ಹಾಸನದ ಪ್ರಿಯಾಂಕಾ, ಡೇವಿಡ್ ಎಂಬಾತನೊಂದಿಗೆ ಪರಾರಿಯಾಗಲು ತನ್ನದೇ ಕೊಲೆ ಮತ್ತು ದರೋಡೆಯ ನಾಟಕವಾಡಿದ್ದಳು. ಕೆರೆಯ ಬಳಿ ತನ್ನ ವಸ್ತುಗಳನ್ನಿಟ್ಟು ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದರೂ, ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಪೊಲೀಸರು ಆಕೆಯನ್ನು ಕುಣಿಗಲ್‌ನಲ್ಲಿ ಪತ್ತೆಹಚ್ಚಿದರು.
15
Image Credit : Asianet News
ಪ್ರಿಯಾಂಕಾ-ಡೇವಿಡ್ ಪ್ರಕರಣ
ಹಾಸನ-ತುಮಕೂರು ಜಿಲ್ಲೆಯ ಪ್ರಿಯಾಂಕಾ ಅಕ್ರಮ ಸಂಬಂಧ ಇಡೀ ರಾಜ್ಯದಲ್ಲಿಯೇ ಸಂಚಲನ ಸೃಷ್ಟಿಸಿತ್ತು. ಪ್ರಿಯಾಂಕಾ ಮಾಡಿದ್ದ ಡ್ರಾಮಾವೇ ಆಕೆಗೆ ಮುಳುವಾಗಿದೆ. ಆರಂಭದಲ್ಲಿ ಇದೊಂದು ಕೊಲೆ, ಆತ್ಯಾ*ಚಾರ, ದರೋಡೆ ಎಂದೇ ಬಿಂಬಿತವಾಗಿತ್ತು. ಅದರಲ್ಲಿಯೂ ಪ್ರಿಯಾಂಕಾ ಮನೆಯಿಂದ ಸುಮಾರು 30 ಲಕ್ಷ ಮೌಲ್ಯ ಚಿನ್ನಾಭರಣ ಧರಿಸಿ ದಿಢೀರ್ ನಾಪತ್ತೆಯಾಗಿದ್ದರಿಂದ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿತ್ತು.
25
Image Credit : Asianet News
ಬಿಹಾರಕ್ಕೆ ಹೋಗಲು ಪ್ಲಾನ್
ಪೊಲೀಸರು ದೂರು ದಾಖಲಿಸಿಕೊಳ್ಳಲು ಮತ್ತು ತನಿಖೆ ನಡೆಸಲು ವಿಳಂಬ ಮಾಡಿದ್ದಾರೆ ಎಂದು ಪ್ರಿಯಾಂಕಾ ಪೋಷಕರು ಗಂಭೀರ ಆರೋಪವನ್ನು ಮಾಡಿದ್ದರು. ತಾಳ್ಮೆಯಿಂದ ಎಲ್ಲವನ್ನು ಗಮನಿಸುತ್ತಿದ್ದ ಹಾಸನ ಮತ್ತು ಬೇಲೂರು ಠಾಣೆಯ ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿದ್ದರು. ಕೇವಲ 10 ಗಂಟೆಯಲ್ಲಿಯೇ ಪೊಲೀಸರು ಪ್ರಕರಣ ಇತ್ಯರ್ಥ ಮಾಡಿದ್ದರು. ಬಿಹಾರಗೆ ಹೊರಡಲು ರೆಡಿಯಾಗಿ ಮನೆಯಿಂದ ಹೊರಗೆ ಬರುವಷ್ಟರಲ್ಲಿ ಮುಂದೆ ಬಂದು ನಿಂತಿದ್ದ ಪೊಲೀಸರು.
35
Image Credit : Asianet News
ತನ್ನ ಕಥೆಯಲ್ಲಿಯೇ ಸಿಲುಕಿದ ಪ್ರಿಯಾಂಕಾ
ಹೌದು, ಪ್ರಿಯಾಂಕಾ ತನ್ನ ಕೊ*ಲೆಯಾಗಿದೆ ಎಂದು ಬಿಂಬಿಸಲು ಕೆರೆಯ ಬಳಿ ತನ್ನ ಉಡುಪು, ಬ್ಯಾಗ್ ಸೇರಿದಂತೆ ಕೆಲವು ವಸ್ತುಗಳನ್ನು ಇರಿಸಿದ್ದಳು. ಆರಂಭದಲ್ಲಿರದ ವಸ್ತುಗಳು ನಂತರ ಅಲ್ಲಿಗೆ ಬಂದಿದ್ದೇಗೆ ಎಂಬುದರ ಬಗ್ಗೆ ಅನುಮಾನ ಮೂಡಿತ್ತು. ಆದ್ರೂ ಮಲ್ಪೆಯಿಂದ ಮುಳುಗುತಜ್ಞರನ್ನು ಕರೆಸಿ ಕೆರೆಗೆ ಇಳಿಸಿ ಪರಿಶೀಲನೆ ನಡೆಸಲಾಗಿತ್ತು. ಹಾಗೆಯೇ ಅಗ್ನಿಶಾಮಕದಳದ ಸಿಬ್ಬಂದಿ ಸಹ ಬೋಟ್ ಮೂಲಕ ಕೆರೆಯ ಪರಿಶೀಲನೆ ನಡೆಸಿದ್ದರು. ಕೊನೆಗೆ ಡ್ರೋನ್ ಮೂಲಕ ಸುತ್ತಲಿನ ಪ್ರದೇಶದಲ್ಲಿಯೂ ಪೊಲೀಸರು ಹುಡುಕಾಟ ನಡೆಸಿದ್ದರು.
45
Image Credit : Asianet News
ಸಾಲು ಸಾಲು ಅನುಮಾನ
55
Image Credit : Asianet News