ಬಾಗೇಪಲ್ಲಿ SN ಸುಬ್ಬಾರೆಡ್ಡಿ ಶಾಸಕ ಸ್ಥಾನ ಅಸಿಂಧುಗೊಳ್ಳಲು ಸ್ಫೋಟಕ ಕಾರಣ ಬಿಚ್ಚಿಟ್ಟ ಲಾಯರ್

ಬಾಗೇಪಲ್ಲಿ SN ಸುಬ್ಬಾರೆಡ್ಡಿ ಶಾಸಕ ಸ್ಥಾನ ಅಸಿಂಧುಗೊಳ್ಳಲು ಸ್ಫೋಟಕ ಕಾರಣ ಬಿಚ್ಚಿಟ್ಟ ಲಾಯರ್


ಬೆಂಗಳೂರು, (ಫೆಬ್ರವರಿ 16): ಬಾಗೇಪಲ್ಲಿ (ಬಾಗೇಪಲ್ಲಿ) ಕಾಂಗ್ರೆಸ್ (ಕಾಂಗ್ರೆಸ್) ಶಾಸಕ ಸುಬ್ಬಾರೆಡ್ಡಿಯವರ (ಸುಬ್ಬಾರೆಡ್ಡಿ) ಅವರ ಆಯ್ಕೆ ಶಾಸಕಅಸಿಂಧುಗೊಳಿಸಿ ಹೈಕೋರ್ಟ್ (ಹೈಕೋರ್ಟ್) ಆದೇಶ ಹೊರಡಿಸಿದೆ. ನಾಮಪತ್ರ ಸಲ್ಲಿಕೆ ವೇಳೆ ಸಂಪೂರ್ಣ ಆಸ್ತಿ ಘೋಷಣೆ ಮಾಡಿಲ್ಲ, ಕ್ರಿಮಿನಲ್ ಕೇಸ್‌ಗಳ ಮಾಹಿತಿ ಮರೆಮಾಚಿದ್ದಾರೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮುನಿರಾಜು ಅವರು 2023 ಜೂನ್ 24ರಂದು ಅರ್ಜಿ ಸಲ್ಲಿಸಿದ್ದರು. ಆಸ್ತಿ ವಿಚಾರಣೆ ವೇಳೆ ಆಸ್ತಿ ಉಲ್ಲಂಘನೆ ಮಾಡಿದ್ದು ದೃಢಪಟ್ಟ ಸುಬ್ಬಾರೆಡ್ಡಿ ಶಾಸಕ ಸ್ಥಾನವನ್ನು ಹೈಕೋರ್ಟ್ ಅಸಿಂಧುಗೊಳಿಸಿದೆ.

ಅಸಿಂಧುಗೊಳಿಸಲು ಕಾರಣ ತಿಳಿಸಿದ ಲಾಯರ್

ಇನ್ನು ಈ ಬಗ್ಗೆ ಟಿವಿ9ಗೆ ಹಿರಿಯ ವಕೀಲೆ ನಳೀನಿ ಮಾಯಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ, ಸುಬ್ಬಾರೆಡ್ಡಿ ಅವರು ಪ್ರಾಪರ್ಟಿ ಡಿಸ್ಲೋಸ್ ಮಾಡಿರಲಿಲ್ಲ. ಜಿಎಸ್ಟಿ ಫೈಲ್ ಮಾಡಿರಲಿಲ್ಲ. ಇದೇ ಕಾರಣಕ್ಕಾಗಿ ಸುಬ್ಬಾರೆಡ್ಡಿ ಅವರನ್ನ ಉಚ್ಚಾರಣೆ ಅಸಿಂಧು ಮಾಡಿದೆ. ಇದರ ಜೊತೆ ನನ್ನ ಶಾಸಕನಾಗಿ ಡಿಕ್ಲರೇಷನ್ ಕೊಡಿ ಎಂದು ಮುನಿರಾಜು ಅವರು ಕೇಳಿದರು. ಈಗ ಎರಡೂವರೆ ವರ್ಷ ವಾದ ಮಾಡಿ ಕೋರ್ಟ್ ಅಸಿಂಧು ಮಾಡಿದೆ. ಶಾಸಕರನ್ನ ಅನರ್ಹ ಮಾಡಿದೆ, ಈಗ ಅವರು ಶಾಸಕರು ಅಲ್ಲ. ಒಂದು ವೇಳೆ ಸುಬ್ಬಾರೆಡ್ಡಿ ಅವರು ಸುಪ್ರೀಂ ಕೋರ್ಟ್ ಗೆ ಹೋದ್ರೆ ಆದೇಶ ಸ್ಟೇ ಆಗಬಹುದು.

