Headlines

ಕೊಪ್ಪಳ: ವಿದೇಶಿ ಮಹಿಳೆಯ ಅ*ತ್ಯಾ*ಚಾರ,ಕೊಲೆ ಪ್ರಕರಣ 3 ಆರೋಪಿಗಳಿಗೆ ಮರಣದಂಡನೆ, ಗಂಗಾವತಿ ಕೋರ್ಟ್ ಐತಿಹಾಸಿಕ ತೀರ್ಪು | Koppal Foreign Woman Murder Case Three Accused Sentenced To Death By Gangavathi Court

ಕೊಪ್ಪಳ: ವಿದೇಶಿ ಮಹಿಳೆಯ ಅ*ತ್ಯಾ*ಚಾರ,ಕೊಲೆ ಪ್ರಕರಣ 3 ಆರೋಪಿಗಳಿಗೆ ಮರಣದಂಡನೆ, ಗಂಗಾವತಿ ಕೋರ್ಟ್ ಐತಿಹಾಸಿಕ ತೀರ್ಪು | Koppal Foreign Woman Murder Case Three Accused Sentenced To Death By Gangavathi Court



ಕೊಪ್ಪಳ: ವಿದೇಶಿ ಮಹಿಳೆಯ ಅ*ತ್ಯಾ*ಚಾರ,ಕೊಲೆ ಪ್ರಕರಣ 3 ಆರೋಪಿಗಳಿಗೆ ಮರಣದಂಡನೆ, ಗಂಗಾವತಿ ಕೋರ್ಟ್ ಐತಿಹಾಸಿಕ ತೀರ್ಪು | Koppal Foreign Woman Murder Case Three Accused Sentenced To Death By Gangavathi Court

ಗಂಗಾವತಿ ತಾಲೂಕಿನ ಸಾಣಾಪೂರದಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾ*ಚಾರ ಮತ್ತು ಪ್ರವಾಸಿಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, 3 ಆರೋಪಿಗಳಿಗೆ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಘಟನೆ ನಡೆದ 9 ತಿಂಗಳೊಳಗೆ ನ್ಯಾಯಮೂರ್ತಿ  ಅವರು ಈ ಐತಿಹಾಸಿಕ ತೀರ್ಪು ನೀಡಿದ್ದಾರೆ.

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪೂರದಲ್ಲಿ ನಡೆದಿದ್ದ ವಿದೇಶಿ ಮಹಿಳೆ ಮೇಲಿನ ಅ*ತ್ಯಾ*ಚಾರ ಹಾಗೂ ದೇಶಿ ಪ್ರವಾಸಿಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳಿಗೆ ಮರಣದಂಡನೆ ವಿಧಿಸಲಾಗಿದೆ.

ಮೂವರು ಆರೋಪಿಳಿಗೂ ಮರಣ ದಂಡನೆ

ಮಲ್ಲೇಶ್ @ ಹಂದಿಮಲ್ಲ, ಸಾಯಿ ಹಾಗೂ ಶರಣಪ್ಪ ಎಂಬ ಮೂವರು ಆರೋಪಿಗಳು ಪ್ರಕರಣದಲ್ಲಿ ದೋಷಿಗಳೆಂದು ಈಗಾಗಲೇ ನ್ಯಾಯಾಲಯ ತೀರ್ಮಾನಿಸಿತ್ತು. ಇಂದು ಶಿಕ್ಷೆಯ ಪ್ರಮಾಣ ಘೋಷಣೆ ಮಾಡಿದ ನ್ಯಾಯಮೂರ್ತಿ ಸದಾನಂದ ನಾಗಪ್ಪ ನಾಯಕ್ ಅವರು ಮೂವರಿಗೂ ಮರಣದಂಡನೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಈ ಭೀಕರ ಘಟನೆ 2025ರ ಮಾರ್ಚ್ 6ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪೂರದಲ್ಲಿ ನಡೆದಿತ್ತು. ಇಸ್ರೇಲ್ ಮೂಲದ ವಿದೇಶಿ ಮಹಿಳೆ ಹಾಗೂ ಹೋಂ ಸ್ಟೇ ಮಾಲಕಿಯ ಮೇಲೆ ಅ*ತ್ಯಾ*ಚಾರ ನಡೆಸಲಾಗಿದ್ದು, ಈ ಪ್ರಕರಣದಲ್ಲಿ ಓರ್ವ ದೇಶಿ ಪ್ರವಾಸಿಗನನ್ನು ಕೂಡ ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಈ ಘಟನೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಘಟನೆಯ ಬಳಿಕ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮೂವರು ಆರೋಪಿಗಳ ವಿರುದ್ಧ ಅ*ತ್ಯಾ*ಚಾರ ಮತ್ತು ಕೊಲೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ವೇಗವಾಗಿ ನಡೆಸಿದ ಪೊಲೀಸರು ಸಮಗ್ರ ಸಾಕ್ಷ್ಯಾಧಾರಗಳೊಂದಿಗೆ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆಯ ವೇಳೆ ನ್ಯಾಯಾಲಯದಲ್ಲಿ ಆರೋಪಗಳೆಲ್ಲವೂ ಸಾಬೀತಾಗಿವೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಲಾಗಿತ್ತು.

ನ್ಯಾಯಮೂರ್ತಿ ಸದಾನಂದ ನಾಗಪ್ಪ ನಾಯಕ್ ಅವರಿಂದ ತೀರ್ಪು

ಇಂದು ಅಂತಿಮ ತೀರ್ಪು ಪ್ರಕಟಿಸಿದ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಪ್ರಕರಣ ನಡೆದು ಕೇವಲ 9 ತಿಂಗಳೊಳಗೆ ತೀರ್ಪು ನೀಡುವ ಮೂಲಕ ನ್ಯಾಯಾಂಗದ ದಕ್ಷತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ನ್ಯಾಯಮೂರ್ತಿ ಸದಾನಂದ ನಾಗಪ್ಪ ನಾಯಕ್ ಅವರು ತೀರ್ಪು ಪ್ರಕಟಿಸಿ, ಇಂತಹ ಕ್ರೂರ ಅಪರಾಧಗಳಿಗೆ ಸಮಾಜದಲ್ಲಿ ಯಾವುದೇ ಸ್ಥಳವಿಲ್ಲ ಎಂಬ ಬಲವಾದ ಸಂದೇಶವನ್ನು ನೀಡಿದರು. ವಿದೇಶಿ ಮಹಿಳೆಯ ಮೇಲಿನ ಅ*ತ್ಯಾ*ಚಾರ ಹಾಗೂ ನಿರಪರಾಧಿ ಯುವಕನ ಕೊಲೆ ಪ್ರಕರಣದಲ್ಲಿ ನ್ಯಾಯ ದೊರೆತಿದೆ ಎಂಬ ಭಾವನೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.



Source link

Leave a Reply

Your email address will not be published. Required fields are marked *