
ಭೋಪಾಲ್: ಶ್ರೀ ದೇವಿ, ಅನಿಲ್ ಕಪೂರ್ ಮತ್ತು ಊರ್ಮಿಳಾ ಮಾತೋಂಡ್ಕರ್ ಅಭಿನಯದ 90 ರ ದಶಕದ ಪ್ರಸಿದ್ಧ ಚಲನಚಿತ್ರ ಜುದಾಯಿ ಸಿನಿಮಾವನ್ನು ನೀವು ನೋಡಿದ್ದೀರಾ? ಇದೇ ಸಿನಿಮಾದ ಕತೆಯನ್ನೇ ಹೋಲುವ ಘಟನೆಯೊಂದು ಭೋಪಾಲ್‌ನ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದಿದೆ. ಹೌದು ಇಲ್ಲಿ ನಿರಂತರ ಕೌಟುಂಬಿಕ ಕಲಹದ ನಂತರ ಇಬ್ಬರು ಹೆಣ್ಣು ಮಕ್ಕಳ ತಾಯಿ, ತನ್ನ ಗಂಡನ ಪ್ರೇಯಸಿಯಿಂದ 1.5 ಕೋಟಿ ಹಣ ಪಡೆದು ಗಂಡನನ್ನು ಆಕೆಗೆ ಒಪ್ಪಿಸಿದ ಘಟನೆ ನಡೆಯಿತು. ಈ ಸಿನಿಮಾದ ಕನ್ನಡ ರಿಮೇಕ್‌ನಲ್ಲಿ ಶಿವರಾಜ್‌ಕುಮಾರ್ ಮಾಲಾಶ್ರೀ, ರವೀಂದರ್ ಮನ್ ನಟಿಸಿದ್ದಾರೆ. ಮೂಲತಃ ಈ ಸಿನಿಮಾವೂ ತೆಲುಗಿನ 1994ರ ಶುಭಲಗ್ನಂ ಸಿನಿಮಾದಾಗಿದ್ದು, ಇದು ಮುಂದೆ ಭಾರತದ ಹಲವು ಭಾಷೆಗಳಿಗೆ ರಿಮೇಕ್ ಆಯ್ತು.