ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ (ರಶ್ಮಿಕಾ ಮಂದಣ್ಣ) ಫೆಬ್ರವರಿ 26 ರಂದು ಮದುವೆ ಆಗೋದು ಖಚಿತವಾಗಿದೆ. ಉದಯಪುರದಲ್ಲಿ ಇವರ ವಿವಾಹ ನಡೆಯುತ್ತಿದೆ. ವಿವಾಹ ಆಮಂತ್ರಣದ ಫೋಟೋಗಳು ವೈರಲ್ ಆಗಿವೆ. ಹೀಗಿರುವಾಗಲೇ ಈ ಜೋಡಿ ಮದುವೆ ನಡೆಯೋ ಜಾಗದಲ್ಲಿ ಬಂದ ನಿಯಮದ ಬಗ್ಗೆ ಸುದ್ದಿ ಹರಿದಾಡಿದೆ. ಆ ಬಗ್ಗೆ ಇಲ್ಲಿದೆ ವಿವರ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆಯ ಸುಂದರ ಕ್ಷಣಗಳನ್ನು ಸೆರೆ ಹಿಡಿಯಲು ಟೀಂ ಒಂದನ್ನು ಆಯ್ಕೆ ಮಾಡಿದೆ. ಈ ತಂಡ ತಮ್ಮ ಕ್ಯಾಮೆರಾ ಮೂಲಕ ಫೋಟೋಗ್ರಫಿ ಹಾಗೂ ವಿಡಿಯೋಗ್ರಫಿ ಮಾಡಲಿದೆ. ಈ ಫೋಟೋಗನ್ನು ಎಲ್ಲಿಯೂ ರಿವೀಲ್ ಮತ್ತು ಹಂಚಿಕೊಳ್ಳುವುದಿಲ್ಲ ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ.
ಇನ್ನು, ವಿಜಯ್ ಮದುವೆಗೆ ಆಪ್ತರು ಹಾಗೂ ಸ್ನೇಹಿತರು ಮಾತ್ರ ಭಾಗಿ ಆಗಲಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ, ಅವರ್ಯಾರು ಮೊಬೈಲ್ ತರದಂತೆ ಕಠಿಣ ನಿಯಮವನ್ನು ಮಾಡಲಾಗಿದೆ. ಮದುವೆಗೆ ಬರೋ ಅತಿಥಿಗಳು ಮೊಬೈಲ್ ಅನ್ನು ತರಲಾಗಿದೆ. ಮೊಬೈಲ್ ಬಳಕೆ ತಡೆಯಲು ಚೆಕಿಂಗ್ ಇರುತ್ತದೆ. ವಿವಾಹ ನಡೆಯೋ ಜಾಗದಲ್ಲಿಯೂ ಈ ಬಗ್ಗೆ ಕಣ್ಣಿಡಲು ಜನರನ್ನು ನೇಮಿಸಲಾಗಿದೆ.
ಈ ರೀತಿಯ ಫೋಟೋ-ವಿಡಿಯೋ ಲೀಕ್ ಆಗದಂತೆ ನೋಡಿಕೊಳ್ಳುವುದು ರಶ್ಮಿಕಾ-ವಿಜಯ್‌ಗೆ ಇರೋ ದೊಡ್ಡ ಚಾಲೆಂಜ್. ಈ ಮೊದಲು ಕತ್ರಿನಾ ಕೈಫ್-ವಿಕ್ಕಿ ಕೌಶಲ್ ದಂಪತಿ, ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಕೂಡ ಮೊಬೈಲ್ ತರದಂತೆ ನಿಯಮ ತಂದಿದ್ದರು. ಆ ತಂತ್ರ ಕೆಲಸ ಮಾಡಿತ್ತು. ಈಗ ರಶ್ಮಿಕಾ-ವಿಜಯ್ ಕೂಡ ಇದೆ ಪಾಲಿಸಿ ಅಳವಡಿಸಿಕೊಳ್ಳುತ್ತಿದ್ದಾರೆ.
ಚಿತ್ರರಂಗದ ಯಾರನ್ನೂ ಮದುವೆಗೆ ಆಮಂತ್ರಿಸಿಲ್ಲ. ರಶ್ಮಿಕಾ ಮಂದಣ್ಣ ಅವರು ಹಲವು ಸೆಲೆಬ್ರಿಟಿಗಳ ಜೊತೆ ಕೆಲಸ ಮಾಡಿದ್ದಾರೆ. ಅವರೆಲ್ಲರನ್ನೂ ಹೈದರಾಬಾದ್‌ನ ಆರತಕ್ಷತೆಗೆ ಆಮಂತ್ರಿಸಲಾಗುತ್ತಿದೆ. ಮದುವೆ ಕೇವಲ ಆಪ್ತರ ಸಮ್ಮುಖದಲ್ಲಿ ನಡೆಯುತ್ತಿದೆ ಎಂಬುದು ವಿಶೇಷ.
ಇದನ್ನೂ ಓದಿ: ಮದುವೆಗೂ ಮುನ್ನ ಮ್ಯಾಚಿಂಗ್ ಡ್ರೆಸ್ ಹಾಕಿ ಮುಂಬೈನಿಂದ ಹಾರಿದ ವಿಜಯ್-ರಶ್ಮಿಕಾ
ವಿಜಯ್ ಹಾಗೂ ರಶ್ಮಿಕಾ ಅವರ ವಿವಾಹ ಆಮಂತ್ರಣ ಪತ್ರ ವೈರಲ್ ಆಗಿದೆ. ವಿವಾಹ ದಿನಾಂಕ ಫೆಬ್ರವರಿ 26 ಎಂದಿದೆ. ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ಇದೆ ಎಂಬ ಮಾಹಿತಿಯು ರಿವೀಲ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.