ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಚಂದನ್ ಶೆಟ್ಟಿ ಅವರಿಂದ ವಿಚ್ಛೇದನ ಪಡೆದ ನಂತರ ಆರ್ಥಿಕವಾಗಿ ಸದೃಢಳಾಗಲು ಯಾವುದೇ ಪಾತ್ರಕ್ಕೂ ಸೈ ಎಂದಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ದಾಂಪತ್ಯ ಜೀವನದ ಬಗ್ಗೆ ಟಿಪ್ಸ್ ನೀಡಿರುವ ಅವರ ವಿಡಿಯೋ ವೈರಲ್ ಆಗಿದೆ.

Bigg Bossನಿಂದ ಫೇಮಸ್ ಆಗಿರೋ ನಿವೇದಿತಾ ಗೌಡ (Niveditha Gowda) ಮತ್ತು ಚಂದನ್ ಶೆಟ್ಟಿ ಅವರ ವಿಷ್ಯ ಎಲ್ಲರಿಗೂ ತಿಳಿದದ್ದೇ. . ಇನ್ನೂ ವಯಸ್ಸು 20 ಇರುವಾಗಲೇ ಬಿಗ್ಬಾಸ್ ಮನೆಯಲ್ಲಿ ಸಹ ಸ್ಪರ್ಧಿಯಾಗಿದ್ದ ಚಂದನ್ ಶೆಟ್ಟಿಯವರ ಲವ್ಗೆ ಬಿದ್ದು, ಮೈಸೂರು ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಿ ಹಲವರ ಕೆಂಗಣ್ಣಿಗೆ ಗುರಿಯಾಗುವುದರಿಂದ ಹಿಡಿದು, ಡಿವೋರ್ಸ್ ಪಡೆದಾಗಿನಿಂದ, ತುಂಡುಡುಗೆಯಲ್ಲಿ ರೀಲ್ಸ್ ಮಾಡುವ ಇಂದಿನವರೆಗೂ ನಿವೇದಿತಾ ಸದಾ ಸುದ್ದಿಯಲ್ಲಿರುವಾಕೆಯೇ.

ನಿವೇದಿತಾದ ಐಷಾರಾಮಿಯಾಗಿ ಬದುಕಲು ಬಯಸುವಾಕೆ, ತಮ್ಮದು ಸಿಂಪಲ್ ಲೈಫ್. ಹೀಗಾಗಿ ಒಂದು ಹಂತದಲ್ಲಿ ಹೊಂದಾಣಿಕೆ ಕಷ್ಟ ಆಯಿತು ಎಂದು ಚಂದನ್ ಶೆಟ್ಟಿ ಅವರು ಹೇಳಿಕೊಂಡಿದ್ದು ಉಂಟು. ಮದುವೆಯಾದ ಮೇಲೂ ನಾನು ನನ್ನ ದುಡ್ಡಿನಲ್ಲಿಯೇ ಖರ್ಚು ಮಾಡುತ್ತಿದ್ದೆ ಎಂದಿದ್ದ ನಿವೇದಿತಾ ಗೌಡ, ತಮಗೆ ಪಾಷ್ ಲೈಫ್ ಬೇಕು ಎನ್ನುವುದನ್ನು ಒಪ್ಪಿಕೊಂಡಿದ್ದರು.

ಆರ್ಥಿಕ ಸ್ವಾವಲಂಬಿಯಾಗಿ ಬದುಕಬೇಕು ಎನ್ನುವ ಗುರಿ ಇಟ್ಟುಕೊಂಡಿರುವ ನಿವೇದಿತಾ ಗೌಡ, ಇದಕ್ಕಾಗಿ ಈಗ ಯಾವ ಹಂತಕ್ಕಾದರೂ ಹೋಗಲು ರೆಡಿ ಇದ್ದಾರೆ. ಸಿನಿಮಾದಲ್ಲಿ ನಟನೆ ಮಾಡುವ ಆಸೆ ಇದೆ. ಅದು ಸಿಗದೇ ಹೋದರೆ ಐಟಂ ಸಾಂಗ್ ಆದ್ರೂ ಓಕೆ, ನನಗೆ ದುಡ್ಡು ಬೇಕು ಅರ್ಥಾತ್ Finacially strong ಆಗಬೇಕು. ಅದಕ್ಕಾಗಿ ನನಗೆ ಇಷ್ಟವಾದದ್ದನ್ನು ನಾನು ಏನು ಬೇಕಾದರೂ ಮಾಡಲು ಸೈ ಎಂದು ಧೈರ್ಯದಿಂದ ಹೇಳಿದ್ದಾರೆ ನಟಿ.

