ಹುಬ್ಬಳ್ಳಿಯ ಸಿದ್ದಾರೂಢರ ಮಹಾರಥೋತ್ಸವದಲ್ಲಿ ಭಕ್ತ ಸಾಗರ: ಎತ್ತ ನೋಡಿದ್ರೂ ಜನವೋ ಜನ

ಹುಬ್ಬಳ್ಳಿಯ ಸಿದ್ದಾರೂಢರ ಮಹಾರಥೋತ್ಸವದಲ್ಲಿ ಭಕ್ತ ಸಾಗರ: ಎತ್ತ ನೋಡಿದ್ರೂ ಜನವೋ ಜನ


ಹುಬ್ಬಳ್ಳಿ, ಫೆಬ್ರವರಿ 16: ಸುಪ್ರಸಿದ್ಧ ಸಿದ್ಧಾರೂಢರ ಮಹಾರಥೋತ್ಸವಕ್ಕೆ ಲಕ್ಷಾಂತರ ಭಕ್ತಾದಿಗಳು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದಾರೆ. ಎಷ್ಟು ನೋಡಿದರೂ ಜನ ಸಾಗರವೇ ಕಾಣುತ್ತಿದೆ, ಸುಮಾರು ಐದು ಲಕ್ಷ ಭಕ್ತರು ರಥೋತ್ಸವ ಕಣ್ತುಂಬಿಕೊಂಡಿದ್ದಾರೆ. ರಥೋತ್ಸವದ ವೇಳೆ ಉತ್ತುತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಣೆ ಮಾಡಿದ್ದರೂ, ಸಿದ್ದಾರೂಢ ಮಹರಾಜ ಕಿ ಜೈ ಎಂಬ ಘೋಷಣೆಗಳು ಭಕ್ತರಿಂದ ಮೊಳಗಿವೆ. ಮಹಾರಥೋತ್ಸವ ಹಿನ್ನೆಲೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಿಶೇಷ ಸೇವೆ ನಡೆದಿದ್ದು, ಭಕ್ತರಿಗೆ ನಿನ್ನೆ ಮತ್ತು ಇಂದು ಮುಂಜಾನೆ ಸೇರಿ ಒಂದು ಲಕ್ಷ ಸೆಟ್ ದೋಸೆ ವಿತರಿಸಲಾಯಿತು. ರಸ್ತೆಯ ಸಾರ್ವಜನಿಕ ಅನ್ನ ಪ್ರಸಾದ, ಮಜ್ಜಿಗೆ, ಹಣ್ಣುಗಳ ವಿತರಣೆ ಭರದಿಂದ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *