ಬೆಂಗಳೂರು, ಫೆಬ್ರವರಿ 17: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಇಂದು ರಾಹುಗ್ರಸ್ತ ಸೂರ್ಯಗ್ರಹಣ, ಏನೇನು ಮಾಡಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಇದು 2026 ರ ಮೊದಲ ಗ್ರಹಣವಾಗಿದ್ದು, ಕುಂಭ ರಾಶಿಯ ಧನಿಷ್ಠ ನಕ್ಷತ್ರದ ನಾಲ್ಕನೇ ಪಾದದಲ್ಲಿ. ಇದನ್ನು “ರಿಂಗ್ ಆಫ್ ಫೈರ್” ಎಂದೂ ಕರೆಯಲಾಗುತ್ತದೆ. ಭಾರತದಲ್ಲಿ ಗೋಚರಿಸದಿದ್ದರೂ, ಅಂಟಾರ್ಟಿಕಾ, ದಕ್ಷಿಣ ಅಮೆರಿಕ ಮತ್ತು ಆಫ್ರಿಕಾದಲ್ಲಿ ಗೋಚರಿಸಲಿದೆ.
ಈ ಗ್ರಹಣದ ಸಮಯದಲ್ಲಿ ಐದು ಗ್ರಹಗಳು (ರವಿ, ಬುಧ, ಶುಕ್ರ, ರಾಹು, ಚಂದ್ರ) ಒಂದೇ ಮನೆಯಲ್ಲಿ ಇರುವುದು ವಿಶೇಷ. ಕರ್ಕಾಟಕ, ಸಿಂಹ, ಮಕರ ಮತ್ತು ಕುಂಭ ರಾಶಿಯವರ ಮೇಲೆ ಪ್ರಭಾವ ಬೀರಬಹುದು. ಗ್ರಹಣದ ಸ್ಪರ್ಶಕಾಲ ಮಧ್ಯಾಹ್ನ 3:26, ಮಧ್ಯಮ ಕಾಲ 5:43 ಮತ್ತು ಮೋಕ್ಷಕಾಲ ರಾತ್ರಿ 7:57. ಈ ಸಮಯದಲ್ಲಿ ಮಂತ್ರ ಜಪ, ದಾನ ಮತ್ತು ಧ್ಯಾನ ಮಾಡುವುದು ಶುಭಕರ. ಗೋಧಿ, ಉದ್ದಿನಬೇಳೆ, ತಾಮ್ರ ದಾನ, ಸೂರ್ಯನ ಜಪ ಹಾಗೂ ಆದಿತ್ಯ ಹೃದಯ ಪಠಣವು ಉತ್ತಮ ಫಲವನ್ನು ನೀಡಿದೆ. ಮಾನಸಿಕ ಸಮತೋಲನ ಕಾಪಾಡಲು ಜಾಗರೂಕರಾಗಿರುವುದು ಮುಖ್ಯ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.