ಇಂತಿಪ್ಪ ನಟಿ, ಇದೀಗ ಸಂಗಾತಿಯನ್ನು ಹೇಗೆ ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಬಗ್ಗೆ ಸಂದರ್ಶನದಲ್ಲಿ ಟಿಪ್ಸ್ ಕೊಟ್ಟಿದ್ದಾರೆ. anything_about_eveything ಎನ್ನುವ ಸೋಷಿಯಲ್ ಮೀಡಿಯಾ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ನಿವೇದಿತಾ ಅವರು, ಸಂಗಾತಿಗೆ ಎಷ್ಟು ಗಂಟೆ ಮೀಸಲು ಇಡುತ್ತೇವೆ ಎನ್ನುವುದು ಮುಖ್ಯವಲ್ಲ. ಇಡುವ ಸಮಯವನ್ನು ಹೇಗೆ ಗುಣಮಟ್ಟದಲ್ಲಿ ಕಳೆಯುತ್ತೇವೆ ಎನ್ನುವುದು ಮುಖ್ಯ ಎಂದಿದ್ದಾರೆ.

24 ಗಂಟೆ ಅವರೊಟ್ಟಿಗೆ ಇರುವುದು ಮುಖ್ಯವಲ್ಲ, ಅರ್ಧ ಗಂಟೆ ಜೊತೆಯಾಗಿ ಇದ್ದರೂ ಗುಣಮಟ್ಟದ ಸಮಯ ನೀಡಬೇಕು. Quantity ಮುಖ್ಯವಲ್ಲ, Quality ಮುಖ್ಯ ಎಂದು ಹೇಳಿದ್ದಾರೆ. ಹೀಗೆ ಆದರೆ. ದಾಂಪತ್ಯ ಜೀವನ ಚೆನ್ನಾಗಿ ನಡೆದುಕೊಂಡು ಹೋಗುತ್ತದೆ ಎಂದಿದ್ದಾರೆ.

ನಿವೇದಿತಾ ಗೌಡ ಅವರ ಈ ಟಿಪ್ಸ್ ಕೇಳಿ ನೆಟ್ಟಿಗರು ಸುಸ್ತಾಗಿದ್ದಾರೆ. ಆಕೆ ಏನು ಹೇಳುತ್ತಿದ್ದಾಳೆ ಎನ್ನುವುದು ಅವಳಿಗೆ ಗೊತ್ತಾ ಎಂದು ಕೆಲವರು ಪ್ರಶ್ನಿಸಿದರೆ, ನಿನ್ನ ಬಾಯಿಯಿಂದ ಕಿವಿಮಾತು ಕೇಳಿ ಧನ್ಯನಾದೆ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಕನ್ನಡೇತರ ಚಾನೆಲ್ ಒಂದರಲ್ಲಿ ಕುಳಿತು ಇನ್‌ಸ್ಪಿರೇಷನ್ ಮಾತನಾಡ್ತಿರೋ ನಟಿಗೆ ದೊಡ್ಡ ನಮಸ್ಕಾರ ಹಾಕಿದ್ದಾರೆ ಕನ್ನಡದ ಜನತೆ!

Source link
ಸುಖಮಯ ದಾಂಪತ್ಯಕ್ಕೆ ಕ್ವಾಲಿಟಿ ಎಷ್ಟಿರಬೇಕು, ಹೇಗಿರಬೇಕು ಎಂದು ಟಿಪ್ಸ್ ಕೊಟ್ಟ Nivedita Gowda!