Headlines

'ಸೆಲೆಬ್ರಿಟಿ ಕ್ರಿಕೆಟ್ ಟೂರ್ನಿ' ವೇಳೆ ನೀಚರಿಂದ ಶೌಚಾಲಯದಲ್ಲಿದ್ದ ನಟಿಯ ವಿಡಿಯೋ ರೆಕಾರ್ಡ್

'ಸೆಲೆಬ್ರಿಟಿ ಕ್ರಿಕೆಟ್ ಟೂರ್ನಿ' ವೇಳೆ ನೀಚರಿಂದ ಶೌಚಾಲಯದಲ್ಲಿದ್ದ ನಟಿಯ ವಿಡಿಯೋ ರೆಕಾರ್ಡ್

'ಸೆಲೆಬ್ರಿಟಿ ಕ್ರಿಕೆಟ್ ಟೂರ್ನಿ' ವೇಳೆ ನೀಚರಿಂದ ಶೌಚಾಲಯದಲ್ಲಿದ್ದ ನಟಿಯ ವಿಡಿಯೋ ರೆಕಾರ್ಡ್

ಬೆಂಗಳೂರಿನಲ್ಲಿ ನಡೆದ ಮಹಿಳಾ ಸೆಲೆಬ್ರಿಟಿ ಕ್ರಿಕೆಟ್ ಟೂರ್ನಿ ವೇಳೆ ನಟಿಯೊಬ್ಬರ ಶೌಚಾಲಯದ ವಿಡಿಯೋವನ್ನು ರಹಸ್ಯವಾಗಿ ಚಿತ್ರೀಕರಿಸಲಾಗಿದೆ. ಈ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದು, ನಟಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ಸೆಲೆಬ್ರಿಟಿ ಕ್ರಿಕೆಟ್ ಟೂರ್ನಿ ವೇಳೆ ಆಘಾತಕಾರಿ ಘಟನೆಯೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಟಿಯ ಶೌಚಾಲಯದ ವಿಡಿಯೋ ಮಾಡಿದ ನೀಚರು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಈ ಸಂಬಂಧ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇತ್ತೀಚೆಗಷ್ಟೆ ಬೆಂಗಳೂರಿನ ಕೋರಮಂಗಲದ ಸ್ಟೇಡಿಯಂನಲ್ಲಿ ಮಹಿಳಾ ಸೆಲೆಬ್ರಿಟಿ ಕ್ರಿಕೆಟ್ ಟೂರ್ನಿ ನಡೆದಿತ್ತು. ಈ ಟೂರ್ನಿಯಲ್ಲಿ ಚಂದನವನ ಮತ್ತು ಕಿರುತೆರೆ ನಟಿಯರು ಭಾಗಿಯಾಗಿದ್ದರು. ಸಂತ್ರಸ್ತೆ ನಟಿ ರಿಯಾಲಿಟಿ ಶೋವೊಂದರ ಸ್ಪರ್ಧಿಯಾಗಿದ್ದಾರೆ.

ಸಂತ್ರಸ್ತೆ ನಟಿ ವಾಶ್‌ ರೂಮ್‌ಗೆ ತೆರಳಿದ ಸಂದರ್ಭದಲ್ಲಿ ರಹಸ್ಯವಾಗಿ ವಿಡಿಯೋ ಮಾಡಲಾಗಿದೆ. ಸೆಲೆಬ್ರಿಟಿ ಕ್ರಿಕೆಟ್ ಟೂರ್ನಿ ಮುಗಿದ ಬಳಿಕ ನಟಿಯ ಆಪ್ತ ಗೆಳತಿಯ ಇನ್‌ಸ್ಟಾಗ್ರಾಂಗೆ ವಿಡಿಯೋ ಕಳುಹಿಸಲಾಗಿದೆ. ನಮ್ಮಲ್ಲಿ ಇದೇ ರೀತಿಯ ಮೂರ್ನಾಲ್ಕು ವಿಡಿಯೋಗಳಿದ್ದು, ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ನಟಿ, ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ಪೊಲೀಸರು ಬಿಎನ್‌ಎಸ್ ಸೆಕ್ಷನ್ 77, 351 ಮತ್ತು 308ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಅನಿಲ್ ಕಪೂರ್ ಯೌವನದ ಹಿಂದೆ ಅಡಗಿದ ಆ ಸಂಖ್ಯೆಯ ರಹಸ್ಯ!

ಈ ವಿಷಯ ತಿಳಿಯುತ್ತಿದ್ದಂತೆ ಚಂದನವನದ ಕಲಾವಿದರು ಆಘಾತಗೊಂಡಿದ್ದಾರೆ. ಪೊಲೀಸರು ಕೋರಮಂಗಲದಲ್ಲಿ ನಡೆದ ಟೂರ್ನಿಯ ವಿಡಿಯೋ ಮತ್ತು ಕ್ರೀಡಾಂಗಣದಲ್ಲಿರುವ ಎಲ್ಲಾ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಕೇಳಿದಷ್ಟು ಹಣ ನೀಡದಿದ್ರೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವ ಬೆದರಿಕೆಯನ್ನು ಹಾಕಿದ್ದಾನೆ.

ಇದನ್ನೂ ಓದಿ: Rajpal Yadav Bail: ಕೊನೆಗೂ ಹೋರಾಟಕ್ಕೆ ಫಲ; ನಟ ರಾಜ್‌ಪಾಲ್ ಯಾದವ್‌ಗೆ ಸಿಕ್ತು ಮಧ್ಯಂತರ ಜಾಮೀನು!

Source link

Leave a Reply

Your email address will not be published. Required fields are marked *