‘ಟಾಕ್ಸಿಕ್’ ಸಿನಿಮಾ ಟ್ರೈಲರ್ ಯಾವಾಗ? ಬಿಡುಗಡೆ ದಿನಾಂಕ ನಿಗದಿ

‘ಟಾಕ್ಸಿಕ್’ ಸಿನಿಮಾ ಟ್ರೈಲರ್ ಯಾವಾಗ? ಬಿಡುಗಡೆ ದಿನಾಂಕ ನಿಗದಿ


ಯಶ್ (ಯಶ್) ನಟನೆಯ ‘ಟಾಕ್ಸಿಕ್’ ಸಿನಿಮಾ ಪ್ರಸ್ತುತ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದ ಟೀಸರ್ ಜಾಗತಿಕ ಮಟ್ಟದಲ್ಲಿ ಹವಾ ಸೃಷ್ಟಿಸಿದೆ. ಕೆಲವು ವಾರಗಳ ಹಿಂದೆ ಬಿಡುಗಡೆ ಆಗಿದ್ದ ಟೀಸರ್ ಚರ್ಚೆಯಲ್ಲಿದೆ. ಈ ನಡುವೆ ಸಿನಿಮಾದ ಟ್ರೈಲರ್ ಬಿಡುಗಡೆಗೆ ಚಿತ್ರತಂಡ ಯೋಜನೆ ಹಾಕಿಕೊಂಡಿದ್ದು, ಟ್ರೈಲರ್ ಇನ್ನೂ ದೊಡ್ಡ ಟ್ರೆಂಡ್ ಸೃಷ್ಟಿಸುವ ಸಾಧ್ಯತೆ ಇದೆ. ಸಿನಿಮಾದ ಟ್ರೈಲರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ ಎನ್ನಲಾಗುತ್ತಿದೆ.

‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ಮಾರ್ಚ್ 19 ರಂದು ಆಗಲಿದೆ, ಸಿನಿಮಾದ ಬಿಡುಗಡೆಗೆ ಒಂದು ವಾರದ ಹಿಂದಷ್ಟೇ ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದೆ. ಮಾರ್ಚ್ ಮೊದಲ ವಾರದಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಯಾವಾಗ ಬಿಡುಗೆಡ ಆಗಿರುವ ಟೀಸರ್ ಗಿಂತಲೂ ಸಖತ್ ಪವರ್ ಫುಲ್ ಆಗಿರುತ್ತದೆಯಂತೆ ಸಿನಿಮಾದ ಟ್ರೈಲರ್.

‘ಟಾಕ್ಸಿಕ್’ ಸಿನಿಮಾದ ಹಕ್ಕುಗಳ ಮಾರಾಟ ಚಾಲ್ತಿಯಲ್ಲಿದ್ದು, ಆಂಧ್ರ-ತೆಲಂಗಾಣ, ಉತ್ತರ ಭಾರತ, ವಿದೇಶದ ಹಕ್ಕುಗಳು ಭಾರಿ ಮೊತ್ತಕ್ಕೆ ಮಾರಾಟವಾಗಿವೆ. ಆಂಧ್ರ-ತೆಲಂಗಾಣದಲ್ಲಂತೂ ‘ಟಾಕ್ಸಿಕ್’ ಸಿನಿಮಾ ಹಕ್ಕುಗಳು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಖ್ಯಾತ ನಿರ್ಮಾಪಕ ದಿಲ್ ರಾಜು ಅವರು ಸಿನಿಮಾದ ಹಕ್ಕುಗಳ ಖರೀದಿ ಮಾಡಿದ್ದಾರೆ.

ಇದನ್ನೂ ಓದಿ:ಸೈಟ್ ವಿವಾದ; ಯಶ್ ತಾಯಿ ಪುಷ್ಪಾಗೆ ಮೊದಲ ಹಂತದಲ್ಲಿ ಜಯ

‘ಟಾಕ್ಸಿಕ್’ ಸಿನಿಮಾದ ಪ್ರಚಾರವನ್ನು ಯಶ್ ಇನ್ನಷ್ಟೇ ಆರಂಭಿಸಬೇಕಿದೆ. ‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾದ ಪ್ರಚಾರಕ್ಕೆ ದೇಶವೆಲ್ಲ ಸಂಚರಿಸಿ ಬಹಳ ಸಕ್ರಿಯವಾಗಿ ಪ್ರಚಾರ ಮಾಡಿದ್ದರು ಯಶ್. ಆದರೆ ‘ಟಾಕ್ಸಿಕ್’ ಸಿನಿಮಾಕ್ಕೆ ಬೇರೆಯದೇ ಆದ ರೀತಿಯಲ್ಲಿ ಅನುಸರಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರಮುಖ ನಗರಗಳಲ್ಲಿ ದೊಡ್ಡ ಪ್ರೀ ರಿಲೀಸ್ ಆಯೋಜನೆ ಮಾಡಲಿದ್ದಾರೆ.

‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್ ಸಾಸ್ ನಿರ್ದೇಶನ ಮಾಡಿದ್ದು, ಸಿನಿಮಾದ ಕಥೆ ಯಶ್ ಅವರೂ ಸಹ ಬರೆದಿದ್ದಾರೆ. ಸಿನಿಮಾದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಅವರು ನಾಯಕಿಯರು ನಟಿಸಿದ್ದಾರೆ. ಯಶ್ ಅವರು ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *