
Actress Namratha Gowda Love Gossip: ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿಗಳಾದ ನಮ್ರತಾ ಗೌಡ ಹಾಗೂ ಕಾರ್ತಿಕ್ ಮಹೇಶ್ ಅವರು ಲವ್ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಈ ಬಗ್ಗೆ ನಮ್ರತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ ಹಾಗೂ ಕಾರ್ತಿಕ್ ಮಹೇಶ್ ಲವ್ನಲ್ಲಿದ್ದಾರೆ ಎಂದು ಅನೇಕರು ಸಂಶಯದಲ್ಲಿದ್ದಾರೆ. ಆದರೆ ಇವರಿಬ್ಬರು ಮಾತ್ರ, ನಾವು ಫ್ರೆಂಡ್ಸ್ ಎಂದು ಹೇಳುತ್ತಲೇ ಇದ್ದಾರೆ. ಅಂದಹಾಗೆ ಈ ಬಗ್ಗೆ ಇವರು ಮಾಧ್ಯಮದ ಮುಂದೆ ಮಾತನಾಡುತ್ತಲೇ ಇರುತ್ತಾರೆ. ಈಗ ನಮ್ರತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಮೌನ ಮುರಿದಿದ್ದಾರೆ.
ಅನುಮಾನ ಹುಟ್ಟಿದ್ದು ಯಾಕೆ?
ಬಿಗ್ ಬಾಸ್ ಕನ್ನಡ ಸೀಸನ್ 10 ಶೋನಲ್ಲಿ ಭಾಗವಹಿಸಿದ್ದ ನಮ್ರತಾ ಗೌಡ ಹಾಗೂ ಕಾರ್ತಿಕ್ ಮಹೇಶ್ ಅವರು ಶೋ ಮುಗಿದಬಳಿಕ, ಇನ್ನಷ್ಟು ಸ್ನೇಹದಿಂದ ಇದ್ದರು. ನಮ್ರತಾ ಮನೆಯ ಕಾರ್ಯಕ್ರಮಗಳಿಗೆ ಕಾರ್ತಿಕ್ ಬಂದಿದ್ದರು, ಕಾರ್ತಿಕ್ ಮನೆಯ ಕಾರ್ಯಕ್ರಮಗಳಲ್ಲಿ ನಮ್ರತಾ ಇದ್ದರು. ಅಷ್ಟೇ ಅಲ್ಲದೆ ಕಾರ್ತಿಕ್ ಗ್ರ್ಯಾಂಡ್ ಬರ್ತಡೇಯಲ್ಲಿ ನಮ್ರತಾ ಭಾಗಿಯಾಗಿದ್ದರು, ಇದು ಅನೇಕರಿಗೆ ಸಂಶಯ ಮೂಡಿಸಿತ್ತು.
ನಾವಿಬ್ಬರು ಸ್ನೇಹಿತರು!
ಅಂದಹಾಗೆ ನಮ್ರತಾ ಗೌಡ ಹಾಗೂ ಕಾರ್ತಿಕ್ ಮಹೇಶ್ ಅವರು ಲವ್ನಲ್ಲಿದ್ದಾರೆ ಎಂಬ ಮಾತು ಕೇಳಿ ಬರುತ್ತಲೇ ಇತ್ತು. ಈ ಬಗ್ಗೆ ಪ್ರಶ್ನೆ ಮಾಡಿದಾಗ, “ಇವರಿಬ್ಬರು ನಾವು ಸ್ನೇಹಿತರು” ಎಂದು ಹೇಳುತ್ತಲೇ ಬಂದಿದ್ದರು.
ನಮ್ರತಾ ಗೌಡ ಲವ್ ಗಾಸಿಪ್ಗೆ ಪುಷ್ಠಿ ಸಿಕ್ಕಿತ್ತು!
ಆದರೆ ನಮ್ರತಾ ಹಾಗೂ ಕಾರ್ತಿಕ್ ಅವರು ಹಾಲಿಡೇ ಕಳೆಯುತ್ತಿದ್ದಾರೆ, ಕೆಫೆಗೆ ಹೋಗುತ್ತಾರೆ ಎಂದು ಹೇಳಲಾಗುವ ಪೋಸ್ಟ್ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿತ್ತು. ಇವರಿಬ್ಬರು ಸ್ಟ್ರಾಂಗ್ ಆಗಿ ನಮ್ಮ ಮಧ್ಯೆ ಏನೂ ಇಲ್ಲ, ಕೇವಲ ಸ್ನೇಹ ಇದೆ ಎಂದು ಹೇಳಿರಲಿಲ್ಲ, ಹೀಗಾಗಿ ಇನ್ನಷ್ಟು ಗಾಸಿಪ್ಗೆ ಪುಷ್ಠಿ ಸಿಕ್ಕಿತ್ತು. ಈಗ ನಮ್ರತಾ ಗೌಡ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ನಮ್ರತಾ ಗೌಡ ಏನು ಹೇಳಿದ್ರು?
“ನನ್ನ ರಿಲೇಶನ್ಶಿಪ್ ಸ್ಟೇಟಸ್, ಮದುವೆಯ ಬಗ್ಗೆ ಸಾಕಷ್ಟು ವದಂತಿ ಹರಡುತ್ತಿರೋದು ನಾನು ಗಮನಿಸುತ್ತಿದ್ದೇನೆ. ನಾನೊಂದು ಮಾತು ಹೇಳ್ತೀನಿ ಕೇಳಿ, ಒಂದು ವೇಳೆ ನಾನು ಮದುವೆಯಾಗುತ್ತಿದ್ದರೆ, ಈ ವಿಷಯವನ್ನು ಗುಟ್ಟಾಗಿಡಲು ನಾನೇ ತುಂಬಾ ಒತ್ತಡಕ್ಕೆ ಒಳಗಾಗುತ್ತಿದ್ದೆನು. ಆದರೆ ಮದುವೆ ಸೀರೆಗಾಗಿ ಹೊಸ ಬಣ್ಣವೊಂದನ್ನು ಸಂಶೋಧಿಸುತ್ತಿದ್ದಾರಂತೆ ಎಂದು ನಾನು ಕೇಳಲ್ಪಟ್ಟೆ, ಅದು ಮಾರ್ಕೆಟ್ಗೆ ಬರುವವರೆಗೆ ನಾನು ಇನ್ನು ಕೆಲವು ವರ್ಷ ಕಾಯಲಿದ್ದೇನೆ. ಇಷ್ಟೇ ನಾನು ಹೇಳೋಕೆ ಇರೋದು” ಎಂದು ನಟಿ ನಮ್ರತಾ ಗೌಡ ಅವರು ಸ್ಪಷ್ಟನೆ ನೀಡಿದ್ದಾರೆ.