Avi Prasad ಮೂರನೇ ಬಾರಿ ಲಕ್ಕಿ, ಮೂರನೇ ಮದುವೆಯಲ್ಲೂ IAS ಅಫೀಸರ್ ಕೈಹಿಡಿದ IAS ಅಧಿಕಾರಿ ಅವಿ ಪ್ರಸಾದ್ | Meet The Ias Officer Avi Prasad Who Married 3 Ias Officers One After Another

Avi Prasad ಮೂರನೇ ಬಾರಿ ಲಕ್ಕಿ, ಮೂರನೇ ಮದುವೆಯಲ್ಲೂ IAS ಅಫೀಸರ್ ಕೈಹಿಡಿದ IAS ಅಧಿಕಾರಿ ಅವಿ ಪ್ರಸಾದ್ | Meet The Ias Officer Avi Prasad Who Married 3 Ias Officers One After Another



Avi Prasad ಮೂರನೇ ಬಾರಿ ಲಕ್ಕಿ, ಮೂರನೇ ಮದುವೆಯಲ್ಲೂ IAS ಅಫೀಸರ್ ಕೈಹಿಡಿದ IAS ಅಧಿಕಾರಿ ಅವಿ ಪ್ರಸಾದ್ | Meet The Ias Officer Avi Prasad Who Married 3 Ias Officers One After Another

ಮೂರನೇ ಬಾರಿ ಲಕ್ಕಿ, ಮೂರನೇ ಮದುವೆಯಲ್ಲೂ IAS ಅಫೀಸರ್ ಕೈಹಿಡಿದ IAS ಅಧಿಕಾರಿ ಅವಿ ಪ್ರಸಾದ್, ಇದು ಅದೃಷ್ಟವೋ ಅಥವಾ ಹಣೆಯಲ್ಲಿ ಬರೆದಿತ್ತೋ ಗೊತ್ತಿಲ್ಲ. ಆದರೆ ಈ IAS ಅಧಿಕಾರಿ 3 ಬಾರಿ ಮದುವೆಯಾಗಿದ್ದು IAS ಮಹಿಳಾ ಅಧಿಕಾರಿಗಳನ್ನೇ. 

ಇಂದೋರ್ (ಫೆ.16) ತಾಳಿ ಕಟ್ಟುವ ಶುಭ ವೇಳೆ, ಕೈಯಲ್ಲಿ ಹೂವಿನ ಮಾಲೆ, ಯಾರಿಗೆ ಯಾರೆಂದು ವಿಧಿ ಬರೆದಿರುವ ಎಂದೋ ಈ ಸಿನಿಮಾ ಹಾಡೋ ಬಹುತೇಕರು ಕೇಳಿದ್ದಾರೆ, ಆನಂದಿಸಿದ್ದಾರೆ. ಇಲ್ಲಿ ಮದುವೆ ಯಾರ ಜೊತೆ ಅನ್ನೋದು ವಿಧಿ ಬರೆದಿರುತ್ತೆ ಅನ್ನೋ ಮಾತಿದೆ. ಆದರೆ ಇಲ್ಲೊಂದು ಮದುವೆಯಲ್ಲಿ ವಿಧಿ ಇಷ್ಟೊಂದು ಪರ್ಫೆಕ್ಟ್ ಆಗಿ ಹೇಗೆ ಬರೆದಿದೆ ಅನ್ನೋ ಚರ್ಚೆಗಳು ಶುರುವಾಗಿದೆ. ಕಾರಣ ಐಎಸ್ ಅಧಿಕಾರಿ ಅವಿ ಪ್ರಸಾದ್ ಮೂರನೇ ಮದುವೆಯಾಗಿದ್ದಾರೆ. ಈ ಹಿಂದಿನ ಎರಡು ಮದುವೆ ಡಿವೋರ್ಸ್‌ನಲ್ಲಿ ಅಂತ್ಯಗೊಂಡಿದೆ. ಇದರಲ್ಲೇನು ವಿಶೇಷಾ ಅಂತೀರಾ? ಮೂರನೇ ಬಾರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವುದು ಮಹಿಳಾ ಐಎಎಸ್ ಅಧಿಕಾರಿ ಜೊತೆ ಅನ್ನೋದೇ ವಿಶೇಷ.

ಒಬ್ಬರ ಹಿಂದೆ ಮತ್ತೊಬ್ಬರಂತೆ ಮೂವರನ್ನು ಮದುವೆಯಾಗಿದ್ದಾರೆ. ಮೊದಲ ಪತ್ನಿ ಐಎಎಸ್ ಅಧಿಕಾರಿ, ಎರಡನೇ ಪತ್ನಿ ಐಎಎಸ್ ಅದಿಕಾರಿ, ಇದೀಗ ಮೂರನೇ ಪತ್ನಿ ಐಎಎಸ್ ಅಧಿಕಾರಿ. ಇದು ಹೇಗೆ ಸಾಧ್ಯ? ಎಂದು ಹಲವರು ಸೋಶಿಯಲ್ ಮೀಡಿಯಾ ಮೂಲಕ ಪ್ರಶ್ನಿಸುತ್ತಿದ್ದಾರೆ. ಹುಡುಕಿದ್ರೂ ಹೆಣ್ಣೇ ಸಿಗುತ್ತಿಲ್ಲದ ಕಾಲದಲ್ಲಿ ಒಂದರ ಹಿಂದೆ ಒಂದರಂತೆ ಐಎಎಸ್ ಮಹಿಳಾ ಅಧಿಕಾರಿಗಳನ್ನೇ ಮದುವೆಯಾಗಿದ್ದು ಹೇಗೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಅಂಕಿತಾ ಧಾಕ್ರೆ ಜೊತೆ ಮದುವೆ

ಮಧ್ಯಪ್ರದೇಶದ 2014ರ ಬ್ಯಾಚ್ ಐಎಎಸ್ ಅಧಿಕಾರಿ ಅವಿ ಪ್ರಸಾದ್ ಕುನೋ ನ್ಯಾಷನಲ್ ಪಾರ್ಕ್ ಬಳಿ ಮಂಟಪದಲ್ಲಿ ಅದ್ಧೂರಿಯಾಗಿ ಮೂರನೇ ಮದುವೆಯಾಗಿದ್ದಾರೆ. ಈ ಬಾರಿ 2017ರ ಐಎಎಸ್ ಬ್ಯಾಚ್ ಅಂಕಿತಾ ಧಾಕ್ರೆಯನ್ನು ವರಿಸಿದ್ದಾರೆ. ಅಂಕಿತಾ ಧಾಕ್ರೆ ಸದ್ಯ ಮಿನಿಸ್ಟ್ರಿ ಆಫ್ ಸ್ಟೇಟ್ ಅಡ್ಮಿಮಿನಿಸ್ಟ್ರೇಟ್ ಡೆಪ್ಯೂಟಿ ಸೆಕ್ರಟರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

2014ರಲ್ಲಿ ಐಎಎಸ್ ಸೇವೆಗೆ ಸೇರಿಕೊಂಡ ಅವಿ ಪ್ರಸಾದ್, ರಾಜಕೀಯ ಹಿನ್ನಲೆ ಕುಟುಂಬದಿಂದ ಆಗಮಿಸಿದ್ದಾರೆ. ಅವಿ ಪ್ರಸಾದ್ ತಾತ ತಂಬೇಶ್ವರ ಪ್ರಸಾದ್ ಅಲಿಯಾಸ್ ಬಚ್ಚು ಬಾಬು, ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಕ್ಯಾಬಿನೆಟ್‌ನಲ್ಲಿ ಸಚಿವರಾಗಿದ್ದರು.ಅವಿ ಪ್ರಸಾದ್ ‌ಗೆ ಪ್ರೀತಿ ಹುಟ್ಟಿದ್ದು ಮದುವೆಯಾಗಿದ್ದು ಎಲ್ಲವೂ ಐಎಎಸ್.

ಮೂವರು ಐಎಸ್ಎಸ್ ಮಹಿಳಾ ಅಧಿಕಾರಿಗಳು

ಅವಿ ಪ್ರಸಾದ್ ಮೊದಲು ಮದುವೆಯಾಗಿದ್ದು ಐಎಸ್ ಮಹಿಳಾ ಅದಿಕಾರಿ ರಿಜು ಬಫ್ನ. ಸದ್ಯ ಶಹಜಾಪುರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವೇ ವರ್ಷದಲ್ಲಿ ಈ ದಾಂಪತ್ಯ ಜೀವನ ಮುರಿದು ಬಿದ್ದಿತ್ತು. ಬಳಿಕ 2016ರಲ್ಲಿ ಐಎಎಸ್ ಮಹಿಳಾ ಅಧಿಕಾರಿ ಮಿಶಾ ಸಿಂಗ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನಾಲ್ಕು ವರ್ಷಗಳ ಬಳಿ ಡಿವೋರ್ಸ್ ಪಡೆದುಕೊಂಡರು. ಸದ್ಯ ಮಿಶಾ ಸಿಂಗ್ ರತ್ನಲಂ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಾರೆ. ಇದೀಗ ಮಹಿಳಾ ಐಎಎಸ್ ಅಧಿಕಾರಿ ಅಂಕಿತಾ ಧಾಕ್ರೆ ಜೊತೆ ಮೂರನೇ ಮದುವೆಯಾಗಿದ್ದಾರೆ.



Source link

Leave a Reply

Your email address will not be published. Required fields are marked *