ಪ್ರೇಮಿಗಳ ದಿನದಂದೇ ಹರಿದ ನೆತ್ತರು: ಲವ್​ ಪ್ರಪೋಸಲ್​​ ಒಪ್ಪದಿದ್ದಕ್ಕೆ ಯುವತಿಗೆ ಇರಿದ ಪಾಗಲ್​​

ಪ್ರೇಮಿಗಳ ದಿನದಂದೇ ಹರಿದ ನೆತ್ತರು: ಲವ್​ ಪ್ರಪೋಸಲ್​​ ಒಪ್ಪದಿದ್ದಕ್ಕೆ ಯುವತಿಗೆ ಇರಿದ ಪಾಗಲ್​​


ಆಸ್ಪತ್ರೆಗೆ ದಾಖಲಾಗಿರುವ ಪಾಗಲ್ ಪ್ರೇಮಿಚಿತ್ರ ಕ್ರೆಡಿಟ್ ಮೂಲ: ಟಿವಿ9 ಕನ್ನಡ

ಶಿವಮೊಗ್ಗ, ಫೆಬ್ರವರಿ 16: ಲವ್ ಪ್ರಪೋಸಲ್ ಒಪ್ಪದಿದ್ದಕ್ಕೆ ಪಾಗಲ್ ಪ್ರೇಮಿಒಬ್ಬ ಯುವತಿಗೆ ಬಿಯರ್ ಬಾಟಲ್ ಚೂರಿನಿಂದ ಇರಿದಿರುವ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಆಲ್ಮನೆ ಗ್ರಾಮದಲ್ಲಿ ನಡೆದಿದೆ. ಪ್ರೇಮಿಗಳ ದಿನವಾದ ಫೆ.14ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿ ಯುವಕ ಸ್ವರೂಪ್ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಯುವಕ ಪ್ರೇಮಿಗಳ ದಿನಾಚರಣೆಯಂದು ಯುವತಿ ಬಳಿ ತನ್ನ ಪ್ರೇಮ ನಿವೇದನೆ ಮಾಡಿದ್ದ. ಆದರೆ ಯುವತಿ ಆತನ ಪ್ರಪೋಸಲ್ ಒಬ್ಬ ಕಾರಣ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಯುವತಿಯ ಕೈ ಮತ್ತು ಕುತ್ತಿಗೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದರೆ, ಆಕೆಗೆ ಪಟ್ಟಣದ ಜೆ.ಸಿ. ಆಸ್ಪತ್ರೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಮಣಿಪಾಲಕ್ಕೆ ರವಾನಿಸಲಾಗಿದೆ.

ಇದನ್ನೂ ಓದಿ: ಸೆಪ್ಟಿಕ್ ಟ್ಯಾಂಕ್ ನಲ್ಲಿದ್ದಿದ್ದು ಸಿಯಾಳ ಶವ, ಕೊಲೆ ಮಾಡಿದ್ದು ಆಕೆಯ ಪ್ರೇಮಿ, ಅಂತೂ ಪ್ರಕರಣ ಇತ್ಯರ್ಥ

ಯುವತಿ ಕಡೆಯವರಿಂದ ಯುವಕನ ಮೇಲೂ ಹಲ್ಲೆ

ಇನ್ನು ತನ್ನ ಪ್ರೀತಿ ಒಪ್ಪಿಕೊಂಡ ಯುವತಿಗೆ ಬಿಯರ್ ಬಾಟಲಿ ಚೂರಿನಿಂದ ಇರಿದ ವಿಚಾರ ಗೊತ್ತಾಗುತ್ತಿದ್ದಂತೆ ಇತ್ತ ಯುವಕನ ಮೇಲೂ ಹಲ್ಲೆ ನಡೆದಿದೆ. ಗಾಯಾಳು ಯುವತಿಯ ಕಡೆಯವರು ಸ್ವರೂಪ್ ಮೇಲೆ ಅಟ್ಯಾಕ್ ಮಾಡಿದ್ದು, ಘಟನೆಯಲ್ಲಿ ಆತನಿಗೂ ತಲೆ ಭಾಗ ಸೇರಿ ಕೆಲವೆಡೆ ಗಾಯನ ಮಾಡಲಾಯಿತು. ಗಾಯಾಳನ್ನು ನಗರದ ಜೆ.ಸಿ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *