ಮಾತನಾಡಿ, ನಾನು ಎರಡು ಬಕೆಟ್, ಎರಡು ಪೊರಕೆ ನೀಡುತ್ತೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ. ಇದೊಂದು ಮಕ್ಕಳಿಗೆ ಓದಲು ಹೇಳಿ ಸುಸ್ತಾಗಿರುವ ಪೋಷಕರು ಮತ್ತು ನಾವು ಅವರನ್ನು ಓದಲು ಹೇಳುವ ಕಾರಣದ ಬಗ್ಗೆ ನಾನು ನೋಡಿದ ಅತ್ಯುತ್ತಮ ವೀಡಿಯೊಗಳಲ್ಲಿ ಇದು ಒಂದು. ಇದು ಭಾರತೀಯ ಅಮ್ಮನ ವಿಷಯ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಸಾಲಬಾಧೆ: ಅತ್ಯುತ್ತಮ ಕೃಷಿ ಪ್ರಶಸ್ತಿ ಗಳಿಸಿದ ರೈತ ಸಾವಿಗೆ ಶರಣು