Headlines

ರಾಮನಗರ: ಗ್ರಾಮ ಪಂಚಾಯಿತಿ ಸದಸ್ಯ ಅನುಮಾನಾಸ್ಪದವಾಗಿ ಸಾವು

ರಾಮನಗರ: ಗ್ರಾಮ ಪಂಚಾಯಿತಿ ಸದಸ್ಯ ಅನುಮಾನಾಸ್ಪದವಾಗಿ ಸಾವು


ರಾಮನಗರ, ಜೂನ್ 24: ರಾಮನಗರ (Ramnagar) ಜಿಲ್ಲೆ ಚನ್ನಪಟ್ಟಣ (Channapattana) ತಾಲೂಕಿನ ಮಾಕಳಿ ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್ (45) ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಬಯಲು ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರವೊಂದರ ಪಕ್ಕದಲ್ಲಿ ಲೋಕೇಶ್​ ಅವರ ಶವ ಪತ್ತೆಯಾಗಿದೆ. ಲೋಕೇಶ್ ಅವರ ಮೃತದೇಹದ ಬಳಿ ವಿಷದ ಬಾಟಲಿ ಪತ್ತೆಯಾಗಿದೆ. ಎಂ.ಕೆ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಅಪಘಾತದಲ್ಲಿ ಮಹಿಳೆಯರಿಬ್ಬರ ಸಾವು

ದೇವನಹಳ್ಳಿ: ಕಾರು ಡಿಕ್ಕಿಯಾಗಿ ಪಾದಚಾರಿ ಮಹಿಳೆಯರಿಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೊಮ್ಮವಾರ ಗ್ರಾಮದಲ್ಲಿ ನಡೆದಿದೆ. ತಿಮ್ಮಕ್ಕ (60), ಯಶೋಧಾ (33) ಮೃತದುರ್ದೈವಿಗಳು.

ತಿಮ್ಮಕ್ಕ ಮತ್ತು ಯಶೋಧಾ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ. ಹಿಂದಿನಿಂದ ವೇಗವಾಗಿ ಬಂದ ಇಟಿಯೋಸ್ ಕಾರು ಮಹಿಳೆಯರಿಗ ಗುದ್ದಿದೆ. ಮಹಿಳೆಯರಿಗೆ ಡಿಕ್ಕಿ ಹೊಡೆದು, ಬಳಿಕ ಕಾರು ಮನೆಯ ಕಾಂಪೌಂಡ್​ಗೆ ಗುದ್ದಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜು ಆಗಿದೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ. ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ

ಇದನ್ನೂ ಓದಿ: ರಾಮನಗರದಲ್ಲಿ ನಕಲಿ ಕ್ಲಿನಿಕ್​ಗಳ ಹಾವಳಿ: ನಕಲಿ ವೈದ್ಯನ ಚಿಕಿತ್ಸೆಯಿಂದ 6 ತಿಂಗಳ ಮಗು ಸಾವು

ಕಟ್ಟಡದಿಂದ ಬಿದ್ದು ಯುವತಿ ಸಾವು

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಯುವತಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಚೂಡಸಂದ್ರ ಬಳಿ ಸೋಮವಾರ (ಜೂ.23) ಸಂಜೆ ನಡೆದಿದೆ. ಆಂಧ್ರಪ್ರದೇಶ ಮೂಲದ ನಂದಿನಿ (23) ಮೃತ ದುರ್ದೈವಿ. ನಂದಿನಿ ನಿನ್ನೆ ಸ್ನೇಹಿತರ ಜೊತೆ ಕಟ್ಟಡದ ಮೇಲೆ ತೆರಳಿದ್ದರು. ಈ ವೇಳೆ ಆಯತಪ್ಪಿ ಕಟ್ಟಡದ ಮೇಲಿಂದ ಬಿದ್ದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪರಪ್ಪನ ಅಗ್ರಹಾರ ‌ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *