ಕೊಪ್ಪಳ, (ಫೆಬ್ರವರಿ 16): ಜಿಲ್ಲೆಯ ಸಮಸ್ಯೆ, ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲು ಕೆಡಿಪಿ ಸಭೆ ನಡೆಸಲಾಗುವುದು. ಆದರೆ, ಕೊಪ್ಪಳ ಜಿಲ್ಲಾ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಮೊಬೈಲ್ ನೋಡುತ್ತಾ, ನಿದ್ರೆ ಮಾಡುತ್ತಾ ಕಾಲಹರಣ ಮಾಡಿರುವುದು ಬೆಳಕಿಗೆ ಬಂದಿದೆ. ಇಂದು (ಫೆಬ್ರವರಿ 16) ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ನೇತೃತ್ವದಲ್ಲಿ ಆಡಳಿತ ಭವನದ ಜೆಹೆಚ್ ಪಟೇಲ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕೆಲ ಅಧಿಕಾರಿಗಳು ನಿದ್ರೆಗೆ ಜಾರಿದ್ರೆ, ಇನ್ನು ಕೆಲವರು ಮೊಬೈಲ್ ನೋಡುತ್ತಾ ಟೈಮ್ ಪಾಸ್ ಮಾಡಿದ್ದಾರೆ.