ಇದನ್ನೂ ಓದಿ: ಕಾಂಗ್ರೆಸ್ ಶಾಸಕರಿಗೆ ಬಿಗ್ ಶಾಕ್: ಶಾಸಕ ಸುಬ್ಬಾರೆಡ್ಡಿ ಅವರನ್ನು ಅಸಿಂಧುಗೊಳಿಸಿದರು

ಎರಡು ಕೋಟಿ ರೂ. ತೆರಿಗೆ ಕಟ್ಟಿಲ್ಲ

ನಾವು ಪ್ರಾಪರ್ಟಿ ಟ್ಯಾಕ್ಸ್ ಪೇ ಮಾಡಿ ಎಂದು ವಾದ ಮಾಡಿದ್ವಿ. ಹೋಟೆಲ್, ಲಿಕರ್ ಅಂಗಡಿಯ ಟ್ಯಾಕ್ಸ್ ಕಟ್ಟಿರಲಿಲ್ಲ. ಅದಕ್ಕೆ ದಾಖಲಾತಿ ಕೊಟ್ಟಿದ್ವಿ. ಜೊತೆ ಜಿಎಸ್ಟಿ ಕಟ್ಟಿರಲಿಲ್ಲ. ಅವರ ಹೆಂಡತಿ, ಪುತ್ರಿಯ ಪ್ರಾಪರ್ಟಿ ಬಹಿರಂಗ ಮಾಡಿರಲಿಲ್ಲ. ಸುಬ್ಬಾರೆಡ್ಡಿ ಅವರು ಸುಪ್ರೀಂ ಕೋರ್ಟ್ ಗೆ ಹೋದ್ರೂ ನಾವು ದಾಖಲೆ ಸಮೇತ ಹೋರಾಟ ನಡೆಯಲಿದೆ. ಎರಡು ಕೋಟಿ ರೂ. ತೆರಿಗೆ ಕಟ್ಟಿಲ್ಲ. ಶಾಸಕರೇ ಟ್ಯಾಕ್ಸ್ ಕಟ್ಟಿಲ್ಲ ಎಂದು ವಾದ ಮಾಡಿದ್ವಿ.ಕರಪ್ಟ್ ಶಾಸಕರನ್ನ ಮುಂದುವರಿಸೋಕೆ ಬಿಡಬಾರದು ಎಂದು ವಾದ ಮಾಡಿದ್ವಿ.

ಗೆಜೆಟ್ ನೋಟಿಫಿಕೇಷನ್ ಆದರೆ ಅನರ್ಹ

ಸುಪ್ರೀಂ ಕೋರ್ಟ್ ನವರು ಕೂಡ ನಮ್ಮ ವಾದಕ್ಕೆ ಅವರು ತೀರ್ಪು ಕೊಡಬಹುದು. ಇಲ್ಲಾಂದ್ರೆ ಹೊಸ ಚುನಾವಣೆಗೆ ಹೋಗಬಹುದು. ಮುನಿರಾಜು ಗೆಲುವು ಅಂತ ಕೋರ್ಟ್ ಹೇಳಿಲ್ಲ, ಇದಕ್ಕೆ ಕಾರಣವೂ ಕೊಟ್ಟಿಲ್ಲ. ಎರಡನೇ ಅತೀ ಹೆಚ್ಚು ಮತ ತೆಗೆದುಕೊಂಡಿದ್ದು ಮುನಿರಾಜು. ಅವರು ತೀರ್ಮಾನ ಮಾಡಿದ್ರೆ ಸುಪ್ರೀಂ ಕೋರ್ಟ್ ಗೆ ಹೋಗಬಹುದು. ಗೆಜೆಟ್ ನೋಟಿಫೀಕೇಷನ್ ಆಗಬೇಕು. ಪ್ರೆಸಿಡೆಂಟ್ ನಿಂದ ಅಪ್ರೊವಲ್ ಆಗಿ ಬರಬೇಕು. ಗೆಜೆಟ್ ನೋಟಿಫಿಕೇಷನ್ ಆದರೆ ಅನರ್ಹ ಎಂದು ಆದೇಶ ಬರುತ್ತದೆ ಎಂದು ಹಿರಿಯ ವಕೀಲೆ ನಳೀನಿ ಮಾಯಗೌಡ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *