ಅಮೆರಿಕದ ಟ್ಯಾರಿಫ್ ಪರಿಣಾಮ ನಡುವೆಯೂ ಜನವರಿಯಲ್ಲಿ ಭಾರತದ ರಫ್ತು ಶೇ. 13.16 ಹೆಚ್ಚಳ

ಅಮೆರಿಕದ ಟ್ಯಾರಿಫ್ ಪರಿಣಾಮ ನಡುವೆಯೂ ಜನವರಿಯಲ್ಲಿ ಭಾರತದ ರಫ್ತು ಶೇ. 13.16 ಹೆಚ್ಚಳ


ನವದೆಹಲಿ, ಫೆಬ್ರುವರಿ 16: ಜನವರಿ ತಿಂಗಳಲ್ಲಿ ಭಾರತದ ಒಟ್ಟಾರೆ ಸರಕು ಮತ್ತು ಸೇವೆಗಳ ರಫ್ತು (ಭಾರತದ ಒಟ್ಟು ರಫ್ತು) 80.45 ಬಿಲಿಯನ್ ಡಾಲರ್ ಮೊತ್ತದಷ್ಟಿದೆ. ಕಳೆದ ವರ್ಷ (2025) ಜನವರಿಯಲ್ಲಿ 71.09 ಬಿಲಿಯನ್ ಡಾಲರ್ ರಫ್ತು ಇತ್ತು. ಅದಕ್ಕೆ ಈ ಬಾರಿ ಶೇ. 13.16ರಷ್ಟು ರಫ್ತು ತುಂಬಾ ಆಗಿದೆ. ಆದರೆ, ಆಮದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ. 76.48 ಬಿಲಿಯನ್ ಡಾಲರ್ ಇದ್ದದ್ದು 90.83 ಬಿಲಿಯನ್ ಡಾಲರ್‌ಗೆ ಏರಿದೆ. ಈ ಒಟ್ಟರೆ ವ್ಯಾಪಾರ ಅಂತರ ಅಥವಾ ಟ್ರೇಡ್ ಡೆಫಿಸಿಟ್ 5.39 ಬಿಲಿಯನ್ ಡಾಲರ್ ನಿಂದ 10.38 ಬಿಲಿಯನ್ ಡಾಲರ್ ಗೆ ಏರಿ.

ಸರಕುಗಳ ವ್ಯಾಪಾರ ಕೊರತೆ

ಜನವರಿಯಲ್ಲಿ ಸರಕುಗಳ ಟ್ರೇಡ್ ಡೆಫಿಸಿಟ್ 34.68 ಬಿಲಿಯನ್ ಡಾಲರ್ ಇದೆ. ಆರ್ಥಿಕ ತಜ್ಞರು 26 ಬಿಲಿಯನ್ ಡಾಲರ್ ಟ್ರೇಡ್ ಡೆಫಿಸಿಟ್ ನಿರೀಕ್ಷಿಸಿದ್ದರು. ಡಿಸೆಂಬರ್ ತಿಂಗಳ ಸರಕುಗಳ ಟ್ರೆಡ್ ಡೆಫಿಸಿಟ್ 25.04 ಬಿಲಿಯನ್ ಡಾಲರ್ ಇತ್ತು.

ಇದನ್ನೂ ಓದಿ: ಐದು ವರ್ಷದ ಐಟಿ ಉದ್ಯೋಗಗಳೇ ಇರೋದಿಲ್ಲ; ವಿನೋದ್ ಖೋಸ್ಲಾ ಏನಿಂದ ಭಾರತವೇನು ಮಾಡಬೇಕು?

ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಡಿಸೆಂಬರ್‌ನಲ್ಲಿ 38.51 ಬಿಲಿಯನ್ ಡಾಲರ್ ಇದ್ದ ಸರಕುಗಳು ರಫ್ತು ಜನವರಿಯಲ್ಲಿ 36.56 ಬಿಲಿಯನ್ ಡಾಲರ್‌ಗೆ ಇಳಿದಿದೆ. ಆದರೆ, ಹಿಂದಿನ ವರ್ಷದ ಜನವರಿಗೆ ಸರಕು ರಫ್ತು ತುಸು ಏರಿಕೆಯಾಗಿದೆ. ಇದ್ದರೆ, ಸರಕುಗಳ ಆಮದು 63.55 ಬಿಲಿಯನ್ ಡಾಲರ್‌ನಿಂದ 71.24 ಬಿಲಿಯನ್ ಡಾಲರ್‌ಗೆ ಏರಿದೆ. ಹೀಗಾಗಿ, ಸರಕುಗಳ ಟ್ರೇಡ್ ಡೆಫಿಸಿಟ್ ನಿರೀಕ್ಷೆಮೀರಿ ಹೆಚ್ಚಿದೆ. ಚಿನ್ನ ಮತ್ತು ಬೆಳ್ಳಿ ಆಮದು ಮೌಲ್ಯ ಹೆಚ್ಚಾಗಿರುವುದರಿಂದ ಒಟ್ಟಾರೆ ಸರಕು ಆಮದು ಏರಿಕೆ ಆಗಲು ಕಾರಣ.

ಭಾರತದ ಮೇಲೆ ಅಮೆರಿಕ ತನ್ನ ಟ್ಯಾರಿಫ್‌ಗಳನ್ನು ಈ ತಿಂಗಳು ಕಡಿಮೆ ಮಾಡಿದೆ. ಶೇ. 50ರಷ್ಟು ಇದ್ದ ಟ್ಯಾರಿಫ್ ಶೇ. 18ಕ್ಕೆ ಇಳಿಕೆಯಾಗಿದೆ. ಆದರೆ, ಜನವರಿಯಲ್ಲಿ ಶೇ. 50 ಟ್ಯಾರಿಫ್ ಕ್ರಮವೇ ಜಾರಿಯಲ್ಲಿದ್ದುದು. ಹೀಗಾಗಿ, ಅಧಿಕ ಟ್ಯಾರಿಫ್ ನಡುವೆಯೂ ಭಾರತದ ಸರಕುಗಳ ರಫ್ತು ತೀರಾ ಕುಸಿತ ಕಂಡಿಲ್ಲ ಎಂಬುದು ಗಮನಾರ್ಹ.

ಫೆಬ್ರುವರಿಯಲ್ಲಿ ಭಾರತಕ್ಕೆ ಅಮೆರಿಕದ ಟ್ಯಾರಿಫ್ ಶೇ. 25ರಷ್ಟು ಮಾತ್ರವೇ ಇರಲಿದೆ. ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಏರ್ಪಡಲಾಗಿದೆ ಟ್ಯಾರಿಫ್ ಶೇ. 18ಕ್ಕೆ ಇಳಿಕೆ ಆಗಬಹುದು. ಮಾರ್ಚ್ ತಿಂಗಳ ಒಪ್ಪಂದಕ್ಕೆ ಸಹಿ ಬೀಳಬಹುದು.

ಇದನ್ನೂ ಓದಿ: AI ಇಂಪ್ಯಾಕ್ಟ್ ಶೃಂಗಸಭೆ: ಜನಕಲ್ಯಾಣಕ್ಕೆ ಎಐ ಬಳಕೆ, ಇದು ಭಾರತಕ್ಕಿರುವ ಬದ್ಧತೆ: ಅಶ್ವಿನಿ ವೈಷ್ಣವ್

2026ರ ಜನವರಿಯಲ್ಲಿ ಭಾರತದ ರಫ್ತು ದತ್ತಾಂಶ

  • ಸರಕುಗಳ ರಫ್ತು: 36.56 ಬಿಲಿಯನ್ ಡಾಲರ್
  • ಸೇವೆಗಳ ರಫ್ತು: 43.90 ಬಿಲಿಯನ್ ಡಾಲರ್
  • ಒಟ್ಟಾರೆ ರಫ್ತು: 80.45 ಬಿಲಿಯನ್ ಡಾಲರ್
  • ಒಟ್ಟಾರೆ ಆಮದು: 90.83 ಬಿಲಿಯನ್ ಡಾಲರ್

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *