upreme court on pre-marital relations ಮದ್ವೆಗೆ ಮುನ್ನ ಸೆಕ್ಸ್‌ ಬಗ್ಗೆ ಎಚ್ಚರ, ಯಾರನ್ನೂ ನಂಬಬೇಡಿ: ಸುಪ್ರೀಂ | Supreme Court Ruling Consensual Pre Marital Sx Intimate Based On Marriage Promise Isnt Always Rape

upreme court on pre-marital relations ಮದ್ವೆಗೆ ಮುನ್ನ ಸೆಕ್ಸ್‌ ಬಗ್ಗೆ ಎಚ್ಚರ, ಯಾರನ್ನೂ ನಂಬಬೇಡಿ: ಸುಪ್ರೀಂ | Supreme Court Ruling Consensual Pre Marital Sx Intimate Based On Marriage Promise Isnt Always Rape


Supreme court on pre-marital relations ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಮದುವೆಗೂ ಮುನ್ನ ಹುಡುಗ-ಹುಡುಗಿ ಅಪರಿಚಿತರಾಗಿದ್ದು, ದೈಹಿಕ ಸಂಬಂಧ ಬೆಳೆಸುವಾಗ ಎಚ್ಚರಿಕೆ ಎಂದ ಪೀಠ

ಹಳೇ ಕಾಲದ ಮಾತೆನಿಸಿದ್ರೂ ಇದೇ ವಾಸ್ತವ: ಪೀಠ

ನವದೆಹಲಿ (ಫೆ.17): ‘ಮದುವೆಯಾಗುವುದಕ್ಕೂ ಮುನ್ನ ಹುಡುಗ ಮತ್ತು ಹುಡುಗಿ ಪೂರ್ಣ ಅಪರಿಚಿತರಾಗಿರುತ್ತಾರೆ. ಆದ್ದರಿಂದ ದೈಹಿಕ ಸಂಬಂಧ ಬೆಳೆಸುವ ವೇಳೆ ಎಚ್ಚರಿಕೆಯಿಂದಿರಬೇಕು’ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ವಿವಾಹಿತನೆಂಬುದು ಮುಚ್ಚಿಟ್ಟು ಮತ್ತೊಂದು ಮದುವೆ

ತಾನು ವಿವಾಹಿತನೆಂಬುದನ್ನು ಮುಚ್ಚಿಟ್ಟು, ಮದುವೆಯಾಗುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಮಹಿಳೆಯೊಬ್ಬಳೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ನ್ಯಾ। ಬಿ.ವಿ. ನಾಗರತ್ನ ಹಾಗೂ ಉಜ್ಜಲ್‌ ಭುಯಾನ್‌ ಅವರ ಪೀಠ ನಡೆಸುತ್ತಿತ್ತು. ‘ಮದುವೆಯಾಗದೆ ಇರುವವರು ಒಬ್ಬರ ಪಾಲಿಗೊಬ್ಬರು ಅಪರಿಚಿತರು. ಆದ್ದರಿಂದ ಎಷ್ಟೇ ಆತ್ಮೀಯ ಸಂಬಂಧವಿದ್ದರೂ, ದೈಹಿಕ ಸಂಪರ್ಕ ಬೆಳೆಸುವ ಬಗ್ಗೆ ಎಚ್ಚರಿಕೆಯಿಂದಿರಬೇಕು. ಈ ಮಾತು ಹಳೆಯ ಕಾಲದ್ದೆನಿಸಿದರೂ ವಾಸ್ತವ’ ಎಂದು ಹೇಳಿದೆ.

ಆರೋಪಿಯನ್ನ ನಂಬಿ ದುಬೈಗೆ ಹೋಗುವುದು ಅಗತ್ಯವೇನಿತ್ತು?

ಜತೆಗೆ, ‘ಆರೋಪಿಯನ್ನು ನಂಬಿ ದೂರುದಾರೆ ದುಬೈಗೆ ಹೋಗುವ ಅಗತ್ಯವೇನಿತ್ತು? ಹೀಗಿರುವಾಗ ಅದನ್ನು ಒಪ್ಪಿತ ಕ್ರಿಯೆಯೆಂದು ಪರಿಗಣಿಸಲಾಗುವುದು. ಅದಕ್ಕೆ ವಿಚಾರಣೆ ಅಥವಾ ಶಿಕ್ಷೆಯ ಆವಶ್ಯಕತೆಯಿಲ್ಲ. ಆದ್ದರಿಂದ ಸಂತ್ರಸ್ತೆಗೆ ಸೂಕ್ತ ಪರಿಹಾರ ನೀಡಿ ಈ ಪ್ರಕರಣಕ್ಕೆ ಅಂತ್ಯ ಹಾಡಬಹುದು’ ಎಂದು ನಾಗರತ್ನ ಹೇಳಿದರು.

ಈಗಾಗಲೇ 2 ಮದುವೆಯಾಗಿರುವ ವ್ಯಕ್ತಿ ತನ್ನನ್ನೂ ವಿವಾಹವಾಗುವುದಾಗಿ ನಂಬಿಸಿ ದೆಹಲಿ ಮತ್ತು ದುಬೈನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ. ಅದರ ಚಿತ್ರೀಕರಣವನ್ನೂ ಮಾಡಿಟ್ಟುಕೊಂಡು ಬಹಿರಂಗಪಡಿಸುವುದಾಗಿ ಬೆದರಿಸುತ್ತಿದ್ದ ಎಂಬುದು ಮಹಿಳೆಯ ದೂರಾಗಿತ್ತು.

YouTube video player



Source link

Leave a Reply

Your email address will not be published. Required fields are marked *