ಇಳಯರಾಜಗೆ ತಿರುಗುಬಾಣವಾದ ಕಾಪಿರೈಟ್ ಅಸ್ತ್ರ, ಶಾಕ್ ಕೊಟ್ಟ ಹೈಕೋರ್ಟ್

ಇಳಯರಾಜಗೆ ತಿರುಗುಬಾಣವಾದ ಕಾಪಿರೈಟ್ ಅಸ್ತ್ರ, ಶಾಕ್ ಕೊಟ್ಟ ಹೈಕೋರ್ಟ್


ಇಳಯರಾಜ (Ilayaraja) ಭಾರತದ ಲಿಜೆಂಡರಿ ಸಂಗೀತ ನಿರ್ದೇಶಕರುಗಳಲ್ಲಿ ಒಬ್ಬರು. ಹಲವಾರು ಅತ್ಯದ್ಭುತ ಹಾಡುಗಳನ್ನು ಇಳಯರಾಜ ಸಂಸ್ಥೆ. ಆದರೆ ಇತ್ತೀಚೆಗೆ ಇಳಯರಾಜ ಅವರು ತಮ್ಮ ಸಂಗೀತವನ್ನು ತಮ್ಮ ಕಾಪಿರೈಟ್ ಕೇಸುಗಳಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. ಒಂದರ ಹಿಂದೊಂದರಂತೆ ಇಳಯರಾಜ ಅವರು ಹಲವಾರು ಸಿನಿಮಾಗಳ ವಿರುದ್ಧ ಕಾಪಿರೈಟ್ ಕೇಸುಗಳನ್ನು ಹಾಕಿದ್ದಾರೆ. ಆದರೆ ಈಗ ಅದೇ ಕಾಪಿರೈಟ್ ಅಸ್ತ್ರ ಇಳಯರಾಜ ಅವರಿಗೆ ತಿರುಗುಬಾಣವಾಗಿದೆ.

ಇಳಯರಾಜ, ವಿರುದ್ಧ ಖ್ಯಾತ ಸಂಗೀತ ಸಂಸ್ಥೆ ಸಾರೆಗಾಮ ದೆಹಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿತ್ತು. ತಮ್ಮ ಒಡೆತನದಲ್ಲಿರುವ ಹಾಡುಗಳನ್ನು ಇಳಯರಾಜ ಅವರು ಅಮೆಜಾನ್ ಮ್ಯೂಸಿಕ್ಸ್, ಐಟ್ಯೂನ್ ಸೇರಿದಂತೆ ಬೇರೆ ಬೇರೆ ಸಂಸ್ಥೆಗಳಿಗೆ ಹಾಗೂ ಕೆಲವು ನಿರ್ಮಾಣ ಸಂಸ್ಥೆಗಳಿಗೆ ಮಾರಾಟ ಮಾಡಿದ್ದಾರೆ ಎಂದು ಸಾರೆಗಾಮ ದೂರು ದಾಖಲಿಸಿದ್ದರು.

ಸಾರೆಗಾಮದ ದೂರಿನ ವಿಚಾರಣೆ ನಡೆಸಿದ ದೆಹಲಿ, ಇಳಯರಾಜ ಅವರು ಸಾರೆಗಾಮದ ಓಡೆಯಲ್ಲಿರುವ 130 ಸಿನಿಮಾಗಳ ಹಾಡುಗಳ ಮೇಲೆ ಹಕ್ಕು ಹೊಂದಿರುವುದಿಲ್ಲ ಎಂದು ಆದೇಶ ನೀಡಿದೆ. ಯಾವುದೇ ಸಂಗೀತಕ್ಕೆ ಆ ಸಿನಿಮಾದ ಮೊದಲ ಹಕ್ಕುದಾರನಾಗುತ್ತಾನೆ, ಆತನಿಂದ ಹಕ್ಕು ಪಡೆದ ಸಂಗೀತ ಸಂಸ್ಥೆಗಳು ಸಹ ಹಕ್ಕುದಾರರಾಗುವ ಸಿನಿಮಾ. ಒಂದೊಮ್ಮೆ ಒಪ್ಪಂದ ಬೇರೆ ರೀತಿಯಲ್ಲಿ ಆಗಿದ್ದರೆ ಮಾತ್ರವೇ ಬೇರೆಯವರು ಹಕ್ಕುದಾರರಾಗಿರುತ್ತಾರೆ ಎಂದಿದೆ ನ್ಯಾಯಾಲಯ.

ಇದನ್ನೂ ಓದಿ:4.50 ಕೋಟಿ ಮೌಲ್ಯದ ವಜ್ರದ ಕಿರೀಟ ಕೊಟ್ಟ ಬಳಿಕ ಇಳಯರಾಜ ಮಾತು

ತಮಿಳು, ಹಿಂದಿ, ತೆಲುಗು, ಕನ್ನಡ, ಮಲಯಾಳಂನ 130 ಸಿನಿಮಾಗಳ ಮೇಲಿನ ಹಕ್ಕುಗಳನ್ನು ಇಳಯರಾಜ ಕಳೆದುಕೊಂಡಂತಾಗಿದೆ. ಇಳಯರಾಜ ಅವರು ಸಿನಿಮಾ ಹಾಡುಗಳನ್ನು ವಿವಿದ ಥರ್ಡ್ ಪಾರ್ಟಿ ಸಂಗೀತ ಅಪ್ಲಿಕೇಶನ್‌ಗಳಿಗೆ ತಮ್ಮ ಟೈಟಲ್ ಅಡಿಯಲ್ಲಿ ಹಾಡುಗಳನ್ನು ಮಾರಾಟ ಮಾಡಿದರು. ಆದರೆ ಈಗ ಸಾರೆಗಾಮದ ಕೇಸಿನಿಂದಾಗಿ ಇಳಯರಾಜ ಅವರು ಹಲವು ಹಾಡುಗಳ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ.

ಇಳಯರಾಜ ಅವರು ಕಳೆದ ಹಲವು ವರ್ಷಗಳಿಂದ ಹಲವಾರು ಸಿನಿಮಾಗಳು, ಗಾಯಕರುಗಳ ವಿರುದ್ಧ ಕಾಪಿರೈಟ್ ಪ್ರಕರಣಗಳು ದಾಖಲಾಗುತ್ತಿವೆ. ತಮ್ಮ ಆತ್ಮೀಯ ಗೆಳೆಯ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೂ ಸಹ ತಮ್ಮ ನಿರ್ದೇಶನದ ಹಾಡುಗಳನ್ನು ಲೈವ್ ಶೋನಲ್ಲಿ ಹಾಡದಂತೆ ನೋಟಿಸ್ ನೀಡಿದ್ದರು. ಇತ್ತೀಚೆಗೆ ‘ಮಂಜುಮೇಲ್ ಬಾಯ್ಸ್’, ‘ಡ್ಯೂಡ್’, ‘ಗುಡ್ ಬ್ಯಾಡ್ ಅಗ್ಲಿ’ ಇನ್ನೂ ಕೆಲವಾರು ಸಿನಿಮಾಗಳ ಮೇಲೆ ಕೇಸು ಹೂಡಿದ್ದಾರೆ. ಸೋನಿ ಮ್ಯೂಸಿಕ್, ಅಮೆಜಾನ್ ಮ್ಯೂಸಿಕ್, ಸಾರೆಗಾಮ ಇನ್ನೂ ಕೆಲವು ಸಂಸ್ಥೆಗಳ ಮೇಲೂ ಸಹ ಇಳಯರಾಜ ಅವರು ಕೇಸು ದಾಖಲಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *